ಮೆದೋಜೀರಕ ಕ್ಯಾನ್ಸರ್ (ಪ್ಯಾನ್ ಕ್ರಿಯಾಟಿಕ್ ಕ್ಯಾನ್ಸರ್)
(ಸಂಗ್ರಹ)
ಅರ್ಭುದ ರೋಗವೆಂದು ಕರೆಯಲ್ಪಡುವ ಕ್ಯಾನ್ಸರ್ ಎಂಬ ಕಾಯಿಲೆ ಮನುಷ್ಯನನ್ನು ಬಹಳ ಹಿಂದಿನಿಂದಲೂ ಕಾಡುತ್ತ ಬಂದಿದೆ. ಒಮ್ಮೆ ಕ್ಯಾನ್ಸರ್ ಎಂಬ ಕಾಯಿಲೆ ಮನುಷ್ಯನನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡರೆ ಅವನು ತನ್ನ ಬದುಕಿ ಉಳಿಯುವ ಆಸೆ ಬಹಳ ಮಟ್ಟಿಗೆ ಬಿಟ್ಟಂತೆಯೆ. ಮನುಷ್ಯನ ದೇಹದ ಮೇಲೆ ಆ ಕಾಯಿಲೆಯ ಹಿಡಿತ ಅಷ್ಟರ ಮಟ್ಟಿಗೆ ಬಿಗಿ, ಹಾಗಾಗೆ ಅದರ ಹಿಡಿತ ಏಡಿಯ ಹಿಡಿತ .
ದೇಹದ ಪ್ರತಿ ಅಗಾಂಶದ ಕೋಶಗಳು ಸಾಮಾನ್ಯವಾಗಿ ಹೊಸದಾಗಿ ಹುಟ್ಟುತ್ತಲೆ ಇರುತ್ತವೆ ಎನ್ನುವುದು ಪ್ರಕೃತಿ ನಿಯಮ. ಕೆಲವೊಮ್ಮೆ ಜೀವಕೋಶಗಳ ಈ ವಿಭಜನೆ ಅನಿಯಂತ್ರಿತವಾಗುತ್ತದೆ, ಹಾಗು ಇವು ಅಕ್ಕ ಪಕ್ಕದ ಅಂಗಾಂಶಗಳ ಮೇಲೆ ತಮ್ಮ ಪ್ರಭಾವ ಬೀರುತ್ತವೆ. ಅಲ್ಲದೆ ರಕ್ತ ಹಾಗು ಕೀವು ಗಾಯಗಳ ಮೂಲಕ ಅತಿವೇಗವಾಗಿ ಅಕ್ಕ ಪಕ್ಕದ ಅಂಗಗಳ ಮೇಲು ವ್ಯಾಪಿಸುತ್ತವೆ. ಕ್ಯಾನ್ಸರ್ ಗೆಡ್ಡೆಗಳಿಗೆ ಕಾರಣವಾಗುತ್ತವೆ. ಎಲ್ಲ ಕ್ಯಾನ್ಸರ್ ಬೆಳವಣಿಗೆಯಲ್ಲು ಕ್ಯಾನ್ಸರ್ ಗೆಡ್ಡೆಗಳು ಕಾಣಿಸುವದಿಲ್ಲ, ಉದಾಹರಣೆ: ರಕ್ತದ ಕ್ಯಾನ್ಸರ್ , ಇಲ್ಲಿ ಬಿಳಿರಕ್ತಕಣಗಳ ಅನಿಯಂತ್ರಿತ ಬೆಳವಣಿಗೆ ಇರುತ್ತದೆ. ಕ್ಯಾನ್ಸರ್ ಪೀಡಿತ ಅಂಗಾಂಶಗಳ ಚಿಕಿತ್ಸೆಯ ವಿಭಾಗವನ್ನು 'ಆಂಕಾಲಜಿ' ಎಂಬ ಹೆಸರಿನಿಂದ ಕರೆಯುತ್ತಾರೆ.
