ಮೂಢ ಉವಾಚ - 152

ಮೂಢ ಉವಾಚ - 152

ಜಗಕೆ ಕಾರಣ ಒಂದು ಆಧಾರ ಒಂದು 

ಒಂದನೊಂದನು ಕಂಡು ಬೆರಗಾಯಿತೊಂದು |
ಚಂದಕಿಂತ ಚಂದ ಒಂದಕೊಂದರ ನಂಟು 
ಆಧಾರಕಾಧಾರನವನೆ ಮೂಢ || ..303

ಅಲ್ಲೆಲ್ಲ ಇಲ್ಲೆಲ್ಲ ಮೇಲೆಲ್ಲ ಕೆಳಗೆಲ್ಲ
ಎಲ್ಲಿಂದ ಎಲ್ಲಿಗೂ ಮುಗಿದುದೇ ಇಲ್ಲ |
ಅವನೊಬ್ಬನೇ ಜಗದ ಎಲ್ಲೆಯನು ಬಲ್ಲ
ಕಣ್ಣರಳಿ ಬೆರಗಾಗಿ ನಿಂತಿಹನು ಮೂಢ || .304
**************
-ಕ.ವೆಂ.ನಾಗರಾಜ್.
 
Rating
No votes yet

Comments