"ನೇಪಥ್ಯಕ್ಕೆ ಸರಿದ ಸಭ್ಯ ನಟ ದಾರಾಸಿಂಗ್"
ಮೊನ್ನೆ ಬುಧವಾರ ದಿನಾಂಕ 11 ರಂದು ಕೋಮಾ ಸ್ಥಿತಿಯಲ್ಲಿದ್ದ ವಿಶ್ವ ವಿಖ್ಯಾತ ಕುಸ್ತಿಪಟು, ಬಾಲಿವುಡ್ಡಿನ ಹಳೆಯ ಸ್ಟಂಟ್ ಚಿತ್ರಗಳ ನಟ ದಾರಾಸಿಂಗ್ ನನ್ನು ಮುಂಬೈನ ಕೋಕಿಲಾ ಬೆನ್ ಆಸ್ಪತ್ರೆಗೆ ಆತನ ಮೆದುಳಿಗೆ ಆಮ್ಲಜನಕದ ಪೂರೈಕೆ ತೊಂದರೆ ಯಾಗಿ ಸೇರಿಸಲ್ಪಟ್ಟಿದ್ದ ಆತನ ಪರಿಸ್ಥಿತಿ ಸುಧಾರಿಸದ ಕಾರಣ, ಇಂದು ಗುರುವಾರ ದಿನಾಂಕ 12 ರಂದು ಮುಂಬೈನ ಆತನ ಮನೆಗೆ ತಂದಿದ್ದು ಬೆಳಿಗ್ಗೆ 7-30 ಗಂಟೆಗೆ ಇಹಲೋಕ ಯಾತ್ರೆ ಮುಗಿಸಿದ.
ಈ ದಾರಾಸಿಂಗ್ ಯಾರು ಕುಸ್ತಿಪಟುವೆ, ನಟನೆ ? 1929 ರಲ್ಲಿ ಪಂಜಾಬನ ಹಳ್ಳಿಯೊಂದರಲ್ಲಿ ಜನಿಸಿದ ಈತ ಆಯ್ಕೆ ಮಾಡಿ ಕೊಂಡದ್ದು ಕುಸ್ತಿಯನ್ನು. 1949 ರಲ್ಲಿ ಕುಸ್ತಿ ಆಖಾಡಕ್ಕೆ ಇಳಿದ ಈತ ತಿರುಗಿ ನೋಡಲಿಲ್ಲ. ಆರು ಅಡಿ ಎರಡು ಅಂಗುಲ ಎತ್ತರದ ನಿಲುವಿನ ಕಟ್ಟುಮಸ್ತಾದ ಮೈಕಟ್ಟಿನ ಪಂಜಾಬಿ ಯುವಕ ಕುಸ್ತಿ ಪಟುವಾಗಿ ಸಾಧಿಸಿದ್ದು ಅಪಾರ. ತನ್ನ ಕುಸ್ತಿ ಜೀವನದಲ್ಲಿ ಏಶಿಯನ್ ಕುಸ್ತಿ ಪಂದ್ಯಗಳಲ್ಲಿ ಭಾಗವಹಿಸಿ ಜಯಿಸಿದ. ಆಗ ಆತನನ್ನು ' ರುಸ್ತುಮ್ ಏ ಹಿಂದ್ ' ಎಂದು ಕರೆಯಲಾಯಿತು. 1960 - 62 ರ ಸುಮಾರಿಗೆ ಈತನ ಕೀರ್ತಿ ಜಗದ್ವಿಖ್ಯಾತವಾಗಿತ್ತು, ಕಾರಣ ಆತ ಆಗ ಜಗತ್ತಿನ ಖ್ಯಾತ ಕುಸ್ತಪಟು ' ಕಿಂಗ್ ಕಾಂಗ್ ' ನನ್ನು ಸೋಲಿಸಿದ್ದ. ಇದಕ್ಕೂ ಒಂದು ಕಾರಣವಿತ್ತು. ಕಿಂಗ್ಕಾಂಗ್ ಒಬ್ಬ ದೈತ್ಯದೇಹದ ಅಸಾಮಾನ್ಯ ಕುಸ್ತಿಪಟು. ಆತನ ತೆಕ್ಕೆಗೆ ಸಿಕ್ಕ ಯಾವ ಕುಸ್ತಿ ಪಟುವೂ ಸೋಲೊಪ್ಪದೆ ಇರುವಂತಿರಲಿಲ್ಲ. ಇದನ್ನು ಅರಿತ ದಾರಾಸಿಂಗ್ ಕುಸ್ತಿಯ ವೇಳೆ ತನ್ನದೆ ಆದ ರಣತಂತ್ರ ರೂಪಿಸಿ ಕೊಂಡು ಆತನ ಪಟ್ಟುಗಳಿಗೆ ಸಿಗದೆ ಅತನನ್ನು ನೆಲ ಕಚ್ಚಿಸಿದ ಪರಿಣಾಮ ಸೋಲು ಕಂಡಿದ್ದ. ಮುಂದೆಯೂ ಕೆಲವು ಬಾರಿ ದಾರಾ ಸಿಂಗ್ ಆತನನ್ನು ಸೋಲಿಸಿದ. ಹೀಗಾಗಿ ದಾರಾಸಿಂಗ್ ಖ್ಯಾತಿಗೆ ಬಂದದ್ದು ಖ್ಯಾತ ಕುಸ್ತಿಪಟುವೆಂದೆ. ಆದರೆ ಆಗ ನಮ್ಮ ದೇಶದಲ್ಲಿ ಕುಸ್ತಿಯನ್ನು ನೆಚ್ಚಿ ಕೂಡುವಂತಿರಲಿಲ್ಲ, ಹೀಗಾಗಿ ಆತನಿಗೆ ಜೀವನೋಪಾಯಕ್ಕೆ ಒಂದು ವೃತ್ತಿಯ ಅವಶ್ಯಕತೆಯಿತ್ತು. ಹೀಗಾಗಿ ಆತ ಬದುಕಿಗಾಗಿ ಬಣ್ಣದ ಲೋಕಕ್ಕೆ ಬಂದ.
ಕಳೆದ ಶತಮಾನದ ಪೂರ್ವಾರ್ಧದ ಕೊನೆಯ ಭಾಗ ಹಾಲಿವುಡ್ ನಲ್ಲಿ ಸ್ಟಂಟ್ ಪ್ರಿಯರನ್ನು ರಂಜಿಸುವ ಸಲುವಾಗಿಯೆ ಚಲನ ಚಿತ್ರಗಳು ತಯಾರಾಗು ತ್ತಿದ್ದವು. ಅದೇ ರೀತಿ ಮೂಕಿ ಮತ್ತು ಟಾಕಿಯುಗಗಳ ಸಂಧಿ ಕಾಲದಲ್ಲಿ ನಮ್ಮ ದೇಶದಲ್ಲಿ ಶಿಷ್ಟ ವರ್ಗದವರಿಗಾಗಿ ಪೌರಾಣಿಕ ಮತ್ತು ಐತಿಹಾಸಿಕ ಚಿತ್ರಗಳು ತಯಾರಾಗುತ್ತಿದ್ದವು. ಅದಕ್ಕೆ ಸಮಾನಾಂತರವಾಗಿ ಸ್ಟಂಟ್ ಪ್ರಿಯರಿಗಾಗಿ ಸಹ ಚಿತ್ರಗಳು ತಯಾರಾಗುತ್ತಿದ್ದವು. ಇಂತಹ ಚಿತ್ರಗಳಲ್ಲಿ ನಟಿಸುವ ಮೂಲಕ ರಂಜನ್ ಮತ್ತು ಶೇಖ್ ಮುಖ್ತಾರ್ ಜನಪ್ರಿಯರಾಗಿದ್ದರು. ರಂಜನ್ ತೆರೆಮರೆಗೆ ಸರಿಯಲು ಪ್ರಾರಂಭಿಸಿದ್ದರೆ ಶೇಖ್ ಮುಖ್ತಾರನ ದಿನಗಳೂ ಮುಗಿಯುತ್ತ ಬಂದಿದ್ದವು. ಆ ಕಾಲಘಟ್ಟದಲ್ಲಿ ಆ ಸ್ಥಾನಕ್ಕೆ ಬಂದವನೆ ಈ ದಾರಾಸಿಂಗ್. 