ಸಾಮಾನ್ಯವಾಗಿ ವಯಸ್ಸಾದವರಲ್ಲಿ ಕಾಣಿಸುವ ಕಾಯಿಲೆ ಇದಾದರು ಕೆಲವೊಮ್ಮೆ ಕಡಿಮೆ ವಯಸ್ಸಿನಲ್ಲಿಯು ತನ್ನ ಇರುವಿಕೆ ಪ್ರಕಟಿಸಬಹುದು. ಕಾಯಿಲೆಗೆ ಕಾರಣ ವಂಶವಾಹಿಯ ಅಂಗಾಂಶಕೋಶದಲ್ಲಿ ಅಸ್ವಾಭಾವಿಕ ಪರಿವರ್ತನೆ ಇರಬಹುದು ಕೆಲವೊಮ್ಮೆ ಹೊರಗಿನ ಪ್ರಭಾವ ಅಂದರೆ ತಂಬಾಕು ಸೇವನೆ ವಿಕಿರಣ ರಸಾಯನಿಕಗಳ ಪ್ರಭಾವಗಳು ಇರಬಹುದು. ಕ್ಯಾನ್ಸರ್ ಯಾವ ಹಂತದಲ್ಲಿದೆ ಅನ್ನುವ ನಿರ್ಣಯದ ಮೇಲೆ ಚಿಕಿತ್ಸೆ ನಡೆಯುತ್ತದೆ. ಸಾಮಾನ್ಯವಾಗಿ ರೆಡಿಯೋ ಥೆರಪಿಯಲ್ಲಿ ಹೊರಗಿನಿಂದ ರೆಡಿಯೊ ಆಕ್ಟೀವ್ ಕಿರಣಗಳ ಮೂಲಕ ಕ್ಯಾನ್ಸರ್ ಅಂಗಾಂಶಗಳನ್ನು ಕೋಶಗಳನ್ನು ಸುಡಲಾಗುತ್ತೆ, ಅಥವ ಕಿಮೋ ಥೆರೆಪಿಯ ಮೂಲಕ ಚಿಕಿತ್ಸೆ ಕೊಡಲಾಗುತ್ತದೆ. ಒಮ್ಮೆ ಕ್ಯಾನ್ಸರ್ ತನ್ನ ಸುತ್ತ ಮುತ್ತಲಿನ ಅಂಗಾಂಶಗಳ ಮೇಲು ತನ್ನ ಬೆಳವಣಿಗೆಯನ್ನು ವಿಸ್ತರಿಸಿದಾಗ ಶಸ್ತ್ರಚಿಕಿತ್ಸೆಯ ಮೂಲಕ ಕತ್ತರಿಸಿ ಹೆಚ್ಚುಬೆಳವಣಿಗೆಯ ಅಂಗಗಳನ್ನು (ಗೆಡ್ಡೆ) ತೆಗೆದು ಹಾಕಲಾಗುತ್ತದೆ. ನಿರ್ದಿಷ್ಟ ಅಂಗಗಳ ಮೇಲಿನ ಕ್ಯಾನ್ಸರ್ ಗೆ ನಿರ್ಧಿಷ್ಟ ಔಷದಿ ಉಪಚಾರಗಳ ವರ್ಗೀಕರಣ ಸಂಶೋದನೆಯ ಹಂತದಲ್ಲಿದೆ.
ಕ್ಯಾನ್ಸರ್ ನಲ್ಲಿ ಗುರುತಿಸಿರುವ ವಿವಿದ ವರ್ಗೀಕರಣಗಳು ಸುಮಾರು ಎರಡುನೂರಕ್ಕು ಹೆಚ್ಚು ವಿದಗಳು. ದೇಹದ ವಿವಿದ ಅಂಗಗಳ ಮೇಲೆ ದಾಳಿ ಇಡುವ ಕ್ಯಾನ್ಸರ್ ಕಣಗಳ ಹಾಗು ಅಂಗಗಳ ವೈವಿದ್ಯತೆಯ ಮೇರೆಗೆ ಈ ವರ್ಗೀಕರಣವನ್ನು ಮಾಡಲಾಗಿದೆ.
