ಅಮರ್..ಮಧುರ..ಪ್ರೇಮ = ಭಾಗ 6
ಅಮರ್ ಹೋದ ದಾರಿಯನ್ನೇ ನೋಡುತ್ತಾ ನಿಂತಿದ್ದವಳ ಮನದಲ್ಲಿ ಯೋಚನೆಗಳ ನಾಗಾಲೋಟ ಶುರುವಾಗಿತ್ತು. ಏನು ಮಾಡುವುದು ಒಂದೂ ತಿಳಿಯುತ್ತಿಲ್ಲ ವಲ್ಲ ಎಂದುಕೊಂಡು ಮೊದಲು ಕ್ಲಾಸಿಗೆ ಹೋಗೋಣ ಆಮೇಲೆ ಯೋಚನೆ ಮಾಡೋಣ ಎಂದು ಕೊಂಡು ಕ್ಲಾಸ್ಸಿಗೆ ಬಂದು ಕುಳಿತಳು. ಅಂದು ಕಾಲೇಜ್ ಮುಗಿಸಿಕೊಂಡು ಮನೆಗೆ ಬಂದ ನಂತರ ಸ್ವಲ್ಪ ಹೊತ್ತು
ಅದೂ ಇದೂ ಮಾತಾಡಿ ಊಟ ಮಾಡಿ ಅವರವರ ಕೋ ಣೆಗೆ ಹೋಗಿ ಸಿಸ್ಟಂ ಆನ್ ಮಾಡಿ ಫೇಸ್ ಬುಕ್ ಓಪನ್ ಮಾಡಿ ಅಮರ್ ಎಂದು ಹುಡುಕಿದಾಗ ಅಲ್ಲಿ ಅಮರ್ ಚಂದ್ ರಕಾಂತ್ ಎಂಬ ಹೆಸರಿನಲ್ಲಿ ಇದ್ದ ಪ್ರೊ ಫೈಲ್ ಗೆ ಫ್ರೆಂಡ್ ರಿಕ್ವೆಸ್ಟ್ ಕ ಳುಹಿಸಿ ಮಲಗಿದಳು.
ಪ್ರೇಮ ಮಲಗಿದ್ದಾಗ ಮೊಬೈಲ್ ರಿಂಗಾಯಿ ತು. ನೋಡಿದರೆ ಅಮರ್ ಕರೆ ಮಾಡಿದ್ದ. ಹಲೋ ಅಮರ್ ಹೇಳು ಇಷ್ಟು ದಿನ ಆದ ಮೇಲೆ ನನ್ನ ನೆನಪಾಯಿತ? ಪ್ರೇಮ ಆ ಮಾತು ನಾನು ಕೇಳಬೇಕು ನಿನ್ನ ನ್ನು. ಅಂದು ನಾನು ಫೋನ್ ಮಾಡಿದ ಬಳಿಕ ನೀನು ಮತ್ತೆ ಮಾ ಡಲೇ ಇಲ್ಲ. ನನಗೆ ಗೊತ್ತು ಪ್ರೇಮ ನಿ ನಗೆ ನನ್ನ ಮೇಲೆ ಕೋಪ ಬಂದಿದೆ ಎಂದು. ನೋಡು ಪ್ರೇ ಮ ಈ ಪ್ರೀತಿ ಎನ್ನೋದು ತಾನಾಗೆ ಹು ಟ್ಟಬೇಕು ಹೊರತು ಬಲವಂತವಾಗಿ ಮಾಡಿ ದರೆ ಅದು ಪ್ರೀತಿ ಎನಿಸಿಕೊಳ್ಳುವುದಿ ಲ್ಲ. ಹಾಗಾಗಿ ಅಂದು ನಿನ್ನ ಬಳಿ ಸ್ವ ಲ್ಪ ಒರಟಾಗಿ ಮಾತಾಡಿದೆ. ದಯವಿಟ್ಟು ನನ್ನನ್ನು
ಕ್ಷಮಿಸು. ನೀನು ನಿಜಕ್ಕೂ ಒಳ್ಳೆಯ ಹುಡುಗಿ ಅದಕ್ಕೆ ಯಾರ ಬಳಿಯೂ ಇರದಷ್ಟು ಹತ್ತಿರವಾ ಗಿ ನಿನ್ನ ಬಳಿ ಇದ್ದೆ. ಈಗಲೂ ನಾವಿಬ್ಬರೂ ಒಳ್ಲೆ ಸ್ನೇಹಿತರಾಗಿ ಇರೋಣ. ಪ್ಲೀಸ್ ಪ್ರೇ ಮ ಇಲ್ಲ ಎನ್ನಬೇಡ.