1957 ರಲ್ಲಿ ಚಲನಚಿತ್ರ ನಟನೆಗೆ ಬಂದ ದಾರಾ ಸಿಂಗಗೆ ಆತನದೆ ಆದ ಒಂದು ಪ್ರೇಕ್ಷಕ ವೃಂದವಿತ್ತು. ಅವನು ಕಡಿಮೆ ಭಂಡವಾಳದ ಸಣ್ಣ ಚಲನಚಿತ್ರ ನಿರ್ಮಾಪಕರ ಡಾರ್ಲಿಂಗ್ ಆಗಿದ್ದ. ಬಿ ಮತ್ತು ಸಿ ಸೆಂಟರ್ ಗಳಲ್ಲಿ ಆತನ ಚಿತ್ರಗಳು ನಾಲ್ಕು ವಾರಗಳ ಕಾಲ ಮೋಸವಿಲ್ಲದೆ ಓಡುತ್ತಿದ್ದವು. ಸಣ್ಣ ಭಂಡವಾಳದ ಚಲನಚಿತ್ರ ನಿರ್ಮಾಪಕರಿಗೆ ಆತ ಮಿನಿಮಮ್ ಗ್ಯಾರಂಟಿಯ ನಾಯಕ ನಟನಾಗಿದ್ದ. ರಂಜನ್ ನ ಚಿತ್ರಗಳಲ್ಲಿ ಕತ್ತಿವರಸೆ ಪ್ರಾಧಾನ್ಯವಾಗಿದ್ದರೆ, ದಾರಾಸಿಂಗ್ ನ ಚಿತ್ರಗಳ ಪ್ರಮುಖ ಆಕರ್ಷಣೆ ಆತನ ಎತ್ತರದ ನಿಲುವಿನ ಆಕರ್ಷಕ ಮೈಕಟ್ಟು ಮತ್ತು ಆತನ ಕುಸ್ತಿಪಟ್ಟುಗಳನ್ನು ಸ್ಟಂಟ್ ಮಾಸ್ಟರ್ಸ ಗಳು ಬಳಸಿ ಕೊಳ್ಳುತ್ತಿದ್ದ ರೀತಿ. ಹೀಗಾಗಿ ಆತ ಚಿತ್ರಗಳಲ್ಲಿ ಖಳರನ್ನು ಸದೆ ಬಡಿಯುವ ರೀತಿ ಆತನ ಅಭಿಮಾನಿಗಳಿಗೆ ಅಸ್ವಾಭಾವಿಕ ಎನಿಸುತ್ತಿರಲಿಲ್ಲ. ನಿಜವಾದ ಹೊಡೆದಾಟದ ರಂಜನೆಯನ್ನು ಬಯಸುವವರು ಆತನ ಚಿತ್ರಗಳನ್ನು ಇಷ್ಟ ಪಡುತ್ತಿದ್ದರು. ಕಪ್ಪು ಬಿಳುಪಿನ ಜಮಾನಾದಲ್ಲಿ ನಿಜಕ್ಕೂ ಆತ ಸ್ಟಂಟ್ ಚಿತ್ರಗಳ ಬೇಡಿಕೆಯ ನಟನಾಗಿದ್ದ. ಮುಂದೆ ಕಲರ್ ಚಿತ್ರಗಳ ಟ್ರೆಂಡ್ ಪ್ರಾರಂಭವಾದ ಕಾಲದಲ್ಲಿಯೂ ಆತನ ಹಲವು ಚಿತ್ರಗಳು ಗೇವಾ ಮತ್ತು ಈಸ್ಟಮನ್ ಕಲರಗಳಲ್ಲಿ ಬಂದವು.