ಮೆದೋಜೀರಕ ಕ್ಯಾನ್ಸರ್ (ಪ್ಯಾನ್ ಕ್ರಿಯಾಟಿಕ್ ಕ್ಯಾನ್ಸರ್)
===================================
ಮೆದೋಜೀರಕ ಗ್ರಂಥಿಗಳು ತಾವು ಸ್ರವಿಸುವ ಇನ್ಸುಲಿನ್ ಮುಖಾಂತರ ನಾವು ಸೇವಿಸುವ ಅಹಾರ ಗ್ಲುಕೋಸ್ ಆಗಿ ಪರಿವರ್ತನೆ ಆಗಲು ನೆರವಾಗುತ್ತವೆ. ಮೆದೋಜೀರಕ ಗ್ರಂಥಿಗಳು (ಪ್ಯಾಂಕ್ರಿಯಾಸ್) . ನಮ್ಮ ಜೀರ್ಣಾಂಗಗಳ ಬಾಗವಾಗಿದ್ದು ಕ್ಯಾನ್ಸರ್ ಕಾಯಿಲೆಯು ಈ ಅಂಗದ ಮೇಲೆ ತನ್ನ ಮನೆಮಾಡಿದಾಗ ದೇಹದ ಜೀರ್ಣವ್ಯವಸ್ಥೆಯನ್ನು ವ್ಯೆತ್ಯಾಸಗೊಳಿಸುತ್ತದೆ, ಅಲ್ಲದೆ ಇದು ಗೆಡ್ಡೆಯಾಗಿ ಬೆಳೆದು ತನ್ನ ಸುತ್ತಮುತ್ತಲಿನ ಅಂಗಗಳ ಮೇಲೆ ತನ್ನ ಪ್ರಭಾವ ಬೀರಲು ತೊಡಗಿದಾಗ ರೋಗಿಯು ಬದುಕುವ ಆಸೆ ಬಿಡುತ್ತಾನೆ.
ರೋಗದ ಲಕ್ಷಣಗಳು: ಸಾಮಾನ್ಯವಾಗಿ ರೋಗದ ಲಕ್ಷಣಗಳನ್ನು ಗುರುತಿಸುವ ವೇಳೆಗೆ ರೋಗವು ತನ್ನ ಕೊನೆಯ ಹಂತವನ್ನು ತಲುಪಿರುತ್ತದೆ, ಇದರ ಲಕ್ಷಣ ಒಬ್ಬೊಬ್ಬರಲ್ಲಿ ಒಂದೊಂದು ತರವಿರುವುದೆ ಇದಕ್ಕೆ ಕಾರಣ. ಸಾಮಾನ್ಯ ಲಕ್ಷಣಗಳೆಂದರೆ ಮೇಲಿನ ಹೊಟ್ಟೆಯಲ್ಲಿ ನೋವು. ದೇಹ ತೂಕ ಕಳೆದುಕೊಳ್ಳುವಿಕೆ. ಹಸಿವು ನಿದ್ರೆ ದೂರ, ಪದೆ ಪದೆ ವಾಂತಿಯಾಗುವುದು. ಕರುಳಿನಲ್ಲಿ ರಕ್ತಸ್ರಾವ. ಅಲ್ಲದೆ ಕೆಲವೊಮ್ಮೆ ಹಳದಿ ಕಾಮಲೆ ಕಾಯಿಲೆಯು ಕಾಣಿಸುವುದು.
ಮೊದಲು ದುಗ್ದಗ್ರಂಥಿ (ಲಿಂಪ್ ಕುತ್ತಿಗೆ) ಯಲ್ಲಿ ಕಾಣಿಸುವ ಇದರ ಬೆಳವಣಿಗೆ ಕ್ರಮೇಣ ಯಕೃತ್ (ಲಿವರ್) , ಶ್ವಾಸಕೋಶ (ಲಂಗ್ಸ್ ) ವನ್ನೆಲ್ಲ ಆಕ್ರಮಿಸುವುವು. ಮುಂದುವರೆದ ಬಾಗವಾಗಿ ಕೆಲವೊಮ್ಮೆ ಬೆನ್ನುಮೂಳೆ ಹಾಗು ಮೆದುಳಿಗು ವಿಸ್ತರಿಸುತ್ತದೆ.