ಅಮರ್ ನಾನೂ ಸಹ ಬಾಲಿಶವಾಗಿ ಮಾತಾಡಿ ದೆ ಎನಿಸುತ್ತೆ. ನೀನಂದದ್ದು ನಿಜ ಪ್ರೀ ತಿ ತಾನಾಗೆ ಹುಟ್ಟಬೇಕು ಹೊರತು ಬಲವಂತವಾಗಿ ಅದನ್ನು ಪಡೆಯಬಾರದು. ನಿನಗೆ ಮಧುರಳೆ ಸರಿ. ಆದರೆ ಅವಳಿಗೆ ಈ ಪ್ರೀತಿ ಪ್ರೇಮ ಇದರಲ್ಲೆಲ್ಲ ಆಸಕ್ತಿ ಇಲ್ಲ. ಅವಳು ಅಷ್ಟು ಸುಲಭವಾಗಿ ನಿನ್ನ ಪ್ರೀ ತಿಯನ್ನು ಒಪ್ಪುತ್ತಾಳೆ ಎಂಬುದು ಅನು ಮಾನ.
ಪ್ರೇಮ, ನಿನಗೊಂದು ವಿಷಯ ಹೇಳಬೇಕು. ಇಂದು ಮಧ್ಯಾಹ್ನ ಮಧುರಳ ಜೊತೆ ನನ್ನ ಪ್ರೇಮದ ವಿಷಯ ತಿಳಿಸಿದೆ.
ಹೇ ಹೌದ, ಮತ್ತೆ ಅವಳು ನನಗೆ ತಿಳಿಸಲೇ ಇಲ್ಲ....ವೆರಿ ಗುಡ್ ಅವಳು ಏನಂದಳು...
ನೀನಂದದ್ದೇ ಅವಳು ಹೇಳಿದಳು, ನನಗೆ ಇದರಲ್ಲಿ ಆಸಕ್ತಿ ಇಲ್ಲ ಎಂದು. ಪ್ರೇಮ, ನನ್ನ ಆಪ್ತ ಸ್ನೇಹಿತೆಯಾಗಿ ನೀನೆ ನಮ್ಮಿಬ್ಬರ ಪ್ರೀತಿಯನ್ನು ಗೆ ಲ್ಲಿಸಬೇಕು ಪ್ಲೀಸ್ ಕಣೆ...