ಈ ನಟ ದಾರಾಸಿಂಗನ ವಿಶೇಷವೇನು ಎಂಬ ಯೋಚನೆ ಬಂದಾಗ, ಈತನ ಚಿತ್ರಗಳ ಕುರಿತು ಸಿನೆ ಪರ್ತಕರ್ತರು ಮತ್ತು ವಿಮರ್ಶಕರು ಈತನ ಚಿತ್ರಗಳನ್ನು ಗಂಭೀರವಾಗಿ ಪರಿಗಣಿಸುತ್ತಲೆ ಇರಲಿಲ್ಲ. ಬರಿ ಔಪಚಾರಿಕವಾಗಿ ವಿಮರ್ಶಯ ಕಾಟಾಚಾರ ಮುಗಿದು ಹೋಗುತ್ತಿತ್ತು. ಆತನ ಚಿತ್ರಗಳು ಹಾಗೆಯೆ ಇರುತ್ತಿದ್ದವೆನ್ನಿ. ಆದರೆ ಆತನ ನಿಜವಾದ ಅಭಿಮಾನಿಗಳು ಈ ವಿಮರ್ಶೆ ನೋಡಿ ಬರುವವರಾಗಿರಲಿಲ್ಲ. ಶ್ರಮಿಕ ವರ್ಗದ ಆತನ ಅಭಿಮಾನಿಗಳು ಚಿತ್ರವನ್ನು ಗೆಲ್ಲಿಸಿ ಬಿಡುತ್ತಿದ್ದರು. ಹೀಗಾಗಿ ಆತ ಸುಮಾರು ಎರಡು ದಶಕಗಳ ಕಾಲ ಸ್ಟಂಟ್ ಚಿತ್ರಗಳ ಪ್ರಮುಖ ನಾಯಕ ನಟನಾಗಿ ಯಶಸ್ವಿಯಾದ. ಈತನ ಚಿತ್ರಗಳ ಪ್ರಮುಖ ನಾಯಕಿಯರೆಂದೆರೆ ಸಯೀದಾ ಖಾನ್ ಮತ್ತು ಮುಮ್ತಾಜ್. ಈ ಮುಮ್ತಾಜಳ ಅರ್ರಂಗೇಟ್ರಂ ಆಗಿದ್ದು ಈತನ ಚಿತ್ರಗಳಲ್ಲಿ ನಾಯಕಿಯಾಗಿ ಅಭಿನಯಿಸುವ ಮೂಲಕವೆ. ಈಕೆಯ ನಟನೆಯನ್ನು ಮೆಚ್ಚಿಕೊಂಡ ಖ್ಯಾತ ನಿರ್ಮಾಣ ಸಂಸ್ಥೆಗಳು ಅದರಲ್ಲೂ ವಿಶೇಷವಾಗಿ ದಕ್ಷಿಣ ಭಾರತದ ನಿರ್ಮಾಣ ಸಂಸ್ಥೆಗಳು ಎರಡನೆಯ ನಾಯಕಿ ಇಲ್ಲವೆ ಅಭಿನಯಕ್ಕೆ ಪ್ರಾಧಾನ್ಯತೆ ಇರುವ ಪಾತ್ರಗಳನ್ನು ನೀಡುವ ಮೂಲಕ. ಉದಾಹರಿಸುವದಾದಲ್ಲಿ ಪ್ರಸಾದ್ ಪ್ರೊಡಕ್ಶನ್ ಚಿತ್ರ ' ದಾದಿಮಾ '. ಇದರ ಪ್ರಮುಖ ಪಾತ್ರಧಾರಿಗಳು ಅಶೋಕ ಕುಮಾರ, ಬೀನಾ ರಾಯ್, ವೀನಸ್ ಲಾಂಛನದ ಚಿತ್ರ ' ಸೂರಜ '. ಇದರಲ್ಲಿ ರಾಜೆಂದ್ರ ಕುಮಾರ, ವೈಜಯಂತಿಮಾಲಾ, ಬಿ.ನಾಗಿರೆಡ್ಡಿ ಲಾಂಛನದ ' ರಾಮ ಔರ್ ಶಾಮ ' ಚಿತ್ರ. ಇದರಲ್ಲಿ ದಿಲೀಪ ಕುಮಾರ, ವಹೀದಾ ರೆಹಮಾನ ಅಭಿನಯವಿತ್ತು.