ಅಮರ..ಮಧುರ..ಪ್ರೇಮ = ಭಾಗ 9
ಮಧುರ ಊರಿಗೆ ಬರುತ್ತೀನಿ ಎಂದು ಒಪ್ಪಿಗೆ ನೀಡಿದ್ದಕ್ಕೆ ಅಮರನ ಸಂತೋಷಕ್ಕೆ ಪಾರವೇ ಇರಲಿಲ್ಲ. ರಾತ್ರಿಯೆಲ್ಲ ನಿದ್ದೆ ಮಾಡದೆ ಅದರ ಬಗ್ಗೆಯೇ ಯೋಚನೆ ಮಾಡುತ್ತಿದ್ದ.
ಹೇಗೋ ಅಂತೂ ಇಂತೂ ನನ್ನ ಜೊತೆ ಬರಲು ಒಪ್ಪಿದ್ದಾಳೆ. ಅಪ್ಪಿ ತಪ್ಪಿಯೂ ಅವಳ ಜೊತೆ ಕೆಟ್ಟದಾಗಿ ವರ್ತಿಸಬಾರದು. ಆ ದಿನ ಪೂರ್ತಿ ಅವಳನ್ನು ಸಂತೋಷವಾಗಿ ಇಟ್ಟಿರಬೇಕು.
ಮರುದಿನ ಕಾಲೇಜಿನಲ್ಲಿ ಮಧುರ ಕಾಣದಿದ್ದಾಗ ಮಧುರಗೆ ಕರೆ ಮಾಡಿದ. ಹಾಯ್ ಮಧುರ ಕಾಲೇಜಿಗೆ ಬಂದಿಲ್ಲವ ಇವತ್ತು?.
ಇಲ್ಲ ಮಧು ಇವತ್ತು ಯಾಕೋ ಮೂಡ್ ಇರಲಿಲ್ಲ ಅದಕ್ಕೆ ಬಂದಿಲ್ಲ ಅಷ್ಟೇ.
ಯಾಕೆ ಮಧು ಏನಾಯ್ತು? ಹುಷಾರಾಗಿ ಇದ್ದೀಯ ತಾನೇ?
ಹುಶಾರಾಗೆ ಇದ್ದೀನಿ ಕಣೋ..ಆದರೆ ಯಾಕೋ ಒಂಥರಾ ಇತ್ತು. ಕಾಲೇಜಿಗೆ ಬರುವ ಮೂಡ್ ಇರಲಿಲ್ಲ ಅಷ್ಟೇ. ನೀನೇನೂ ಜಾಸ್ತಿ ತಲೆ ಕೆಡಿಸಿಕೊಳ್ಳಬೇಡ. ನಾಳೆ ಬೆಳಿಗ್ಗೆ ಹೊರಡೋಣ. ಓಕೆ ಮಧು ನಾನು ಆಮೇಲೆ ಕರೆ ಮಾಡ್ತೀನಿ ಬೈ.
ಅವಳ ಕರೆ ಕಟ್ ಆದ ತಕ್ಷಣ ಪ್ರೇಮ ಕರೆ ಮಾಡಿದಳು. ಹಾಯ್ ಪ್ರೇಮ ಹೇಗಿದ್ದೀಯ? ಮನಸು ಸರಿ ಆಯ್ತಾ?
ಲೋ ಅಮರ್ ನೀನು ತುಂಬಾ ಚೇಂಜ್ ಆಗಿಬಿಟ್ಟೆ ಕಣೋ. ಮೊದಲೆಲ್ಲ ದಿನಕ್ಕೆ ಎಷ್ಟು ಬಾರಿ ಫೋನ್ ಮಾಡ್ತಿದ್ದೆ. ಈಗ ನಾನು ಫೋನ್ ಮಾಡುವವರೆಗೂ ಮಾತಾಡಲ್ಲ ಅಂತ್ಯಲ್ಲ. ದಿಸ್ ಇಸ್ ಟೂ ಬ್ಯಾಡ್ ಕಣೋ. ಮಧುರ ಸಿಕ್ಕ ಮೇಲೆ ಇಷ್ಟೊಂದು ಬದಲಾಗ್ತೀಯ ಎಂದು ಎಣಿಸಿರಲಿಲ್ಲ. ಅಮರ್ ಮನಸಿಗೆ ಬಹಳ ಬೇಜಾರಾಗುತ್ತಿದೆ ಕಣೋ. ನಿನ್ನ ಪ್ರೀತಿಯನ್ನು ಮಿಸ್ ಮಾಡ್ಕೋತಿದೀನಿ ಕಣೋ. ದೇವರು ಯಾಕೆ ಹೀಗೆ ಮಾಡಿದ. ನಮ್ಮಿಬ್ಬರಿಗೆ ಒಂದೇ ರೂಪ ಕೊಟ್ಟರೂ ಒಂದೇ ಗುಣ ಕೊಡಲಿಲ್ಲವಲ್ಲ.
