ಸರ್ಕಾರಿ ಕೆಲಸದ ಅರ್ಜಿ- ‍‍ಹಾಸ್ಯ ಲೇಖನ‌

Submitted by pkumar on Sat, 07/14/2012 - 15:18

  ಮೊನ್ನೆ ಅದೇನನ್ನೊ ಹುಡುಕುತಿದ್ದೆ..ಆಗ ಅಲ್ಲಿ ನನ್ನ ಸ್ನೇಹಿತನು ಭರ್ತಿ ಮಾಡಿದ್ದ ಸರ್ಕಾರಿ ಕೆಲಸಕ್ಕೆ ಹಾಕುವ ಅರ್ಜಿ ಕಾಣಿಸಿತು..ಅದು ನ್ಯಾಯಾಲಯದಲ್ಲಿ ಚಾಲಕ ಹುದ್ದೆಗೆ ಹಾಕುವ ಅರ್ಜಿ..

ನೋಡೊನ ಎ೦ದು ಅರ್ಜಿ ಒದುತ್ತಾ ಕುಳಿತೆ..ಅದನ್ನು ಒದಿ ನನಗೆ ನಗು ತಡೆಯಾಲಾಗಲಿಲ್ಲ.ಯಾಕೆ೦ದರೆ ಆ ಅರ್ಜಿಯಲ್ಲಿ ಇದ್ದದ್ದನು ನೀವೆ ಓದಿ.ಅದು ಇ೦ಗ್ಲೀಷ್ ನಲ್ಲಿ ಇತ್ತು..ಕನ್ನಡಕ್ಕೆ ಅನುವಾದಿಸಿ ಹಾಕಿರುವೆ..ಓದಿ..

                                           ಜಿಲ್ಲಾ ಸತ್ರ ನ್ಯಾಯಾಲಯ,ಚಾಲಕ ಹುದ್ದೆಗೆ ಅರ್ಹ ಅಭ್ಯರ್ಥಿಗಳಿ೦ದ ಅರ್ಜಿ ಆಹ್ವಾನ

 

ಹೆಸರು ಗುಂಡಪ್ಪ
ತಂದೆಯ ಹೆಸರು  ಅವರಪ್ಪ
ವಾಸಸ್ಥಳ   ಬೆಂಗಳೂರು
ಜಾತಿ     ಯಾವುದೋ ಒಂದು
ವಯಸ್ಸು  24 
ಮದುವೆ    ಆಗಿದೆ
ವಿದ್ಯಭ್ಯಾಸ
ಪಿಯುಸಿ ಎಸ್ಸೆಸಲ್ಸಿ
100       125
25        35
 
ನೀವು ಮಾನಸಿಕವಾಗಿ ಸ್ಥಿಮಿತವಾಗಿದ್ದೀರಾ:ಇಲ್ಲ ಅಮವಾಸೆ ಪೋರ್ಣಾಮಿಯಲ್ಲಿ ಜಾಸ್ತಿ ಆಗುತ್ತಂತೆ
ನಿಮ್ಮ ಮೇಲೆ ಯಾವುದಾದರು ಕ್ರಿಮಿನಲ್ ಪ್ರಕರಣ ದಾಖಲಾಗಿದಿಯಾ:ಹೌದು.ನಾಲ್ಕು ಕೊಲೆ,3 ದರೋಡೆ
ನೀವು ದೈಹಿಕ ಅಂಗವಿಕಲರೆ:ಹೌದು ಎರಡು ಕಾಲು ಊನವಾಗಿದೆ.(help me)
ನಿಮ್ಮ ಬಳಿ 4 ಚಕ್ರಗಳ ವಾಹನದ ಚಾಲನಾ ಪರವಾನಗಿ ಇದಿಯಾ:ಹೌದು,ಆದರೆ ಎರಡು ಅಪಘಾತ ಮಾಡಿರುವೆ.
ರಾಷ್ಟ್ರೇಯತೆ:ಅಮೇರಿಕನ್
ಆರೋಗ್ಯವಂತ ವ್ಯಕ್ತಿಯೆ:ಎರಡು ಕಣ್ಣು ಹಗಲು ವೇಳೆಯಲ್ಲಿ ಕಾಣುವುದಿಲ್ಲ.
 
     ಅಭ್ಯರ್ಥಿಯ ಸಹಿ
 
      ಇದು ನೋಡದೆ ಕಳಿಸಿದ್ದರೆ ಈ ವೇಳೆಗೆ ಅದನ್ನು ನೋಡಿದವರು ಹುಡುಕಿಕೊ೦ಡು ಬ೦ದು ಹೊಡೆಯುತಿದ್ದರೇನೊ ಗೊತ್ತಿಲ್ಲ,,,,