ಮುಂದೆ ಈಕೆ ಕ್ರಮೇಣ ಸಂಜಯ, ಫಿರೋಜ್ ಖಾನ್, ರಾಜೇಶ ಖನ್ನಾ ಜೊತೆ ನಾಯಕಿಯಾಗಿ ಅಭಿನಯಿಸಿ ಪ್ರಸಿದ್ಧಿ ಪಡೆದಳು. ರಾಜೇಶ ಖನ್ನಾ ಮತ್ತು ಮುಮ್ತಾಜ್ ಜೋಡಿ ಬಾಲಿವುಡ್ಡಿನ ಪ್ರಮುಖ ಜೋಡಿಗಳೊಂದಲಾಯಿತು. ಆದರೆ ದಾರಾಸಿಂಗನಿಗೆ ಈ ಅವಕಾಶ ದೊರೆಯಲಿಲ್ಲ.
ಈ ಎತ್ತರದ ನಿಲುವಿನ ನಟನಿಗೆ ರೊಮ್ಯಾಂಟಿಕ್ ಪಾತ್ರಗಳು ಹೊಂದುತ್ತಿರಲಿಲ್ಲ. ಹೀಗಾಗಿ ಈತ ಸ್ಟಂಟ್ ಚಿತ್ರಗಳ ನಾಯಕ ನಟನಾಗಿಯೆ ಬಹುತೇಕ ತನ್ನ ವೃತ್ತಿ ಮುಗಿಸಿದ ಎಂದೇ ಹೇಳಬೇಕು. ಈತನ ಕೆಲವು ಪ್ರಮುಖ ಚಿತ್ರಗಳನ್ನು ಹೆಸರಿಸುವು ದಾದಲ್ಲಿ ' ಸಾತ್ ಸಮುಂದರ್ ಪಾರ್ '. ' ಕಿಂಗ್ ಕಾಂಗ್ ' , ' ಮರ್ದ . ' ಮಹಾಭಾರತ ' ಮತ್ತು ' ನಸೀಹತ್ ' ಚಿತ್ರಗಳನ್ನು ಹೆಸರಿ ಸಬಹುದು. ಮಹಾಭಾರತದಲ್ಲಿ ಈತ ಭೀಮನಾಗಿ ಅಭಿನಯಿಸಿದ್ದ, ಇದರಲ್ಲಿ ಜಯಶ್ರೀ ಗಡಕರ್ ಅಭಿನಯವಿತ್ತು. ಇದು ಅನೇಕ ಕಡೆ ಚೆನ್ನಾಗಿ ಓಡಿತು. ಇನ್ನು ನಸೀಹತ್ ಚಿತ್ರಕ್ಕೆ ಓ.ಪಿ.ನಯ್ಯರ ಸಂಗೀತವಿತ್ತು, ಇದರಲ್ಲಿ ದಕ್ಷಿಣ ಭಾರತದ ನಟಿ ರಾಜಶ್ರೀ ನಾಯಕಿಯಾಗಿ ಅಭಿನಯಿಸಿದ್ದಳು. ಅಷ್ಟರಲ್ಲಿ ಸ್ಟಂಟ್ ಚಿತ್ರಗಳ ಯುಗ ಮುಗಿದಿತ್ತು. 1969 ರಲ್ಲಿ ಆರ್.ಕೆ.ಬ್ಯಾನರ್ನ ' ಮೇರಾ ನಾಮ್ ಜೋಕರ್ ' ದಲ್ಲಿ ರಿಂಗ್ ಮಾಸ್ಟರ್ ಆಗಿ ಅಭಿನಯಿಸಿದ, ನಂತರ 2007 ರಲ್ಲಿ ' ಜಬ್ ವಿ ಮೆಟ್ ' ಚಿತ್ರದಲ್ಲಿ ಕರೀನಾ ಕಪೂರಳ ಅಜ್ಜನಾಗಿ ನಟಿಸಿದ. ಈತನ ಚಿತ್ರಗಳ ವಿಶೇಷವೆಂದರೆ ಭರತ್ ವ್ಯಾಸ್ ಮುಂತಾದವರ ಸತ್ವಪೂರ್ಣ ಗೀತೆಗಳು, ರಫಿ, ಲತಾ, ಆಶಾರ ಸುಮಧುರ ಹಾಡುಗಾರಿಕೆ, ಗಣೇಶ, ಉಷಾ ಖನ್ನಾ ಮತ್ತು ಚಿತ್ರಗುಪ್ತ ಮುಂತಾದ ಸಂಗೀತ ನಿರ್ದೇಶಕರ ಆದ್ಭುತವಾದ ಮಧುರವಾದ ರಾಗ ಸಂಯೋಜನೆಗಳಾ ಗಿದ್ದವು. ಆತ ಬಾಲಿವುಡ್ ನಂತಹ ಗ್ಲ್ಯಾಮರ್ ಲೋಕದಲ್ಲಿದ್ದರೂ ಯಾವುದೆ ಗಾಸಿಪ್ ಗೆ ಬಲಿಯಾಗಲಿಲ್ಲ. ಪರಿಶುದ್ಧವಾದ ಪ್ರಾಮಾಣಿಕ ಜೀವನ ಅವನದಾಗಿತ್ತು. 2003 ರಿಂದ 2009 ರ ವರೆಗೆ ಈತ ರಾಜ್ಯಸಭಾ ಸದಸ್ಯನಾಗಿದ್ದ, ಇದು ಆತನ ವ್ಯಕ್ತಿತ್ವಕ್ಕೆ ಸಂದ ಗೌರವವಾಗಿತ್ತು.
ಮುಂದೆ ರಾಜೀವ ಗಾಂಧಿಯ ಜಮಾನಾದಲ್ಲಿ 1986 ರಲ್ಲಿ ದೇಶ ವ್ಯಾಪಿ ಟೆಲಿವಿಜನ್ ಜಾಲ ಭಾರತಕ್ಕೆ ಬಂದಾಗ ಭಾರತದ ಪ್ರಮುಖ ಚಲನಚಿತ್ರ ನಿರ್ಮಾಣ ಸಂಸ್ಥಗಳಲ್ಲೊಂದಾದ ರಮಾನಂದ ಸಾಗರರ ಸಾಗರ್ ಇಂಟರ್ನ್ಯಾಶನಲ್ ಲಾಂಛನದ ಮೂಲಕ ರಾಮಾಯಣ ಧಾರಾವಾಹಿಯಲ್ಲಿ ಹನುಮಂತನಾಗಿ ಅಭಿನಯಿಸುವ ಮೂಲಕ ಜನಪ್ರಿಯತೆ ಪಡೆದ. ಸ್ಟಂಟ್ ಚಿತ್ರಗಳ ಮೂಲಕ ಪಡೆಯಾಗದ ಮೆಚ್ಚುಗೆಯನ್ನು ಎಲ್ಲ ವರ್ಗದ ಜನರ ಮೆಚ್ಚುಗೆಯನ್ನು ದೇಶವ್ಯಾಪಿಯಾಗಿ ಅಬಾಲ ವೃದ್ಧರಾದಿಯಾಗಿ ಎಲ್ಲರಿಂದ ಪಡೆದ. ಏರುತ್ತಿದ್ದ ವಯಸ್ಸು, ಅದಕ್ಕೆ ತಕ್ಕನಾದ ಪಾತ್ರಗಳು ದೊರೆಯದೆ ತೆರೆ ಮರೆಗೆ ಸರಿದ. ಅದ್ಭುತ ಮಾನವೀಯ ಮೌಲ್ಯಗಳ ಗುಣ ನಡತೆಯ ಸಭ್ಯ ನಟ ಜೀವನ ರಂಗದಲ್ಲಿ ತನ್ನ ನಟನೆಯನ್ನು ಮುಗಿಸಿ ನೇಪಥ್ಯಕ್ಕೆ ಸರಿದಿದ್ದಾನೆ. ಆತನಿಗೆ ಶುಭ ವಿದಾಯ ಹೇಳೋಣ
ಚಿತ್ರಕೃಪೆ :http://www.india-forums.com/bollywood/talk-round-town/26060-dara-singh-battling-between-life-and-death.htm