ಅಮರ್...ನೋಡು ನಾನು ನಿನ್ನನ್ನು ಪ್ರೀತಿಸಿ ನೀನು ಅವಳನ್ನು ಪ್ರೀತಿಸಿ ಅದಕ್ಕೆ ನನ್ನನ್ನೇ ಸಹಾಯ ಕೇಳುತ್ತಿ ದ್ದೀಯ...ನಿಜ ಹೇಳಬೇಕೆಂದರೆ ಮನಸಿಗೆ ಬಹಳ ನೋವಾಗುತ್ತಿದೆ ಕಣೋ...ಆದರೂ ಪರವಾಗಿಲ್ಲ ನಿನಗೆ ಸಹಾಯ ಮಾಡುತ್ತೇನೆ
ಮೊದಲು ನಾನು ಅವಳ ಜೊತೆ ಮಾತಾಡಿ ನಿ ನ್ನ ಜೊತೆ ಸ್ನೇಹ ಮೂಡುವಂತೆ ಮಾಡುತ್ತೇ ನೆ. ನಂತರ ನೋಡೋಣ. ಆದರೆ ಅಮರ್ ಇದ ಕ್ಕೆಲ್ಲ ಬಹಳ ಸಮಯ ಹಿಡಿಯುತ್ತೆ ಕಣೋ . ಅವಳು ಅಷ್ಟು ಸುಲಭವಾಗಿ ಯಾರೊಂದಿ ಗೂ ಸ್ನೇಹ ಮಾಡುವುವಳಲ್ಲ. ಆದರೆ ನಿನ್ನಲ್ಲಿ ಆ ಚಾಕಚಕ್ಯತೆ ಇದೆ . ನೋಡೋಣ ಏನಾಗುತ್ತದೋ...ನನಗಂತೂ ಸಿ ಗಲಿಲ್ಲ ಅವಳಿಗಾದರೂ ನಿನ್ನ ಪ್ರೀತಿ ದಕ್ಕುವುದೋ ನೋಡೋಣ.
ಪ್ರೇಮ ಪದೇ ಪದೇ ನೀನು ನಿನಗೆ ಸಿಕ್ಕಲಿಲ್ಲ ಸಿಕ್ಕ ಲಿಲ್ಲ ಎಂದು ಬೇಸರ ಪಟ್ಟುಕೊಂಡು ಮಾ ತಾಡಿದರೆ ನನ್ನ ಮನಸಿಗೆ ಬಹಳ ಹಿಂಸೆ ಆಗುತ್ತದೆ. ದಯವಿಟ್ಟು ಹಾಗೆಲ್ಲ ಮಾ ತಾಡಬೇಡ. ನಿನಗೆ ನನಗಿಂತ ಒಳ್ಳೆಯ ಹುಡುಗ ಸಿಗು ತ್ತಾನೆ ಅಷ್ಟು ಯಾಕೆ ನಾನೇ ನಿನಗೊಬ್ಬ ಒಳ್ಳೆಯ ಹುಡುಗನನ್ನು ಹುಡುಕುತ್ತೇ ನೆ ಸರಿನಾ...
ಅಯ್ಯೋ...ಬೇಡ ಸ್ವಾಮಿ ನನ್ನ ಪಾಡಿಗೆ ನಾನು ಇರುತ್ತೇನೆ. ಇನ್ನು ಈ ಪ್ರೀ ತಿ ಪ್ರೇಮ ಎಲ್ಲ ಬೇಡವೇ ಬೇಡ...ಮುಂದೆ ಅ ಪ್ಪ ಅಮ್ಮ ಯಾವ ಹುಡುಗನನ್ನು ಹುಡುಕುತ್ತಾರೋ ಅವನನ್ ನು ಮದುವೆ ಆಗುತ್ತೇನೆ. ವೆರಿ ಗುಡ್ ಪ್ರೇಮ ದಟ್ಸ್ ಲೈಕ್ ಅ ಗುಡ್ ಗರ್ಲ್. ಸರಿ ಮಲ್ಕೋ ಗುಡ್ ನೈ ಟ್.
