ಹನಿಮುತ್ತುಗಳು.....
ಕವನ
*ನಿರೀಕ್ಷೆ *
ಯಾರಿಗೂ ಹೇಳಬೇಡ ಅಂತ
ಕೆನ್ನೆಗೆ ಮುತ್ತಿಟ್ಟು ಹೋದೆಯಲ್ಲ ಗೆಳತಿ,
ಆ ಮುತ್ತಿಗೆ ಜೋಡಿಯಾಗುವ ಬಯಕೆ.
ಯಾವಾಗ ಬರುವೆ,
ಇನ್ನೊಂದು ಮುತ್ತ ನೀಡಲು
ನಿನ್ನ ನಿರೀಕ್ಷೆಯಲ್ಲಿ
ನಾನು ಮತ್ತು ನೀ ಕೊಟ್ಟ ಮುತ್ತು..!!
*ದೀಪಾವಳಿ*
ನನ್ನೆದೆಯಲಿ
ನೀ ಹಚ್ಚಿಟ್ಟ ದೀಪ
ಆರುವ ಮುನ್ನ
ಒಮ್ಮೆ ನಕ್ಕು ಬಿಡೇ
ಕೊನೆಯ ದಿನ ದೀಪಾವಳಿಯಾಗಲಿ..!
*ನೀನಾ*
ಪ್ರತಿ ದಿನದಂತೆ
ಟೆರಸ್ ಮೇಲೆ ಕುಳಿತು
ನಕ್ಷತ್ರ ಎಣಿಸುತ್ತಿದ್ದೆ.
ಯಾರೋ ಬಂದು ಹೇಳಿದರು
ಒಂದು ನಕ್ಷತ್ರ
ಭುವಿಗೆ ಬಂದಿದೆ ಎಂದು.
ಗೆಳತಿ ಅದು ನೀನಾ..?!
---- ವಿಶ್ವನಾಥರಡ್ಡಿ. ಬಿ. ಎಚ್
Comments
ಉ: ಹನಿಮುತ್ತುಗಳು.....
In reply to ಉ: ಹನಿಮುತ್ತುಗಳು..... by Chitradurga Chetan
ಉ: ಹನಿಮುತ್ತುಗಳು.....
In reply to ಉ: ಹನಿಮುತ್ತುಗಳು..... by vishwanath B. H
ಉ: ಹನಿಮುತ್ತುಗಳು.....