ಚಿತ್ರಕೃಪೆ :http://www.india-forums.com/bollywood/talk-round-town/26060-dara-singh-battling-between-life-and-death.htm
Rating
Comments
ಉ: " ನೇಪಥ್ಯಕ್ಕೆ ಸರಿದ ಸಭ್ಯ ನಟ ದಾರಾಸಿಂಗ್ "
In reply to ಉ: " ನೇಪಥ್ಯಕ್ಕೆ ಸರಿದ ಸಭ್ಯ ನಟ ದಾರಾಸಿಂಗ್ " by Soumya Bhat
ಉ: " ನೇಪಥ್ಯಕ್ಕೆ ಸರಿದ ಸಭ್ಯ ನಟ ದಾರಾಸಿಂಗ್ "
In reply to ಉ: " ನೇಪಥ್ಯಕ್ಕೆ ಸರಿದ ಸಭ್ಯ ನಟ ದಾರಾಸಿಂಗ್ " by H A Patil
ಉ: " ನೇಪಥ್ಯಕ್ಕೆ ಸರಿದ ಸಭ್ಯ ನಟ ದಾರಾಸಿಂಗ್ "
ಉ: " ನೇಪಥ್ಯಕ್ಕೆ ಸರಿದ ಸಭ್ಯ ನಟ ದಾರಾಸಿಂಗ್ ": ಹಿರಿಯರೆ
In reply to ಉ: " ನೇಪಥ್ಯಕ್ಕೆ ಸರಿದ ಸಭ್ಯ ನಟ ದಾರಾಸಿಂಗ್ ": ಹಿರಿಯರೆ by venkatb83
ಉ: " ನೇಪಥ್ಯಕ್ಕೆ ಸರಿದ ಸಭ್ಯ ನಟ ದಾರಾಸಿಂಗ್ ": ಹಿರಿಯರೆ
ಉ: " ನೇಪಥ್ಯಕ್ಕೆ ಸರಿದ ಸಭ್ಯ ನಟ ದಾರಾಸಿಂಗ್ "
In reply to ಉ: " ನೇಪಥ್ಯಕ್ಕೆ ಸರಿದ ಸಭ್ಯ ನಟ ದಾರಾಸಿಂಗ್ " by ksraghavendranavada
ಉ: " ನೇಪಥ್ಯಕ್ಕೆ ಸರಿದ ಸಭ್ಯ ನಟ ದಾರಾಸಿಂಗ್ "
ಉ: "ನೇಪಥ್ಯಕ್ಕೆ ಸರಿದ ಸಭ್ಯ ನಟ ದಾರಾಸಿಂಗ್"
In reply to ಉ: "ನೇಪಥ್ಯಕ್ಕೆ ಸರಿದ ಸಭ್ಯ ನಟ ದಾರಾಸಿಂಗ್" by swara kamath
ಉ: "ನೇಪಥ್ಯಕ್ಕೆ ಸರಿದ ಸಭ್ಯ ನಟ ದಾರಾಸಿಂಗ್"
ಉ: "ನೇಪಥ್ಯಕ್ಕೆ ಸರಿದ ಸಭ್ಯ ನಟ ದಾರಾಸಿಂಗ್"
