ಇಂಡಿಯನ್ನೆಸ್, ಒಬ್ಬ ಸಾಮನ್ಯನಲ್ಲೂ...

ಇಂಡಿಯನ್ನೆಸ್, ಒಬ್ಬ ಸಾಮನ್ಯನಲ್ಲೂ...

'ನಿಂಗೆ ನೂರು ಡಾಲರ್ ಹಣ ಸಿಗುತ್ತಿತ್ತು, ಅವನಿಗೆ ಯಾಕೆ ಇಲ್ಲ ಎಂದು ಸುಳ್ಳು ಹೇಳಿದೆ' ಎಂದು ಅಮನ್ ಕೇಳಲು.

'ನೀವು ಎರಡುವರೆಯಾದರೂ ಕೊಡಿ, ಎರಡು ರೂ ನಾಲ್ಕಾಣೆಯಾದರು ಕೊಡಿ, ನನಗೆ ಬೇಸರವಿಲ್ಲ. ಆದರೆ, ಅವನಿಗೆ ಆ ಪುಸ್ತಕವನ್ನು ನಾ ಕೊಡಲಾರೆ. ಈಗಾಗಲೆ ಎಲ್ಲವನ್ನೂ ಹೊತ್ತೊಯ್ದಿದ್ದಾರೆ. ಕನಿಷ್ಟ ನಮ್ಮ ಜ್ಞಾನವಾದರೂ ನಮ್ಮಲ್ಲಿಯೇ ಇರಲಿ' ಎನ್ನುತ್ತಾ ತನ್ನ ಬೆನ್ನ ಹಿಂದೆ ಅಡಗಿಸಿಟ್ಟಿದ್ದ ಪುಸ್ತಕವನ್ನು ಎರಡು ರೂ ನಾಲ್ಕಾಣೆಗೆ ಅಮನ್‌ನಿಗೆ ನೀಡುತ್ತಾನೆ.

 
ಅಮನ್ ಆ ವ್ಯಾಪಾರಿ ಮುದುಕನಲ್ಲಿದ್ದ ಭಾರತೀಯತೆಯನ್ನು ಈ ಉದಾಹರಣೆಯೊಂದಿಗೆ ತನ್ನ ವಿದ್ಯಾರ್ಧಿಗಳಿಗೆ ಆಗಾಗ ಹೇಳುತ್ತಿದ್ದರು.

...ಮುಗಿಯಿತು)

                                    ***

... ಹಿನ್ನೆಲೆ:

ಅಮನ್‌ನಿಗೆ ಓದುವ ಹಸಿವು ತುಂಬಾ. ಹೀಗೆ ಒಮ್ಮೆ ಅವನು ತನ್ನ ಗುರುಗಳೊಂದಿಗೆ ಪ್ರಾಚೀನ ಭಾರತೀಯರ ಔಷಧಿ ಪದ್ದತಿಯ ಬಗ್ಗೆ ಮಾತನಾಡುತ್ತಿರವಾಗ ಅವರು ಆಗಿನ ಜನರು ಸ್ಥಳೀಯವಾಗಿ ದೊರೆಯುತ್ತಿದ್ದ ಬೇರು, ಗೆಡ್ಡೆ, ಸಸ್ಯ ಮತ್ತು ಗಿಡಗಂಟಿಗಳನ್ನು ಬಳಸಿ ರೋಗರುಜಿನಗಳಿಗೆ ಹೇಗೆಲ್ಲಾ ಮದ್ದು ತಯಾರಸುತ್ತಿದ್ದರು ಎಂಬುದರ ಕುರಿತಾದ ‘ಅನ್ ಮೆಡಿಸಿನ್’ಎಂಬ ಪುಸ್ತಕವೊಂದರ ಬಗ್ಗೆ ಪ್ರಸ್ತಾಪಿಸುತ್ತಾರೆ.

