ಸರಿಯಾದ ಅಳತೆ!: ಜಮಾನಾದ ಜೋಕುಗಳು

ಸರಿಯಾದ ಅಳತೆ!: ಜಮಾನಾದ ಜೋಕುಗಳು

   
    ಆಸು ಹೆಗಡೆಯವರ, ಮನುಜ ಮನಸ್ಸು ಮಾಡಿದರೆ: http://sampada.net/blog/%E0%B2%AE%E0%B2%A8%E0%B3%81%E0%B2%9C-%E0%B2%AE%E0%B2%A8%E0%B2%B8%E0%B3%8D%E0%B2%B8%E0%B3%81-%E0%B2%AE%E0%B2%BE%E0%B2%A1%E0%B2%BF%E0%B2%A6%E0%B2%B0%E0%B3%86%E2%80%A6/01/07/2012/37258 ಓದಿದ ಮೇಲೆ ನಮ್ಮ ಜಮಾನಾದಲ್ಲಿದ್ದ ಪ್ರಚಲಿತವಿದ್ದ ಹಾಸ್ಯಕತೆಯೊಂದು ನೆನಪಿಗೆ ಬಂತು ಅದನ್ನೇ ಕೆಳಗೆ ಕೊಡುತ್ತಿದ್ದೇನೆ.

    ಒಂದೂರಿನಲ್ಲಿ, ಎಲ್ಲಾ ಊರುಗಳಲ್ಲಿ ಇರುವಂತೆಯೇ ಒಬ್ಬ ಸಿಂಪಿಗ/ಟೈಲರ್ ಇದ್ದ. ಅವನ ಬಳಿಗೆ ಅಂಗಿಯನ್ನು ಹೊಲಿಸಿಕೊಳ್ಳಲು ಒಬ್ಬ  ಷರ್ಟ್‌ಪೀಸ್ ಒಂದನ್ನು ತೆಗೆದುಕೊಂಡು ಬಂದ. ಟೈಲರ್ ಆ ಗಿರಾಕಿಯ ಅಳತೆಗಳನ್ನು ತೆಗೆದುಕೊಂಡು, "ಸಾರ್, ನಿಮ್ಮ ಅಳತೆಗೆ ಈ ಷರ್ಟ್‌ಪೀಸ್‍ನ ಬಟ್ಟೆ ಕಡಿಮೆ ಬರುತ್ತೆ" ಅಂದ. ಸರಿ ಎಂದುಕೊಂಡು ಆ ಗಿರಾಕಿ ಆ ಷರ್ಟ್‌ಪೀಸ್ ತೆಗೆದುಕೊಂಡು ಇನ್ನೊಂದೂರಿನ ಟೈಲರ್ ಬಳಿಗೆ ನಡೆದ. ಅವನೂ ಕೂಡ ಇವನ ಅಳತೆಯನ್ನು ತೆಗೆದುಕೊಂಡು,  ಷರ್ಟ್‌ಪೀಸ್‍ನ ಉದ್ದವನ್ನು ಚೆಕ್‍ಮಾಡಿ ಈ ಬಟ್ಟೆ ನಿಮ್ಮ ಅಳತೆಗೆ ಹೇಳಿ ಮಾಡಿಸಿದಂತಿದೆ ಸ್ವಾಮಿ ಎಂದು ಹೇಳಿದ ಮತ್ತು ಹದಿನೈದು ದಿನದ ನಂತರ ಬಂದು ಅಂಗಿಯನ್ನು ತೆಗೆದುಕೊಂಡು ಹೋಗುವಂತೆ ತಿಳಿಸಿದ. ಹದಿನೈದು ದಿನಗಳ ನಂತರ ರೆಡಿಯಾಗಿದ್ದ ಅಂಗಿಯನ್ನು ತೆಗೆದುಕೊಂಡ ಗಿರಾಕಿ ತೃಪ್ತಿಯಾಗಿ ತನ್ನ ಮನೆಯ ಕಡೆಗೆ ಹೊರಟ. ದಾರಿಯಲ್ಲಿ ಒಬ್ಬ ಹುಡುಗ ಇವನ ತರಹದ್ದೇ ಅಂಗಿಯೊಂದನ್ನು ತೊಟ್ಟುಕೊಂಡು ಆಟವಾಡುತ್ತಿರುವುದು ಕಾಣಿಸಿತು; ವಿಚಾರಿಸಲಾಗಿ ಅವನು ತಾನು ಷರ್ಟ್‌ ಹೊಲೆಯಲು ಕೊಟ್ಟ ದರ್ಜಿಯ ಮಗನೆಂಬುದು ತಿಳಿಯಿತು.

    ಆ ದರ್ಜಿಯ ಜಾಣ್ಮೆಯನ್ನೇ ಮನದಲ್ಲಿ ಕೊಂಡಾಡುತ್ತ  ಆ ವ್ಯಕ್ತಿ ಮೊದಲನೇ ದರ್ಜಿಯ ಬಳಿಗೆ ಬಂದು ಹೇಳಿದ, "ನೋಡಿ,  ನಾನು ತಂದ ಷರ್ಟ್‌ಪೀಸ್‍ನಲ್ಲಿ ನನಗೆ ಅಂಗಿ ಹೊಲಿಯಲು ಆಗುವುದಿಲ್ಲವೆಂದು ನೀವು ಹೇಳಿದಿರಿ; ಅದೇ ಷರ್ಟ್‌ಪೀಸ್‍ನಿಂದ ಪಕ್ಕದ ಊರಿನ ಬುದ್ಧಿವಂತ ದರ್ಜಿ ನನಗೆ ಷರ್ಟ್‌ ಹೊಲೆದು ಕೊಡುವುದಲ್ಲದೇ ತನ್ನ ಮಗನಿಗೂ ಒಂದು ಅಂಗಿಯನ್ನು ಹೊಲೆದಿದ್ದಾನೆ!". 

   ಆಗ ಮೊದಲನೇ ದರ್ಜಿ,  "ಸಾರ್, ಆ ಹುಡುಗನ ವಯಸ್ಸೆಷ್ಟು?"

   ಗಿರಾಕಿ, "ಅಂದಾಜು ಆರು ವರ್ಷವಿರಬಹುದು".

  ಟೈಲರ್, "ಹಾಗೆ ಹೇಳಿ ಮತ್ತೆ! ನನ್ನ ಮಗನ ವಯಸ್ಸು ಹನ್ನೆರಡು ವರ್ಷ!"

Rating
No votes yet

Comments