ಒಂದೆರಡು ದಿನಗಳ ಕವಿ ನಾನು!
ಒಂದೆರಡು ದಿನಗಳ ಕವಿ ನಾನು!
||ಒಂದೆರಡು ದಿನಗಳ ಕವಿ ನಾನು ಒಂದೆರಡು ದಿನಗಳೆ ಬರೆಯುವೆನು
ಒಂದೆರಡು ದಿನಗಳ ಹುಮ್ಮಸ್ಸು ಒಂದೆರಡು ದಿನಗಳ ಈ ಆಯುಸ್ಸು||
ನನಗಿಂತಲು ಮೊದಲೂ ಎಷ್ಟೊಂದು ಕವಿಗಳು ಬಂದು ಹೋಗಿಹರು
ಗೀತೆಗಳನು ಹಾಡಿ ಹೋಗಿಹರು ಮನಗಳ ಮುದಗೊಳಿಸಿ ತೆರಳಿಹರು
ಅವರೂ ಅರೆಗಳಿಗೆಯ ಕತೆಯಂತೆ, ನಾನೂ ಈ ಗಳಿಗೆಯ ಕತೆಯಂತೆ
ನಾಳೆ ನಿಮ್ಮನೇ ನಾ ಅಗಲುವೆನು, ಆದರೂ ಇಂದು ನಿಮ್ಮವ ನಾನು!
||ಒಂದೆರಡು ದಿನಗಳ ಕವಿ ನಾನು ಒಂದೆರಡು ದಿನಗಳೆ ಬರೆಯುವೆನು
ಒಂದೆರಡು ದಿನಗಳ ಹುಮ್ಮಸ್ಸು ಒಂದೆರಡು ದಿನಗಳ ಈ ಆಯುಸ್ಸು||
ಕವಿತ ಕುಸುಮಗಳನು ಆರಿಸಲು ಬರಬಹುದು ನಾಳೆಯೂ ಬಹುಜನರು
ನನಗಿಂತಲೂ ಚೆನ್ನ ಬರೆವವರು ನಿಮಗಿಂತಲೂ ಒಳ್ಳೆಯ ಓದುಗರು
ನಾಳೆ ಇನ್ನಾರು ನೆನೆಯುವರು ನನ್ನನ್ನು ಇನ್ಯಾಕೆ ನೆನೆಯುವರು
ಪುರುಸೊತ್ತಿಲ್ಲದ ಈ ಜನರೇಕೆ ನನಗಾಗಿ ಕಾಲವ ವ್ಯಯಿಸುವರು?
||ಒಂದೆರಡು ದಿನಗಳ ಕವಿ ನಾನು ಒಂದೆರಡು ದಿನಗಳೆ ಬರೆಯುವೆನು
ಒಂದೆರಡು ದಿನಗಳ ಹುಮ್ಮಸ್ಸು ಒಂದೆರಡು ದಿನಗಳ ಈ ಆಯುಸ್ಸು||
Rating
Comments
ಉ: ಒಂದೆರಡು ದಿನಗಳ ಕವಿ ನಾನು!
In reply to ಉ: ಒಂದೆರಡು ದಿನಗಳ ಕವಿ ನಾನು! by ksraghavendranavada
ಉ: ಒಂದೆರಡು ದಿನಗಳ ಕವಿ ನಾನು!
In reply to ಉ: ಒಂದೆರಡು ದಿನಗಳ ಕವಿ ನಾನು! by ksraghavendranavada
ಉ: ಒಂದೆರಡು ದಿನಗಳ ಕವಿ ನಾನು!
In reply to ಉ: ಒಂದೆರಡು ದಿನಗಳ ಕವಿ ನಾನು! by asuhegde
ಉ: ಒಂದೆರಡು ದಿನಗಳ ಕವಿ ನಾನು!
In reply to ಉ: ಒಂದೆರಡು ದಿನಗಳ ಕವಿ ನಾನು! by nanjunda
ಉ: ಒಂದೆರಡು ದಿನಗಳ ಕವಿ ನಾನು!
In reply to ಉ: ಒಂದೆರಡು ದಿನಗಳ ಕವಿ ನಾನು! by asuhegde
ಉ: ಒಂದೆರಡು ದಿನಗಳ ಕವಿ ನಾನು!
In reply to ಉ: ಒಂದೆರಡು ದಿನಗಳ ಕವಿ ನಾನು! by ಗಣೇಶ
ಉ: ಒಂದೆರಡು ದಿನಗಳ ಕವಿ ನಾನು!
ಉ: ಒಂದೆರಡು ದಿನಗಳ ಕವಿ ನಾನು!