ಪ್ರೇಮ..ಪ್ಲೀಸ್ ಹಾಗೆಲ್ಲ ಮಾತಾಡಬೇಡ ನನಗೂ ಬೇಸರ ಆಗುತ್ತದೆ. ನನಗೆ ನಿನ್ನ ಮನಸಿಗೆ ಬೇಸರ ಉಂಟು ಮಾಡಬೇಕೆಂಬ ಉದ್ದೇಶ ಇಲ್ಲ. ಆದರೆ ಏನು ಮಾಡುವುದು ಪ್ರೇಮ...
ಹ್ಮ್ ಹೋಗಲಿ ಬಿಡು ನನ್ನ ಹಣೆಯಲ್ಲಿ ನಿನ್ನ ಪ್ರೇಮ ಪಡೆಯುವ ಯೋಗ ಬರೆದಿಲ್ಲ ಎನಿಸುತ್ತದೆ. ಅದು ಬಿಡು ಮತ್ತೆ ನಾಳೆ ಏನಪ್ಪಾ ಪ್ಲಾನ್ ಮಾಡಿದ್ಯ ನಿನ್ ಹೀರೋಯಿನ್ ಬರ್ತ್ ಡೇಗೆ? ಏನೇನು ಸ್ಪೆಷಲ್ ಪ್ಲಾನ್ಸ್? ಏನು ಗಿಫ್ಟ್ ಕೊಡ್ತಾ ಇದ್ದೀಯ?
ಇನ್ನೂ ಏನೂ ಪ್ಲಾನ್ ಮಾಡಿಲ್ಲ ಪ್ರೇಮ, ಎಲ್ಲಿಗಾದರೂ ಕರೆದರೆ ಬರಬೇಕಲ್ಲ ನಿನ್ನಕ್ಕ. ಅವಳು ಬಂದರೆ ಮೊದಲು ನೀನಂದಂತೆ ಅವಳಿಗೆ ಚಾಕಲೇಟ್ ಕೇಕ್ ಕೊಡಿಸುತ್ತೇನೆ. ನಂತರ ಏನಾದರೂ ಗಿಫ್ಟ್ ಕೊಡುತ್ತೇನೆ ಅಷ್ಟೇ. ಹೇ ಪ್ರೇಮ ನಿಂದು ಯಾವಾಗ ಬರ್ತ್ ಡೇ.
ಅಯ್ಯೋ ಬಿಡು ನನ್ನ ಬರ್ತ್ ಡೇ ಯಾಕೆ...ಚೆನ್ನಾಗಿ ಎಂಜಾಯ್ ಮಾಡಿ. ಓಕೆ ಹ್ಯಾವ್ ಅ ಗ್ರೇಟ್ ಟೈಮ್.
ಥ್ಯಾಂಕ್ಸ್ ಪ್ರೇಮ ಬೈ.
ಬೈ ಕಣೋ...