ಸಾಮಾನ್ಯವಾಗಿ ಅರವತ್ತರ ನಂತರ ಕಾಣಿಸುವ ಮೆದೋಜೀರಕ ಕ್ಯಾನ್ಸರ್ ಕೆಲವೊಮ್ಮೆ ನಲವತ್ತರ ಆಸುಪಾಸಿನ ವಯಸಿನಲ್ಲು ಕಾಣಬಹುದು. ಸಿಗರೇಟ್ ಸೇವನೆ, ಮಾಂಸ ಸೇವನೆ ಅತಿಯಾದ ಸಿಹಿ ಮುಂತಾದವುಗಳ ಸೇವನೆ ಇವೆಲ್ಲ ಮೆದೋಜೀರಕ ಕ್ಯಾನ್ಸರ್ ಗೆ ಕಾರಣವಾಗಬಲ್ಲದು, ಕೆಲವೊಮ್ಮೆ ಆಲ್ಕೋಹಾಲ್ ನ ಅತಿಯಾದ ಸೇವನೆಯು ಕಾರಣವಾಗಲ್ಲದು.
ಲಿವರ್ ನ ಪರೀಕ್ಷೆ, ಸಿ.ಟಿ. ಸ್ಕಾನ್, ಎಂಡೋಸ್ಕೋಪಿಕ್ ನೀಡಲ್ ನ ಬಯಾಪ್ಸಿ ರೀತಿಯ ವಿವಿದ ಪರೀಕ್ಷೆಗಳ ಮೂಲಕ ಮೆದೋಜೀರಕ ಕ್ಯಾನ್ಸರ್ ನ ಹಂತಗಳನ್ನು ದೃಡಪಡಿಸಿಕೊಳ್ಲಬಹುದು.
ಸಿಗರೇಟ್ ಸೇವಿಸದಿರುವುದು, ಹಸಿ ಮತ್ತು ಕೆಂಪು ಮಾಂಸ ತ್ಯಜಿಸುವುದು ಆಲ್ಕೋಹಾಲ್ ಸೇವನೆಯ ವರ್ಜ್ಯ ಮುಂತಾದ ಕ್ರಮಗಳ ಮೂಲಕ ಕ್ಯಾನ್ಸರ್ ಬರದಂತೆ ಎಚ್ಚರವಹಿಸ ಬಹುದು. ವಿಟಮೀನ್ ಡಿ ಮತ್ತು ಬಿ ಗಳ ನಿಯಮಿತ ಸೇವನೆ ಈ ಕ್ಯಾನ್ಸರ್ ನನ್ನು ತಡೆಗಟ್ಟುವುದು ಎನ್ನುವದಾದರು ಇದು ದೃಡ ಪಟ್ಟಿಲ್ಲ.
ಕ್ಯಾನ್ಸರ್ ಕಣಗಳು ಮೆದೋಜೀರಕ ಗ್ರಂಥಿಯ ಮೇಲಷ್ಟೆ ಇದ್ದಾಗ ಶಸ್ತ್ರ ಚಿಕಿತ್ಸೆ ನೆರವಾಗಬಲ್ಲದು ಆದರು ಪೂರ್ತಿ ಗುಣಕಾಣುವುಸು ಅಸಾದ್ಯ. ಹಾಗಾಗಿ ಮುಂದಿನ ಹಂತದಲ್ಲಿ ರೇಡಿಯೊ ಥೆರೆಪಿ ಮೂಲಕ ಕ್ಯಾನ್ಸರ್ ಕಣಗಳನ್ನು ಹೊರಗಿನಿಂದ ಸುಡಲಾಗುತ್ತೆ, ಕೆಲವೊಮ್ಮೆ ಕಿಮೋ ಥೆರಪಿ ಸಹ ಕೊಡಲಾಗುತ್ತದೆ ಸಾಮನ್ಯವಾಗಿ ಕಿಮೋ ಥೆರಪಿಗೆ ಜೆಮ್ ಸಿಟಬೈನ್ ಎಂಬ ರಸಾಯನಿಕವನ್ನು ಉಪಯೋಗಿಸಲಾಗುವುದಾದರು ರೋಗದ ಉಗ್ರತೆಯನ್ನು ಅನುಸರಿಸಿ ಎರ್ ಲಟೊನಿಬ್ ಎಂಬ ರಸಾಯನಿಕವನ್ನು ಬಳಸಲಾಗುವುದು.