ಫೋನ್ ಇಟ್ಟು ಫೇಸ್ ಬುಕ್ ಓಪನ್ ಮಾಡಿ ದರೆ ಒಂದು ಫ್ರೆಂಡ್ ರಿಕ್ವೆಸ್ಟ್ ಎಂ ದು ತೋರಿಸುತ್ತಿತ್ತು. ಯಾರೆಂದು ನೋ ಡಿದರೆ ಮಧುರ ಎಂದು ಇತ್ತು. ಅಮರನ ಸಂ ತೋಷಕ್ಕೆ ಪಾರವೇ ಇರಲಿಲ್ಲ. ಕೂಡಲೇ ಅ ವಳ ರಿಕ್ವೆಸ್ಟ್ ಅಕ್ಸೆಪ್ಟ್ ಮಾಡಿ ಒಂದು ಮೆಸೇಜ್ ಕಳುಹಿಸಿದ " ಥ್ಯಾಂಕ್ಸ್ ಫಾ ರ್ ಸೆ೦ಡಿಂಗ್ ದಿ ಫ್ರೆಂಡ್ ರಿಕ್ವೆಸ್ಟ್". ಅವಳ ಹೋಂ ಪೇಜ್ ನೋಡಿದರೆ ಕೇವಲ ಇಪ್ಪ ತ್ತು ಜನ ಸ್ನೇಹಿತರಿದ್ದರು. ಪ್ರೇಮ ಹೇಳಿದ ಮಾತು ನಿಜ. ಅವಳು ಯಾರನ್ನೂ ಅಷ್ಟು ಸುಲಭವಾಗಿ ಸ್ನೇಹಿತರನ್ನಾಗಿ ಮಾಡಿಕೊ ಳ್ಳುವುದಿಲ್ಲ. ಅದಕ್ಕೆ ಅಲ್ಲವೇ ಅವಳು ನನಗೆ ಹಿಡಿಸಿದ್ದು. ಇದು ಇನ್ನೂ ಮೊ ದಲನೇ ಹೆಜ್ಜೆ...ಇನ್ನು ಅವಳ ಜೊತೆ ಸ್ನೇಹ ಸಂಪಾದಿಸಿ ನಂತರ ಪ್ರೀತಿ ಸಂಪಾದಿಸಿ ನಂತರ ಮದುವೆ ಹ್ಮ್ಮ್ ಹ್ಮ್ಮ್ ಬಹಳ ಸಮಯ ಬೇಕು ಎಂದು ಅದೇ ಗುಂಗಿನಲ್ಲಿ ಮ ಲಗಿದ.
ಮರುದಿನ ಕಾಲೇಜಿನಲ್ಲಿ ಗಾಡಿ ನಿಲ್ಲಿ ಸಿ ಬರುತ್ತಿದ್ದ ಅಮರನಿಗೆ ಎದುರಿನಲ್ಲಿ ಅವಳು ಬರುತ್ತಿರುವುದು ಕಾಣಿಸಿತು . ಯಾರಿರಬಹುದು ಪ್ರೇಮಾನ ಇಲ್ಲ ಮಧು ರನ? ನೋಡೋಣ ಅವಳೇ ಬಂದು ಮಾತಾಡಿಸಲಿ ಅವಾಗ ಗೊತ್ತಾಗತ್ತೆ ಎಂದು ಸುಮ್ಮನೆ ನಕ್ಕು ಹಾಯ್ ಎಂದ. ಹತ್ತಿರ ಬಂದ ಅವಳು ಹಾಯ್ ಅಮರ್ ಎಂದಳು. ಹಾಯ್ ಮಧುರ...
ಏನ್ ಸಾರ್ ಇಷ್ಟು ದಿವಸ ನಾನು ಎದುರು ಬಂದೊಡನೆ ಹಾಯ್ ಪ್ರೇಮ ಎನ್ನುತ್ತಿದ್ದವನು ಆಗಲೇ ಇಷ್ಟೊ೦ದು ಬದಲಾಗಿ ಬಿಟ್ಟೆಯ. ಅಷ್ಟೇ ಬಿ ಡು... ಹೇ ಹಾಗಲ್ಲ ಪ್ರೇಮ ಎಂದು ಮಾತಾಡಲು ತಡಬಡಾಯಿಸಿದ. ಇರಲಿ ಬಿಡಿ ಸಾರ್ ಪ್ರೀತಿಲಿ ಇದೆಲ್ಲ ಕಾ ಮನ್. ಮತ್ತೆ ಇನ್ನೇನು ಸಮಾಚಾರ ಫುಲ್ ಖುಷಿಯಲ್ಲಿ ಇದ್ದಾರೆ ಸಾರ್...
ಅಯ್ಯೋ ಹಾಗೇನೂ ಇಲ್ಲ ಕಣೆ...ಅದು ಸರಿ ಎಲ್ಲಿ ಮಧುರ ಬಂದಿಲ್ವಾ ಕಾಲೇಜಿಗೆ?
ಇಲ್ಲ ಕಣೋ ಇವತ್ತು ಅವಳಿಗೆ ಸ್ವಲ್ಪ ಹುಷಾರು ಇರ ಲಿಲ್ಲ ತಲೆನೋವು ಎನ್ನುತ್ತಿದ್ದಳು. ಅದಕ್ಕೆ ಬಂದಿಲ್ಲ ಅಷ್ಟೇ...ಅದು ಸರಿ ನಿನ್ನ ಹ್ಯಾಪಿ ಮೂಡ್ ಗೆ ಏನು ಕಾರಣ ಎಂದು ಹೇಳಲೇ ಇಲ್ಲ. ಮ ಧುರಳಿಗೆ ಹುಷಾರಿಲ್ಲ ಎಂದ ತಕ್ಷಣ ಅಮರ್ ಬಾಲ ಸುಟ್ಟ ಬೆಕ್ಕಿನಂತಾಗಿದ್ದ . ಪ್ರೇಮ ಅದೂ ಅದೂ ಮಧುರ ನೆನ್ನೆ ಫೇಸ್ ಬುಕ್ ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳಿಸಿದಳು. ಅದೇ ಖುಷಿಯಲ್ಲಿದ್ದೆ ಅಷ್ಟೇ ಆದರೆ ಈಗ ಅವಳಿಗೆ ಹುಷಾರಿಲ್ಲ ಎಂದ ಕೂಡಲೇ ಆ ಖುಷಿಯಲ್ಲ ಮಾಯಾ ಆಗೋಯ್ತು. ಏನಾಗಿ ದೆ ಮಧುರಗೆ ತುಂಬಾ ಹುಷಾರಿಲ್ವಾ? ಡಾ ಕ್ಟರ ಹತ್ರ ಹೋಗಿದ್ರ? ಏನಾದರೂ ಮೆಡಿ ಸಿನ್ ತಗೊಂಡಿದಾಳ? ಈಗ ಹೇಗಿದೆ? ನೀನ್ಯಾಕೆ ಅವಳನ್ನು ಒ ಬ್ಬಳನ್ನೇ ಬಿಟ್ಟು ಬಂದೆ?
ಹಲೋ ಹಲೋ....ಸಮಾಧಾನ ಮಾಡಿಕೊಳ್ಳಿಸಾ ರ್...ಅವಳಿಗೆ ಪ್ರಾಣ ಹೋಗೋ ಅಂಥಾದ್ದು ಏನೂ ಆಗಿಲ್ಲ..ಅವಳಿಗೆ ಬಂದಿರೋದು ಬರೀ ತಲೆ ನೋವು ಅಷ್ಟೇ. ಮಾತ್ರೆ ತಗೊ೦ ಡು ಮಲಗಿದ್ದಾಳೆ. ಸಂಜೆ ಹೊತ್ತಿಗೆ ಸರಿ ಹೋಗುತ್ತಾಳೆ. ತಾವು
ಅಷ್ಟೊಂದು ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ನೋಡಪ್ಪ ಇನ್ನೂ ಅವಳು ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ಅರ್ಧ ದಿನ ಆಗಿ ಲ್ಲ. ಆಗಲೇ ಎಷ್ಟೊಂದು ಕಾಳಜಿ ಅವಳ ಮೇಲೆ.. .ಅಮರ್ ನಿನ್ನ ಈ ಪ್ರೀತಿ, ಕಾಳಜಿನೆ ಕಣೋ ನಾನು ಮಿಸ್ ಮಾಡಿಕೊಂಡಿದ್ದು...ಬಿಡು ಬಿಡು ಮತ್ತೆ ನಾನು ಅದರ ಬಗ್ಗೆ ಮಾತಾಡಿ ನಿನ್ನ ಮನಸಿಗೆ ಹಿಂಸೆ ಮಾಡಲ್ಲ. ಸರಿ ನನಗೆ ಕ್ಲಾಸ್ ಗೆ ಟೈಮ್ ಆಯ್ತು ಮಧ್ ಯಾಹ್ನ ಸಿಕ್ತೀನಿ.
