ಪೈಲ್ವಾನ್ - ಹಿಂದಿನ ಹಳ್ಳಿಯಲ್ಲಿ ಮಾಡಿದ್ದೇನು?!! - ಜಮಾನಾದ ಜೋಕುಗಳು -೩

ಪೈಲ್ವಾನ್ - ಹಿಂದಿನ ಹಳ್ಳಿಯಲ್ಲಿ ಮಾಡಿದ್ದೇನು?!! - ಜಮಾನಾದ ಜೋಕುಗಳು -೩


    ಪೈಲ್ವಾನ್ ಪಾಪಣ್ಣ ಒಂದು ಕಾಡಿನ ಮೂಲೆಯಲ್ಲಿದ್ದ ಹಳ್ಳಿಗೆ ಹೋದ. ಅಲ್ಲಿ ನಾಲ್ಕು ರಸ್ತೆ ಸೇರುವಲ್ಲಿ ನಿಂತು, "ಈ ಊರಿನಲ್ಲಿ ನೀವ್ಯಾರೂ ನನಗೆ ಅನ್ನ-ನೀರು ಕೊಡದೇ ಇದ್ದರೆ, ಹಿಂದಿನ ಹಳ್ಳಿಯಲ್ಲಿ ಮಾಡಿದ್ದನ್ನೇ ಈ ಹಳ್ಳಿಯಲ್ಲೂ ಮಾಡುತ್ತೇನೆ" ಎಂದು ಆವಾಝ್ ಹಾಕಿದ. ಊರವರೆಲ್ಲಾ ಹೆದರಿ ಇವನೇನಾದರೂ ಮಾಡಿಯಾನು ಎಂದು ಹೆದರಿ ಅವನಿಗೆ ಮಟನ್ನು-ಚಿಕನ್ನು ಸಮೇತ ಭರ್ಜರಿ ಊಟವನ್ನೇ ಹಾಕಿದರು. ಆ ಪೈಲ್ವಾನ ಊಟ ಮಾಡಿ ಸುಧಾರಿಸಿಕೊಂಡ ಮೇಲೆ ಒಬ್ಬ ಮುದುಕಿ ಧೈರ್ಯಮಾಡಿ ಕೇಳಿದಳು, "ಸ್ವಾಮಿ, ನಾವು ಊಟ ಹಾಕದಿದ್ದರೆ ಹಿಂದಿನ ಹಳ್ಳೀಲಿ ಮಾಡಿದ್ದನ್ನು ಇಲ್ಲೂ ಮಾಡ್ತೀನಿ ಅಂಥಾ ಹೇಳಿದ್ರಲ್ಲಾ, ಅಲ್ಲೇನು ಮಾಡಿದ್ರಿ?" ಪೈಲ್ವಾನ್, "ಆ ಹಳ್ಳೀಲಿ ಯಾರೂ ಊಟಾ ಹಾಕಲ್ಲ ಅಂದ್ರು ಅದಕ್ಕೇ ಆ ಹಳ್ಳೀನ್ ಬಿಟ್ಟು ಈ ಹಳ್ಳೀಗ್ ಬಂದೆ, ಇಲ್ಲೂ ಯಾರೂ ಊಟಾ ಹಾಕ್ದೇ ಇದ್ದಿದ್ದ್ರೇ ಇಲ್ಲೂ ಅದ್ನೇ ಮಾಡಿ ಮುಂದಿನ್ ಹಳ್ಳೀಗ್ ಹೋಗ್ತಿದ್ದೇ!"

(ವಿ.ಸೂ: ಇದನ್ನು ರಾಮಕೃಷ್ಣ ಮಠದ ಹಿರಿಯ ಸ್ವಾಮೀಜಿಗಳೊಬ್ಬರಿಂದ ಕೇಳಿದ್ದು. ನಾವು ಏನೇನೋ ಮಾಡ್ತೀವಂತ ಜಂಬ ಕೊಚ್ಚಿಕೊಳ್ತೀವಿ ಆದರೆ ಯಾವುದನ್ನೂ ಮಾಡುವುದಿಲ್ಲ ಎನ್ನುವುದನ್ನು ತಿಳಿ ಹೇಳುವುದಕ್ಕೋಸ್ಕರ ಈ ಕತೆಯನ್ನು ಹೇಳುತ್ತಿದ್ದರು)




 

Rating
No votes yet

Comments