ಕ್ಯಾನ್ಸರ್ ಎಂಬ ರೋಗ ಪೀಡಿತ ವ್ಯಕ್ತಿಗೆ ಕಾಯಿಲೆ ತಗುಲಿದಂತೆ ಬದುಕುವ ವಿಶ್ವಾಸ ಕುಂದುತ್ತದಾದರು, ಈಗಿನ ವೈದ್ಯಕೀಯ ಕ್ಷೇತ್ರದಲ್ಲಿರುವ ಹೊಸ ತಂತ್ರಜ್ಞಾನದ ನೆರವಿನಿಂತ ರೋಗಿ ಸಾವಿನಿಂದ ಮುಕ್ತನಾಗುವ ವಿಶ್ವಾಸ ಹೆಚ್ಚಿದೆ.
ಕ್ಯಾನ್ಸರ್ ಎಂಬ ಕಾಯಿಲೆ ದೈಹಿಕವಾಗಿ ಮನುಷ್ಯನನ್ನು ಕಾಡುವದರ ಜೊತೆಜೊತೆಗೆ ಮಾನಸಿಕ ಹಿಂಸೆ ಸಹ ಅಸಾದ್ಯ . ಕ್ಯಾನ್ಸರ್ ಎಂಬ ಕಾಯಿಲೆ ಬಂದಿದೆ ಎನ್ನುವಾಗಲೆ ಮನೆಯಲ್ಲಿ ಹಾಗು ಹೊರಗಡೆ ವ್ಯಕ್ತಿಯನ್ನು ನೋಡುವ ಮನೋಭಾವ ಬದಲಾಗುತ್ತದೆ. ಅಲ್ಲದೆ ಅವನು ಸಾವಿಗೆ ಹತ್ತಿರವಾದ ಎನ್ನುವಂತೆ ಅವನ ಜೊತೆ ವರ್ತಿಸಲಾಗುತ್ತೆ. ಅಲ್ಲದೆ ಕ್ಯಾನ್ಸರ್ ಪೀಡಿತ ವ್ಯಕ್ತಿ ಮನೆಯಲ್ಲಿದ್ದಾಗ ಆ ಕಾಯಿಲೆ ವಂಶವಾಹಿನಿಯಲ್ಲಿ ಹರಿದು ಬರುವುದು ಎಂಬ ವಿಷಯದಿಂದೆ ಕೆಲವೊಮ್ಮೆ ಅವನ ಮಕ್ಕಳ ಜೀವನದ ಮೇಲು ಅದರ ಪರಿಣಾವವಾಗುತ್ತದೆ. ಹೆಣ್ಣುಮಕ್ಕಳಾದರೆ ಅವರ ಮದುವೆಯ ವಿಷಯ ಸಹ ಡೋಲಾಯಮಾನಕ್ಕೆ ಬೀಳುತ್ತದೆ.
ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆ ಪಡೆಯುವಾಗ ಅದರ ಪರಿಣಾಮ ದೇಹದ ಹೊರಗಿನ ರೂಪದ ಮೇಲೆ ಸಹ ಇರುತ್ತದೆ, ರೆಡಿಯೋ ಥೆರಪಿ ತೆಗೆದುಕೊಳ್ಳುವಾಗ ಹಸಿವು ನಿದ್ರೆ ದೂರವಾಗಿ ಮುಖ ಪೇಲವವಾದರೆ, ಕಿಮೋ ಥೆರೆಪಿಯ ಅಡ್ಡಪರಿಣಾಮದಿಂದ ಕೂದಲು ಉದುರುವುದು ಮುಂತಾದ ಪರಿಣಾಮವಿದ್ದು ದೇಹ ಸಹಜವಾಗಿ ವಿಕಾರಬಾಗಿ ಕಾಣುತ್ತದೆ. ಕಿಮೋಥೆರಪಿಯಲ್ಲಿ ಕ್ಯಾನ್ಸರ್ ಕಣಗಳಷ್ಟೆ ಅಲ್ಲದೆ ಆರೋಗ್ಯಪೂರ್ಣ ಕೋಶಗಳು ನಾಶವಾಗುವುದು ಕೆಲವೊಮ್ಮೆ ಸಾಮಾನ್ಯ.
ಭಾರತೀಯರು ಉಪಯೋಗಿಸುವ ಹರಿಷಿಣ ಮುಂತಾದವು ಕ್ಯಾನ್ಸರ್ ರೋಗವನ್ನು ದೂರಮಾಡುತ್ತದೆ ಎನ್ನುವ ನಂಬುಗೆ ಇದೆ. ಹರಿಶಿಣಕ್ಕೆ ಕ್ಯಾನ್ಸರ್ ಕಣಗಳನ್ನು ನಾಶಪಡಿಸುವ ಶಕ್ತಿ ಇದೆ ಎನ್ನುತ್ತಾರೆ. ನಿಂಬೆ ರಸದಲ್ಲಿ ಹರಿಶಿನ ಬೆರೆಸಿ ಕುಡಿದರೆ ಕ್ಯಾನ್ಸರ್ ನ ಪ್ರಭಾವ ತಗ್ಗುತ್ತದೆ ಎನ್ನುವರು.
ಆದರೆ ಎಲ್ಲಕ್ಕಿಂತ ಮಿಗಿಲಾಗಿ ರೋಗಿಗೆ ಬೇಕಾಗಿರುವುದು ಆತ್ಮ ವಿಶ್ವಾಸ ತಾನು ರೋಗದ ವಿರುದ್ದ ಹೋರಡಬಲ್ಲೆ ಎನ್ನುವ ದೈರ್ಯ. ಚಿಕಿತ್ಸೆಯನ್ನು ಡಾಕ್ಟರ್ ಗಳು ನಡೆಸುತ್ತಾರಾದರು ಅವನಿಗೆ ರೋಗಿಗೆ ಬೇಕಾದ ವಿಶ್ವಾಸ ಹಾಗು ದೈರ್ಯವನ್ನು ತುಂಬುವ ಕೆಲಸ ಮಾಡಬೇಕಾಗಿರುವುದು ಅವನ ಮನೆಯವರು ಹಾಗು ಸಮಾಜ
ಚಿತ್ರದ ಮೂಲ : www.google.co.in/imgres
--------------------------------------------------------------------------------------------------------------------------
ನನ್ನ ಮುಂದಿನ ಕತೆ : ಸುನಂದ
ಕ್ಯಾನ್ಸರ್ ಪೀಡಿತ ಹೆಣ್ಣೊಬ್ಬಳ ಜೀವನ ಕತೆ ಮನೋ ವ್ಯಥೆ .