ಪ್ರೇಮ...ಮಧುರ ಫೋನ್ ನಂಬರ್ ಕೊಡ್ತ್ಯ? ಅವಳ ಜೊತೆ ಮಾತಾಡಬೇಕು...
ಅಯ್ಯೋ....ಯಾಕಪ್ಪ ನಾನು ಬೈಸಿಕೊಳ್ಲ ಬೇಕಾ ಬೇಡಪ್ಪ ಬೇಡ...ಅದೂ ಅಲ್ಲದೆ ಅವಳು ಮಲಗಿರುತ್ತಾಳೆ...
ಪ್ರೇಮ ನೀನು ಕೊಟ್ಟೆ ಎಂದು ನಾನು ಹೇಳಲ್ಲ. ಅದೂ ಅಲ್ಲದೆ ನಾನು ಈಗಲೇ ಮಾಡುವುದಿಲ್ಲ, ಆಮೇಲೆ ಮಾ ಡುತ್ತೇನೆ. ಪ್ಲೀಸ್...ಪ್ಲೀಸ್..., ಸರಿ ತಗೋ ಅಪ್ಪಿ ತಪ್ಪಿ ನಾನು ಕೊಟ್ಟೆ ಎಂದು ಏನಾದರೂ ಹೇಳಿದರೆ ಅಷ್ಟೇ ಆಮೇಲೆ ಸರಿ ಇರಲ್ಲ. ಸರಿ ಬೈ ಆಮೇಲೆ ಸಿಕ್ತೇನೆ.
ಅಮರ್ ಕ್ಲಾಸಿನಲ್ಲಿ ಕುಳಿತಿದ್ದರೂ ಅವನ ಮನಸು ಮಧುರಳ ಜೊತೆ ಮಾತಾಡಬೇಕೆಂದು ಚಡಪಡಿಸುತ್ತಿತ್ತು. ಊಟಕ್ಕೆ ಮುಂಚೆ ಒಂದು ಕ್ಲಾಸ್ ಇರುವಾಗಲೇ ಆಚೆ ಬಂದು ಮಧುರಳ ನಂಬರ್ ಗೆ ಕರೆ ಮಾಡಿದ. ಸ್ವಿಚ್ ಆಫ್ ಎಂದು ಬರುತ್ತಿತ್ತು. ಬಹುಶಃ ಮಲಗಿರಬಹುದೇನೋ ಆಮೇಲೆ ಮಾಡೋಣ ಎಂದುಕೊಂಡು ಮತ್ತೆ ಕ್ಲಾಸಿನೊಳಕ್ಕೆ ಹೋದ.
ಊಟದ ಸಮಯಕ್ಕೆ ಪ್ರೇಮ ಅಮರ್ ಮತ್ತೆ ಕ್ಯಾಂಟೀನ್ ನಲ್ಲಿ ಭೇಟಿ ಆದರು. ಏನ್ಸಾರ್ ಫೋನ್ ಮಾಡಿದ್ರ ಮೇಡಂ ಗೆ? ಹಾ ಪ್ರೇಮ ಟ್ರೈ ಮಾಡಿದೆ ಆದರೆ ಸ್ವಿಚ್ ಆಫ್ ಎಂದು ಬರುತ್ತಿದೆ. ನಾನು ಹೇಳಿದ್ದೆ ತಾನೇ ಅವಳು ಮಲಗಿರುತ್ತಾಳೆ ಎಂದು. ಆಮೇಲೆ ಟ್ರೈ ಮಾಡು ಎದ್ದಿರಬಹುದು. ಸ್ವಲ್ಪ ಹೊತ್ತು ಅದೂ ಇದೂ ಮಾತಾಡಿ ಪ್ರೇಮ ಕ್ಲಾಸಿಗೆ ಹೋಗುತ್ತೇನೆಂದು ಹೊರಟರೆ ಅಮರ್ ಸ್ವಲ್ಪ ಹೊತ್ತು ಬಿಟ್ಟು ಬರುತ್ತೇನೆ ಎಂದ. ಆಯ್ತು ಆಯ್ತು ಗೊತ್ತಾಯ್ತು ಬಿಡಿ ಎಂದು ಪ್ರೇಮ ನಕ್ಕು ಹೊರಟಳು.
