ಆಹ್ವಾನ ೦೨!!

ಆಹ್ವಾನ ೦೨!!

 

ಚಿಕ್ಕು’ವಿನ ಚೊಕ್ಕ ಕವನ ’ಆಹ್ವಾನ’ ಓದಿ ಮನದಲ್ಲಿ ಮೂಡಿದ ತಲೆಹರಟೆಯನ್ನು ಹೊರಹಾಕಿದ್ದೇನೆ

 

ನಿನ್ನ ನಯನಗಳೇನನ್ನೋ ಹುಡುಕುತ್ತಿವೆ

ಹೆಗಲ ಚೀಲದಲ್ಲಿರೋ ಐ-ಫೋನನ್ನೋ

 

ನಿನ್ನ ಕಿವಿಗಳೇನನ್ನೋ ಆಲಿಸುತ್ತಿವೆ

ಐಟ್ಯೂನಿಂದ ಬರುವ ಹಾಡನ್ನೋ

 

ನಿನ್ನ ಅಧರಗಳೇಕೋ ಅದುರುತ್ತಿವೆ

ಫೋನಿರುವುದು ವೈಬ್ರೇಟ್ ಮೋಡಲ್ಲೇನೋ

 

ನಿನ್ನ ಕೆನ್ನೆಗಳು ನಾಚಿ ಕೆಂಪಾಗಿವೆ

ಕಚಗುಳಿ ಇಡುವ ಎಸ್.ಎಮ್.ಎಸ್’ನಿಂದೇನೋ

 

ನಿನ್ನ ಕೂದಲು ನವಿರಾಗಿ ಹಾರಾಡಿದೆ

ಫೋನಿಂದ ಗಾಳಿ ಬರುವ ಹೊಸ App’ಏನೋ

 

ನಿನ್ನ ಕೈಗಳು ನನ್ನೆಡೆ ಚಾಚಿವೆ

ಚಾರ್ಜ್ ಮಾಡಲು ಚಾರ್ಜರ್ ಬೇಕಿತ್ತೇನೋ

 

ನಿನ್ನ ಪಾದಗಳು ಹೆಜ್ಜೆ ಹಾಕಿವೆ

ಚಾರ್ಜರ್ ಚುಚ್ಚಲು outlet ಹುಡುಕಲೇನೋ

 

ನಿನ್ ಹೃದಯವೇಕೆ ಎನಗೆ ಬಾಗಿಲು ಹಾಕಿವೆ

ಸದಾ ನಿನ್ ಜೊತೆ ಇರಲು ನಾನಾಗಬಾರದಿತ್ತೇ

ಐಫೋನೋ ಪಾಮೋರಿನ್ನೋ?

 

Comments