 
ತಕ್ಷಣ ಅಮನ್ ಆ ಪುಸ್ತಕವನ್ನು ಕೊಳ್ಳಲೇಬೇಕೆಂದು ಕಾಶ್ಮೀರ ಪಟ್ಟಣದ ಎಲ್ಲಾ ಪುಸ್ತಕದ ಅಂಗಡಿಗಳಲ್ಲಿಯೂ ಹುಡುಕಲು ಪ್ರಾರಂಭಿಸುತ್ತಾನೆ, ಎಲ್ಲಿಯೂ ಸಿಗುವುದಿಲ್ಲ. ಆದರೆ, ಯಾವುದೊ ಒಂದು ಪುಸ್ತಕದ ಅಂಗಡಿಯ ಹುಡುಗ 'ರಸ್ತೆಬದಿ ಹಳೇ ಪುಸ್ತಕ ಮಾರುವವನ ಬಳಿ ಸಿಗಬಹುದೇನೊ' ಎಂದು ಗುನುಗಿದ್ದು ಇವನಿಗೆ ನೆನಪಾಗುತ್ತದೆ. ನೋಡೋಣ ಎಂದು ತಕ್ಷಣ ಕಾಶ್ಮೀರದ ಗಲ್ಲಿ-ಗಲ್ಲಿಗಳಲ್ಲೂ ಪುಸ್ತಕದ ಹುಡುಕಾಟ ಮುಂದುವರೆಸುತ್ತಾನೆ.

 
ಅಂತೂ ಅವನಿಗೆ ಸಮಾದಾನವಾಗುತ್ತದೆ, ಏಕೆಂದರೆ ಅವನು ಹುಡುಕುತ್ತಿದ್ದ ಆ ಜ್ಞಾನಭಂಡಾರ ರಸ್ತೆಬದಿಯ ಹಳೇ ಪುಸ್ತಕ ಮಾರುವ ಒಬ್ಬ ಮುದುಕನ ಬಳಿ ಅವನಿಗೆ ಸಿಗುತ್ತದೆ. ಇನ್ನಿಲ್ಲದಷ್ಚು ಸಂತಸವಾಗುತ್ತದೆ. ಕೂಡಲೆ, ಆ ಪುಸ್ತಕದ ಬೆಲೆ ಎಷ್ಟು ಎಂದು ಕೇಳುತ್ತಾನೆ. ‘ಎರಡುವರೆ ರೂಪಾಯಿ ಸಾರ್, ಇರುವುದು ಒಂದೇ ಪ್ರತಿ’ ಎನ್ನುತ್ತಾನೆ. ಅದರೆ, ಅಮನ್ ಜೇಬಿನಲ್ಲಿ ಇದ್ದದ್ದೇ ಎರಡುವರೆ ರೂಗಳು. ಅವನು ವಾಪಸ್ಸು ಮನೆ ತಲುಪಲು ನಾಲ್ಕಾಣೆ ಬೇಕಾಗಿತ್ತು. ಹಾಗಾಗಿ ಅಮನ್ ‘ಎರಡು ರೂ ನಾಲ್ಕಾಣೆ ಕೊಡುವೆ’ ಎಂದು ಚೌಕಾಸಿ ಮಾಡಲು ಪ್ರಾರಂಭಿಸಲು, ಅದೇ ಸಮಯಕ್ಕೆ ಬ್ರಿಟಿಷನೊಬ್ಬ ಅದೇ ಪುಸ್ತಕದ ಪ್ರತಿಯನ್ನು ಕೇಳಿಕೊಂಡು ಅಲ್ಲಿಗೆ ಬರುತ್ತಾನೆ.
 

“ಡು ಯೂ ಹ್ಯಾವ್ ಎ ಬುಕ್ ಟೈಟ್ಲ್‌ಡ್ ‘ಅನ್ ಮೆಡಿಸಿನ್’” ಎಂದು ಬ್ರಿಟಿಷಿಗ ಕೇಳಲು.  ಆ ವ್ಯಾಪಾರಿ ಮುದುಕ ಸರಕ್ಕನೆ ಆ ಪುಸ್ತಕವನ್ನು ಸೆಳೆದು ತನ್ನ ಬೆನ್ನಹಿಂದೆ ಅಡಗಿಸಿಟ್ಟು. ‘ಸಾರಿ ಸರ್, ಐ ಹ್ಯಾವ್ ನಾಟ್ ಹರ್ಡ್ ಆಫ್ ಸಚ್ ಟೈಟ್ಲ್’ ಎಂದು ಉತ್ತರಿಸುತ್ತಾನೆ.

Rating
No votes yet

Comments