ಅಮರ್ ಮತ್ತೊಮ್ಮೆ ಮಧುರಳ ನಂಬರ್ ಗೆ ಕರೆ ಮಾಡಿದ. ಈ ಬಾರಿ ರಿಂಗಾಯಿತು. ಕ್ಷೀಣವಾದ ಧ್ವನಿಯಲ್ಲಿ ಮಧುರ ಹಲೋ ಯಾರು ಎಂದಳು. ಹಾಯ್ ಮಧುರ ನಾನು ಅಮರ್ ಮಾತಾಡುತ್ತಿರುವುದು. ಊಟದ ಸಮಯದಲ್ಲಿ ಪ್ರೇಮ ಸಿಕ್ಕಿ ನಿಮಗೆ ಹುಷಾರಿಲ್ಲ ಎಂದು ಹೇಳಿದಳು. ಅದಕ್ಕೆ ಹೇಗಿದ್ದೀರ ಎಂದು ವಿಚಾರಿಸೋಣ ಎಂದು ಕರೆ ಮಾಡಿದೆ. ಅಮರ್, ನಿಮಗೆ ನನ್ನ ನಂಬರ್ ಎಲ್ಲಿ ಸಿಕ್ಕಿತು.
ಮಧುರ ಅದೂ ಅದೂ...ನೆನ್ನೆ ನೀವು ಫೇಸ್ ಬುಕ್ ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ರಲ್ಲ ಅಲ್ಲಿಂದ ತೆಗೆದುಕೊಂಡೆ. ಈಗ ಹೇಗಿದ್ದೀರ? ಮಾತ್ರೆ ಏನಾದರೂ ತೆಗೆದುಕೊಂಡಿದ್ದೀರ?
ಹಾ ಅಮರ್ ಈಗ ಪರವಾಗಿಲ್ಲ, ಬೆಳಿಗ್ಗೆಗಿಂತ ಈಗ ಪರವಾಗಿಲ್ಲ ಮಾತ್ರೆ ತೆಗೆದುಕೊಂಡು ಮಲಗಿದ್ದೆ ಈಗ ಸ್ವಲ್ಪ ಆರಾಮಾಗಿದೆ. ತುಂಬಾ ಥ್ಯಾಂಕ್ಸ್ ಫೋನ್ ಮಾಡಿದ್ದಕ್ಕೆ. ಅಯ್ಯೋ ಅದಕ್ಯಾಕೆ ಥ್ಯಾಂಕ್ಸ್ ಹೇಳುತ್ತೀರಾ. ಫ್ರೆಂಡ್ ಅಂದಮೇಲೆ ಅಷ್ಟು ಕೇಳದಿದ್ದರೆ ಹೇಗೆ. ನೋಡಿ ಸಂಜೆಯ ವೇಳೆಗೆ ಕಡಿಮೆ ಆದರೆ ಸರಿ ಇಲ್ಲದಿದ್ದರೆ ಒಮ್ಮೆ ಡಾಕ್ಟರ ಬಳಿ ಹೋಗಿ ಬನ್ನಿ. ನಾನು ಮತ್ತೆ ಸಂಜೆ ಫೋನ್ ಮಾಡುತ್ತೇನೆ.