Comments
ಉ: ಮೆದೋಜೀರಕ ಕ್ಯಾನ್ಸರ್ (ಪ್ಯಾನ್ ಕ್ರಿಯಾಟಿಕ್ ಕ್ಯಾನ್ಸರ್)
In reply to ಉ: ಮೆದೋಜೀರಕ ಕ್ಯಾನ್ಸರ್ (ಪ್ಯಾನ್ ಕ್ರಿಯಾಟಿಕ್ ಕ್ಯಾನ್ಸರ್) by venkatb83
ಉ: ಮೆದೋಜೀರಕ ಕ್ಯಾನ್ಸರ್ (ಪ್ಯಾನ್ ಕ್ರಿಯಾಟಿಕ್ ಕ್ಯಾನ್ಸರ್)
In reply to ಉ: ಮೆದೋಜೀರಕ ಕ್ಯಾನ್ಸರ್ (ಪ್ಯಾನ್ ಕ್ರಿಯಾಟಿಕ್ ಕ್ಯಾನ್ಸರ್) by partha1059
ಉ: ಮೆದೋಜೀರಕ ಕ್ಯಾನ್ಸರ್ (ಪ್ಯಾನ್ ಕ್ರಿಯಾಟಿಕ್ ಕ್ಯಾನ್ಸರ್)
In reply to ಉ: ಮೆದೋಜೀರಕ ಕ್ಯಾನ್ಸರ್ (ಪ್ಯಾನ್ ಕ್ರಿಯಾಟಿಕ್ ಕ್ಯಾನ್ಸರ್) by venkatb83
ಉ: ಮೆದೋಜೀರಕ ಕ್ಯಾನ್ಸರ್ (ಪ್ಯಾನ್ ಕ್ರಿಯಾಟಿಕ್ ಕ್ಯಾನ್ಸರ್)
ಉ: ಮೆದೋಜೀರಕ ಕ್ಯಾನ್ಸರ್ (ಪ್ಯಾನ್ ಕ್ರಿಯಾಟಿಕ್ ಕ್ಯಾನ್ಸರ್)
In reply to ಉ: ಮೆದೋಜೀರಕ ಕ್ಯಾನ್ಸರ್ (ಪ್ಯಾನ್ ಕ್ರಿಯಾಟಿಕ್ ಕ್ಯಾನ್ಸರ್) by ಗಣೇಶ
ಉ: ಮೆದೋಜೀರಕ ಕ್ಯಾನ್ಸರ್ (ಪ್ಯಾನ್ ಕ್ರಿಯಾಟಿಕ್ ಕ್ಯಾನ್ಸರ್)
In reply to ಉ: ಮೆದೋಜೀರಕ ಕ್ಯಾನ್ಸರ್ (ಪ್ಯಾನ್ ಕ್ರಿಯಾಟಿಕ್ ಕ್ಯಾನ್ಸರ್) by shivaram_shastri
ಉ: ಮೆದೋಜೀರಕ ಕ್ಯಾನ್ಸರ್ (ಪ್ಯಾನ್ ಕ್ರಿಯಾಟಿಕ್ ಕ್ಯಾನ್ಸರ್)
ಉ: ಮೆದೋಜೀರಕ ಕ್ಯಾನ್ಸರ್ (ಪ್ಯಾನ್ ಕ್ರಿಯಾಟಿಕ್ ಕ್ಯಾನ್ಸರ್)
ಉ: ಮೆದೋಜೀರಕ ಕ್ಯಾನ್ಸರ್ (ಪ್ಯಾನ್ ಕ್ರಿಯಾಟಿಕ್ ಕ್ಯಾನ್ಸರ್)
In reply to ಉ: ಮೆದೋಜೀರಕ ಕ್ಯಾನ್ಸರ್ (ಪ್ಯಾನ್ ಕ್ರಿಯಾಟಿಕ್ ಕ್ಯಾನ್ಸರ್) by makara
ಉ: ಮೆದೋಜೀರಕ ಕ್ಯಾನ್ಸರ್ (ಪ್ಯಾನ್ ಕ್ರಿಯಾಟಿಕ್ ಕ್ಯಾನ್ಸರ್)
In reply to ಉ: ಮೆದೋಜೀರಕ ಕ್ಯಾನ್ಸರ್ (ಪ್ಯಾನ್ ಕ್ರಿಯಾಟಿಕ್ ಕ್ಯಾನ್ಸರ್) by ಗಣೇಶ
ಉ: ಮೆದೋಜೀರಕ ಕ್ಯಾನ್ಸರ್ (ಪ್ಯಾನ್ ಕ್ರಿಯಾಟಿಕ್ ಕ್ಯಾನ್ಸರ್)