ಹಾಳು ಮದನನಿಗೊಂದು ಧಿಕ್ಕಾರ
ಎರಡು ಕನಸು, ಬಂಧನ ಮೊದಲಾದ ಕನ್ನಡ ಚಲನಚಿತ್ರಗಳನ್ನು ನೋಡಿ ಪಳಗಿರುವವರಿಗೆ, ಪ್ರೇಮ ತ್ರಿಕೋನಗಳೇನು ಹೊಸದಲ್ಲ. ಆದರೆ, ಪ್ರೇಮ ಚೌಕ , ಪ್ರೇಮ ಪಂಚಕೋನಗಳನ್ನ ಕಂಡಿದ್ದೀರ? ಇಲ್ಲಿದೆ ನೋಡಿ ಅಂತಹದ್ದೊಂದು ಪ್ರಸಂಗ:
ನಾನವಳ ಬಿಡದೆಲೇ ನೆನೆಯುತಿರಲು
ಒಟ್ಟು ಕಡೆಗಣಿಸಿಹಳಲ್ಲ ನನ್ನನವಳು;
ಅವಳು ಬಯಸಿಹಳಲ್ಲ ಮತ್ತೊಬ್ಬ ನಲ್ಲನನು
ಆವನ ಮನ ಸೆಳೆದಾಕೆ ಬೇರೊಬ್ಬಳು.
ಇತ್ತ ಕಡೆ ಚಡಪಡಿಸಿ ನನಗೋಸ್ಕರ
ಸುರುಟಿ ಹೋಗಿಹಳಲ್ಲ ಮತ್ತೋರ್ವಳು
ಹಾ ! ಇರಲಿ ಧಿಕ್ಕಾರ ಅವನಿಗೂ ಅವಳಿಗೂ
ಹಾಳು ಮದನಗು ಮತ್ತೆ ಇವಳಿಗೂ ನನಗೂ!
ಸಂಸ್ಕೃತ ಮೂಲ (ಭರ್ತೃಹರಿಯ ನೀತಿಶತಕ -೨ ):
ಯಾಮ್ ಚಿಂತಯಾಮಿ ಸತತಂ ಮಯಿ ಸಾ ವಿರಕ್ತಾ
ಸಾಪ್ಯನ್ಯಮಿಚ್ಛತಿ ಜನಂ ಸ ಜನೋಽನ್ಯಸಕ್ತಃ
ಅಸ್ಮತ್ಕೃತೇ ಚ ಪರಿಶುಷ್ಯತಿ ಕಾಚಿದನ್ಯಾ
ಧಿಕ್ ತಾಮ್ ಚ ತಮ್ ಚ ಮದನಮ್ ಚ ಇಮಾಮ್ ಚ ಮಾಮ್ ಚ ||
ಹೊಸತಲೆಮಾರಿನ ನಿರ್ದೇಶಕರಾದ ಯೋಗರಾಜ ಭಟ್ಟರು ತಮ್ಮ "ಮನಸಾರೆ" ಚಲನಚಿತ್ರದಲ್ಲಿ ಬಹಳ ಹಳೆ ತಲೆಮಾರಿನ ಈ ಪದ್ಯವನ್ನು ನೇರವಾಗಿ ಭಟ್ಟಿ ಇಳಿಸಿ, ಆ ಚಿತ್ರದಲ್ಲೊಂದು ಪ್ರಸಂಗಗನ್ನು ಹೆಣೆದಿರುವುದು, ಆ ಚಿತ್ರವನ್ನೂ ನೋದಿದ್ದವರಿಗೆ ನೆನಪಾದರೂ ನೆನಪಾಗಬಹುದು!
-ಹಂಸಾನಂದಿ
ಕೊ: ಇದು ಭರ್ತೃಹರಿಯ ಜೀವನದಲ್ಲಿ ನಡೆದ ಘಟನೆಯೊಂದರಿಂದ ಬೇಸರಗೊಂಡಾಗ ಅವನು ಬರೆದನೆಂದು ಪ್ರತೀತಿ. ಆ ಕಥೆಯ ಬಗ್ಗೆ ಮತ್ತೊಮ್ಮೆ ಹೇಳಬೇಕು!
ಕೊ.ಕೊ: ಇದು ನೀತಿಶತಕದ ಕೆಲವು ಪ್ರತಿಗಳಲ್ಲಿ ಎರಡನೇ ಪದ್ಯವಾಗಿ ಕಂಡುಬರುತ್ತದೆ. ಆದರೆ ಎಲ್ಲ ಆವೃತ್ತಿಗಳಲ್ಲೂ ಇದು ಇಲ್ಲ. ಹಾಗಾಗಿ ಪ್ರಕ್ಷಿಪ್ತವೆಂದೂ ಪರಿಗಣಿಸಲಾಗಿದೆ.
ಕೊ.ಕೊ.ಕೊ: ಮೂರನೇ ಸಾಲಿನಲ್ಲಿ "ಪರಿಶುಷ್ಯತಿ" ಬದಲು "ಪರಿತುಷ್ಯತಿ" ಎಂಬ ಪಾಠಾಂತರವೂ ಇರುವಂತೆ ತೋರುತ್ತದೆ. ಅರ್ಥದಲ್ಲಿ ಬದಲಾವಣೆ ಇದ್ದರೂ ಅದರಿಂದ ಪದ್ಯದ ಆಶಯದಲ್ಲಿ ಬಹಳ ಹೆಚ್ಚಿನ ಬದಲಾವಣೆ ಏನೂ ಆಗದು.
Rating
Comments
ಉ: ಹಾಳು ಮದನನಿಗೊಂದು ಧಿಕ್ಕಾರ
ಉ: ಹಾಳು ಮದನನಿಗೊಂದು ಧಿಕ್ಕಾರ
ಉ: ಹಾಳು ಮದನನಿಗೊಂದು ಧಿಕ್ಕಾರ
ಉ: ಹಾಳು ಮದನನಿಗೊಂದು ಧಿಕ್ಕಾರ
In reply to ಉ: ಹಾಳು ಮದನನಿಗೊಂದು ಧಿಕ್ಕಾರ by hamsanandi
ಉ: ಹಾಳು ಮದನನಿಗೊಂದು ಧಿಕ್ಕಾರ
ಉ: ಹಾಳು ಮದನನಿಗೊಂದು ಧಿಕ್ಕಾರ
In reply to ಉ: ಹಾಳು ಮದನನಿಗೊಂದು ಧಿಕ್ಕಾರ by melkote simha
ಉ: ಹಾಳು ಮದನನಿಗೊಂದು ಧಿಕ್ಕಾರ
In reply to ಉ: ಹಾಳು ಮದನನಿಗೊಂದು ಧಿಕ್ಕಾರ by melkote simha
ಉ: ಹಾಳು ಮದನನಿಗೊಂದು ಧಿಕ್ಕಾರ
In reply to ಉ: ಹಾಳು ಮದನನಿಗೊಂದು ಧಿಕ್ಕಾರ by melkote simha
ಉ: ಹಾಳು ಮದನನಿಗೊಂದು ಧಿಕ್ಕಾರ