ಒಂದು ಕಣ್ಣಿನ‌ ಕಥೆ

ಒಂದು ಕಣ್ಣಿನ‌ ಕಥೆ

ಕವನ

ಕಣ್ಣು ತೆರೆದಾಗ ಒಂದು ಜಗತ್ತು, ಮುಚ್ಚಿದರಿನ್ನೊಂದು.

ಕಣ್ಮುಚ್ಚಿದಾಗ ಕಂಡ ಕನಸು, ಕಣ್ತೆರೆದಾಗ ಕಳೆದು ಹೋಗುವುದೇಕೆ??

ಕಳೆದು ಹೋದ ಕನಸಿನ ಹೆಜ್ಜೆ ಗುರುತನೆ, ಮನಸ್ಸು ಹಿಂಬಾಲಿಸುವುದೇಕೆ??

ಜಾಡು ಸಿಕ್ಕಿ, ರೆಪ್ಪೆಯಡಿಯಲಿ ಚಿತ್ರ ಮೂಡುವಾಗ, ಕಣ್ಣೀರು ಅದ ಕರಗಿಸುವುದೇಕೆ??

 

ಯಾವುದು ಸತ್ಯ? ಯಾವುದು ಮಿಥ್ಯ??

ನೀ ಮಾಡಲೇಕೆ ಚಿಂತೆ ಅನಗತ್ಯ??

ಹಿಂದೆ ಭೂತ, ಮುಂದೆ ಭವಿಷ್ಯ...

ಈ ಕ್ಷಣದಲೇಕೆ ಬದುಕಲಾರ ಮನುಷ್ಯ???!!!

Comments