ಹೇಳಿ ಹೋಗು ಕಾರಣ.
ಕವನ
ನೂರು ಮಾತುಗಳಾಚೆ
ಒ೦ದು ಮೌನವ ತಬ್ಬಿ ನಿ೦ತ
ನನ್ನ ಹೃದಯವ ಸ್ಪರ್ಶಿಸಿ,
ಜೀವರಾಗದಲ್ಲಿ ಬೆರೆತು,
ಭಾವರಾಗದಲ್ಲಿ ಮಿ೦ದು ,
ಕಣ್ಣ ನೋಟದಲ್ಲಿ ನಮ್ಮ ನಾವೇ ಮರೆತು,
ಸಾವಿರ ಹೆಜ್ಜೆಯಲಿ ಒ೦ದಾಗಿ
ಒಲವೇ ಸನಿಹವಾಗುತಿರಲು,
ನೀನೇ ದೂರವಾದೆ ಏಕೆ
ಹೇಳಿ ಹೋಗು ಕಾರಣ...
ಸಮುದ್ರ ದ೦ಡೆಯ ಮರಳು ಕೂಡ
ಈ ಜೋಡಿ ಹೆಜ್ಜೆಯ ಬಯಸಿರಲು,
ನನ್ನ ಮನೆಯ ಅ೦ಗಳ
ನಿನ್ನ ಕೈ ರ೦ಗೋಲಿ ಚುಕ್ಕಿಗೆ ಆಕಾಶವಾಗುವೆ
ಶುಭ್ರವಾಗಿ ಎನ್ನುತಿರಲು,
ಕಣ್ಣ ಸಲುಗೆಗು ವಿರಸ ಬೆರೆಸಿ
ಮೌನದಿ ಮರೆಯಾದಿ ಏಕೆ
ಹೇಳಿ ಹೋಗು ಕಾರಣ..
ಸಮುದ್ರದ ನೀಲಿ ಆವಿಯಾಗಿ
ಬಾನಿಗೆ ಬಣ್ಣವಾಗುತಿರಲು,
ಆಕಾಶ ಭುವಿಗೆ
ಮಳೆಯ ಮುತ್ತು ಸುರಿಯುತಿರಲು,
ವಸ೦ತ ಋತುವಿಗಾಗಿ
ಕೋಗಿಲೆ ಧ್ವನಿಗೆ ಜೀವ ಬ೦ದಿರಲು,
ಪ್ರೀತಿ ತ೦ತಿ ಮೀಟಿ
ಅಪರಿಚಿತೆಯಾದೆ ಎಕೆ
ಹೇಳಿ ಹೋಗು ಕಾರಣ..
-- ವಿಶ್ವನಾಥರಡ್ಡಿ ಬಿ. ಎಚ್
Comments
ಉ: ಹೇಳಿ ಹೋಗು ಕಾರಣ.
In reply to ಉ: ಹೇಳಿ ಹೋಗು ಕಾರಣ. by chandana.rupa
ಉ: ಹೇಳಿ ಹೋಗು ಕಾರಣ.
ಉ: ಹೇಳಿ ಹೋಗು ಕಾರಣ.
ಉ: ಹೇಳಿ ಹೋಗು ಕಾರಣ.
In reply to ಉ: ಹೇಳಿ ಹೋಗು ಕಾರಣ. by Soumya Bhat
ಉ: ಹೇಳಿ ಹೋಗು ಕಾರಣ.
In reply to ಉ: ಹೇಳಿ ಹೋಗು ಕಾರಣ. by ashoka_15
ಉ: ಹೇಳಿ ಹೋಗು ಕಾರಣ.
In reply to ಉ: ಹೇಳಿ ಹೋಗು ಕಾರಣ. by Soumya Bhat
ಉ: ಹೇಳಿ ಹೋಗು ಕಾರಣ.