ಕನ್ನಡದಲ್ಲಿ ಕಾರ್ಟೂನ್‍ಗಳು

ಕನ್ನಡದಲ್ಲಿ ಕಾರ್ಟೂನ್‍ಗಳು

Englishನ ಕಾರ್ಟೂನಗಳನ್ನು ಕನ್ನಡಕ್ಕೆ ಅನುವಾದ ಮಾಡುವ ಒಂದು ಪ್ರಯ್ತ್ನ. ಕೇಶವ ಮತ್ತು ನಾರಾಯಣಾರಾಗಿ - Calvin and Hobbes. ಸಾಂಬಶಿವನಾಗಿ - Dilbert ಗೋವಿಂದನಾಗಿ - Garfield ನಿಮ್ಮ ಮುಂದೆ ಬರುತ್ತಿದ್ದಾರೆ, ಓದಿ ನಿಮ್ಮ ಅಭಿಪ್ರಾಯ ತಿಳಿಸಿ -- http://kannadacartoons.blogspot.com/

ಅರುಣ ಉವಾಚ --
ಕ್ಯಾಲ್ವಿನ್ ಮತ್ತು ಹಬ್ಬಸ್ ಎಷ್ಟೋ ಜನರ ಅಚ್ಚುಮೆಚ್ಚಿನ ಕಾರ್ಟೂನ್. ಇದನ್ನು ಕನ್ನಡಕ್ಕೆ ತರುವ ಒಂದು ಸಣ್ಣ ಪ್ರಯತ್ನ. ಈ ಪ್ರಯತ್ನದಲ್ಲಿ ಯಾವುದೇ ರೀತಿಯ ಆರ್ಥಿಕ ಲಾಭ ಪಡೆಯಲಾಗುತ್ತಿಲ್ಲ. ಇದನ್ನು ನಾನು ನನಗೆ C&H ಮೇಲೆ ಇರುವ ಅಭಿಮಾನಕ್ಕಾಗಿ ಮಾಡುತ್ತಿದ್ದೇನೆ.

ಸುಸಂಕೃತ ಉವಾಚ --
'Dilbert' ನಮ್ಮ ದೈನಂದಿನ ಯಾಂತ್ರಿಕ ಬದುಕಿನ ಒಂದು ಮುಖ್ಯ ಪಾತ್ರವೆನ್ನಬಹುದು.Dilbertನ ಪಾತ್ರದಲ್ಲಿ ನಮ್ಮೆಲ್ಲರನ್ನೂ ಒಂದಲ್ಲ ಒಂದು ಸನ್ನಿವೇಶದಲ್ಲಿ ಕಂಡುಕೊಳ್ಳಬಹುದು.ಮೂಲತಃ Scott Adamsನ ಮಾನಸಪುತ್ರ ಈತ.
ಅವನ ಕರಾಮತಿಗಳನ್ನು, ಅವನ ಕಛೇರಿಯಲ್ಲಿ ನಡೆಯುವ ದಿನನಿತ್ಯದ ರಾಮಾಯಣವನ್ನು ಯಥಾವತ್ತಾಗಿ Scott ದಿನವೂ ನಮಗೆಲ್ಲ ಉಣಬಡಿಸುತ್ತಾ ಬಂದಿದ್ದಾರೆ!ಅದನ್ನೇ ನಾನಿಲ್ಲಿ ಕನ್ನಡಕ್ಕೆ ತರ್ಜುಮೆ ಮಾಡುವ ಸಣ್ಣ ಪ್ರಯತ್ನ ಮಾಡಿದ್ದೇನೆ.

ಪ್ರಶಾಂತ ಉವಾಚ --
ಬೆಳಿಗ್ಗೆಯಿಂದ ಕೆಲಸದಲ್ಲಿ ಮುಳುಗಿದ್ದು ಮಧ್ಯೆ ಸ್ವಲ್ಪ ಹೊತ್ತು ಕಾರ್ಟೂನ್ಸ್ ಓದಿದ್ರೆ ಮನಸ್ಸು ಒಂಥರಾ ಉಲ್ಲಸಿತವಾಗುತ್ತದೆ. ಬಹಳ ವರ್ಷಗಳಿಂದ ನಾನು Calvin & Hobbes ಮತ್ತು Garfield ಕಾರ್ಟೂನ್ಸ್ ಗಳನ್ನು follow ಮಾಡಿಕೊಂಡುಬಂದಿದ್ದೆ. ಯಾವಾಗ ಅರುಣ Calvin & Hobbes ನ ಕನ್ನಡಕ್ಕೆ ಅನುವಾದಿಸಿದ್ದನ್ನು ನೋಡಿದೆನೋ ನನಗೂ Garfield ನನ್ನು ಗೋವಿಂದನನ್ನಾಗಿಸುವ ಅನ್ನಿಸಿತು. ಜೊತೆಗೆ ಸುಶೀಲನೂ Dilbert ಅನುವಾದ ಪ್ರಾರಂಭಿಸಿದ. ಅವರಿಬ್ಬರ ಜೊತೆಗೆ ಈಗ ಗೋವಿಂದನೂ ಕೈಜೋಡಿಸುತ್ತಿದ್ದಾನೆ.

Rating
No votes yet

Comments