In reply to ಉ: "ನೇಪಥ್ಯಕ್ಕೆ ಸರಿದ ಸಭ್ಯ ನಟ ದಾರಾಸಿಂಗ್" by makara
ಉ: "ನೇಪಥ್ಯಕ್ಕೆ ಸರಿದ ಸಭ್ಯ ನಟ ದಾರಾಸಿಂಗ್"
In reply to ಉ: "ನೇಪಥ್ಯಕ್ಕೆ ಸರಿದ ಸಭ್ಯ ನಟ ದಾರಾಸಿಂಗ್" by makara
ಉ: "ನೇಪಥ್ಯಕ್ಕೆ ಸರಿದ ಸಭ್ಯ ನಟ ದಾರಾಸಿಂಗ್"
ಉ: "ನೇಪಥ್ಯಕ್ಕೆ ಸರಿದ ಸಭ್ಯ ನಟ ದಾರಾಸಿಂಗ್"
In reply to ಉ: "ನೇಪಥ್ಯಕ್ಕೆ ಸರಿದ ಸಭ್ಯ ನಟ ದಾರಾಸಿಂಗ್" by bhalle
ಉ: "ನೇಪಥ್ಯಕ್ಕೆ ಸರಿದ ಸಭ್ಯ ನಟ ದಾರಾಸಿಂಗ್"
ಉ: "ನೇಪಥ್ಯಕ್ಕೆ ಸರಿದ ಸಭ್ಯ ನಟ ದಾರಾಸಿಂಗ್"
ಉ: "ನೇಪಥ್ಯಕ್ಕೆ ಸರಿದ ಸಭ್ಯ ನಟ ದಾರಾಸಿಂಗ್"
In reply to ಉ: "ನೇಪಥ್ಯಕ್ಕೆ ಸರಿದ ಸಭ್ಯ ನಟ ದಾರಾಸಿಂಗ್" by ಗಣೇಶ
ಉ: "ನೇಪಥ್ಯಕ್ಕೆ ಸರಿದ ಸಭ್ಯ ನಟ ದಾರಾಸಿಂಗ್"
In reply to ಉ: "ನೇಪಥ್ಯಕ್ಕೆ ಸರಿದ ಸಭ್ಯ ನಟ ದಾರಾಸಿಂಗ್" by Prakash Narasimhaiya
ಉ: "ನೇಪಥ್ಯಕ್ಕೆ ಸರಿದ ಸಭ್ಯ ನಟ ದಾರಾಸಿಂಗ್"
In reply to ಉ: "ನೇಪಥ್ಯಕ್ಕೆ ಸರಿದ ಸಭ್ಯ ನಟ ದಾರಾಸಿಂಗ್" by ಗಣೇಶ
ಉ: "ನೇಪಥ್ಯಕ್ಕೆ ಸರಿದ ಸಭ್ಯ ನಟ ದಾರಾಸಿಂಗ್"
ಉ: "ನೇಪಥ್ಯಕ್ಕೆ ಸರಿದ ಸಭ್ಯ ನಟ ದಾರಾಸಿಂಗ್"
In reply to ಉ: "ನೇಪಥ್ಯಕ್ಕೆ ಸರಿದ ಸಭ್ಯ ನಟ ದಾರಾಸಿಂಗ್" by lpitnal@gmail.com
ಉ: "ನೇಪಥ್ಯಕ್ಕೆ ಸರಿದ ಸಭ್ಯ ನಟ ದಾರಾಸಿಂಗ್"
In reply to ಉ: "ನೇಪಥ್ಯಕ್ಕೆ ಸರಿದ ಸಭ್ಯ ನಟ ದಾರಾಸಿಂಗ್" by lpitnal@gmail.com
ಉ: "ನೇಪಥ್ಯಕ್ಕೆ ಸರಿದ ಸಭ್ಯ ನಟ ದಾರಾಸಿಂಗ್"