ಆಯ್ತು ಅಮರ್ ನಾನು ಕಮ್ಮಿ ಆಗದಿದ್ದರೆ ಡಾಕ್ಟರ ಬಳಿ ಹೋಗುತ್ತೇನೆ. ಆದರೆ ನೀವು ಪದೇ ಪದೇ ಫೋನ್ ಮಾಡುವುದು ಬೇಡ. ಮನೆಯಲ್ಲಿ ಪ್ರೇಮ ಇರುತ್ತಾಳೆ ನನಗೆ ಮುಜುಗರ ಆಗುತ್ತದೆ. ಮತ್ತೊಮ್ಮೆ ಥ್ಯಾಂಕ್ಸ್ ಫಾರ್ ದಿ ಕನ್ಸರ್ನ್.ಬೈ.
ಅಮರನಿಗೆ ಅವಳ ಜೊತೆ ಮಾತಾಡಿದ ಖುಷಿ ಒಂದೆಡೆಯಾದರೆ ಮತ್ತೊಮ್ಮೆ ಫೋನ್ ಮಾಡುವುದು ಬೇಡ ಎಂದಿದ್ದಕ್ಕೆ ಬೇಸರ ಉಂಟಾಗಿತ್ತು. ಕೂಡಲೇ ಪ್ರೇಮಗೆ ಫೋನ್ ಮಾಡಿ ವಿಷಯ ತಿಳಿಸಿದ. ಅವಳು, ಲೋ ಅಂತೂ ಫೋನ್ ಮಾಡೇ ಬಿಟ್ಟೆಯ. ಅವಳು ನಿನ್ನೊಡನೆ ಅಷ್ಟು ಹೊತ್ತು ಮಾತಾಡಿದ್ದೆ ಹೆಚ್ಚು ಅಂಥದ್ದರಲ್ಲಿ ಮತ್ತೆ ಫೋನ್ ಮಾಡ್ತೀನಿ ಎಂದರೆ ಒಪ್ಪಿ ಬಿಡುತ್ತಾಳ. ಹೋಗಲಿ ಬಿಡು ಒಂದೊಂದೇ ಮೆಟ್ಟಿಲು ಹತ್ತು ರಾಜ, ಒಟ್ಟಿಗೆ ಜಂಪ್ ಮಾಡಲು ಹೋದರೆ ಕಾಲು ಮುರಿಯತ್ತೆ ಎಂದು ನಕ್ಕಳು
Rating
Comments
ಉ: ಅಮರ್..ಮಧುರ..ಪ್ರೇಮ = ಭಾಗ 6
In reply to ಉ: ಅಮರ್..ಮಧುರ..ಪ್ರೇಮ = ಭಾಗ 6 by kamath_kumble
ಉ: ಅಮರ್..ಮಧುರ..ಪ್ರೇಮ = ಭಾಗ 6
In reply to ಉ: ಅಮರ್..ಮಧುರ..ಪ್ರೇಮ = ಭಾಗ 6 by makara
ಉ: ಅಮರ್..ಮಧುರ..ಪ್ರೇಮ = ಭಾಗ 6
In reply to ಉ: ಅಮರ್..ಮಧುರ..ಪ್ರೇಮ = ಭಾಗ 6 by kamath_kumble
ಉ: ಅಮರ್..ಮಧುರ..ಪ್ರೇಮ = ಭಾಗ 6
ಉ: ಅಮರ್..ಮಧುರ..ಪ್ರೇಮ = ಭಾಗ 6
In reply to ಉ: ಅಮರ್..ಮಧುರ..ಪ್ರೇಮ = ಭಾಗ 6 by partha1059
ಉ: ಅಮರ್..ಮಧುರ..ಪ್ರೇಮ = ಭಾಗ 6
ಉ: ಅಮರ್..ಮಧುರ..ಪ್ರೇಮ = ಭಾಗ 6
In reply to ಉ: ಅಮರ್..ಮಧುರ..ಪ್ರೇಮ = ಭಾಗ 6 by Chitradurga Chetan
ಉ: ಅಮರ್..ಮಧುರ..ಪ್ರೇಮ = ಭಾಗ 6