ಮಧುರ ಕಾಲೇಜ್ ಗೆ ಬರದಿದ್ದಕ್ಕೆ ಅಮರನಿಗೆ ಏನೋ ಕಳೆದುಕೊಂಡಂತೆ ಇತ್ತು. ಹೇಗಿದ್ದರೂ ನಾಳೆಗೆ ಶಾಪಿಂಗ್ ಮಾಡಬೇಕು ಎಂದುಕೊಂಡು ಅರ್ಧ ದಿನ ಕಾಲೇಜ್ ಬಂಕ್ ಮಾಡಿ ಆಚೆ ಬಂದು ಏನೇನು ತೆಗೆದುಕೊಳ್ಳಬೇಕೋ ಎಲ್ಲ ಕೊಂಡುಕೊಂಡು ಮನೆಗೆ ಹೋಗಿ ಮತ್ತೆ ಮಧುರಗೆ ಫೋನ್ ಮಾಡಿದ. ಹಾಯ್ ಮಧುರ ಈಗ ಹೇಗಿದೆ ನಿನ್ನ ಮೂಡ್? ಎಲ್ಲ ಸರಿ ಹೊಯ್ತ?
ಹಾ ಅಮರ್ ಈಗ ಪರವಾಗಿಲ್ಲ ಕಣೋ. ಮತ್ತೆ ಹೇಗಿತ್ತು ಇವತ್ತು ಕಾಲೇಜ್.
ಹ್ಮ್...ಇವತ್ತು ಅರ್ಧ ದಿನ ಬಂಕ್ ಮಾಡಿ ಆಚೆ ಹೋಗಿದ್ದೆ. ನೀನಿರದೆ ಯಾಕೋ ಇವತ್ತು ಕಾಲೇಜಲ್ಲಿ ಇರಕ್ಕೆ ನನಗೂ ಮೂಡ್ ಇರಲಿಲ್ಲ. ಅದಕ್ಕೆ ಆಚೆ ಹೋಗಿದ್ದೆ.
ಅಬ್ಬ...ಏನು ಇಷ್ಟು ವರ್ಷದಿಂದ ನಾನಿದ್ದೆ ಅಂತಾನೆ ಕಾಲೇಜಿಗೆ ಬರುವ ಹಾಗೆ ಮಾತಾಡ್ತ್ಯಲ್ಲ. ಸುಮ್ಮನೆ ನಾಟಕ ಆಡಬೇಡ. ಅದು ಬಿಡು. ಅಮರ್ ನನಗೆ ಭಯ ಆಗ್ತಾ ಇದೆ ಕಣೋ. ನಾವಿಬ್ಬರೇ ಊರಿಗೆ ಹೋಗುವುದು ಎಂದರೆ, ಅಪ್ಪಿ ತಪ್ಪಿ ಯಾರಾದರೂ ನೋಡಿಬಿಟ್ಟರೆ ಆಮೇಲೆ ನನ್ನ ಕಥೆ ಅಷ್ಟೇ..ಹೀಗೆ ಹೇಳ್ತೀನಿ ಅಂತ ತಪ್ಪು ತಿಳೀಬೇಡ ಕಣೋ...ಕ್ಯಾನ್ಸಲ್ ಮಾಡಿಬಿಡೋಣ ಟ್ರಿಪ್.
ಮಧು ನಿನಗೆ ನನ್ನ ಮೇಲೆ ನಂಬಿಕೆ ಇಲ್ಲದಿದ್ದರೆ ನೇರವಾಗಿ ಹೇಳಿಬಿಡು ನಿನ್ನ ಜೊತೆ ಬರಲು ಇಷ್ಟ ಇಲ್ಲ ಎಂದು. ಅದು ಬಿಟ್ಟು ಹೀಗೆ ಮಾತಾಡಿದರೆ ನನಗೆ ಬಹಳ ಬೇಸರ ಆಗತ್ತೆ. ನೆನ್ನೆ ಇಂದ ನಾನೆಷ್ಟು ಕಾತುರದಿಂದ ಕಾಯುತ್ತಿದ್ದೇನೆ ಗೊತ್ತ ನಿನ್ನ ಜೊತೆ ಊರಿಗೆ ಹೋಗಲು. ಈಗ ನೀನು ಹೀಗೆ ಮಾತಾಡಿದರೆ ಹೇಗೆ. ನಾನು ಹೇಳಿದ್ದೀನಲ್ಲ ನಿನಗ್ಯಾವ ತೊಂದರೆಯೂ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ನನ್ನದು. ಬೆಳಿಗ್ಗೆ ೪ ಗಂಟೆಗೆ ಕಾರ್ ತೆಗೆದುಕೊಂಡು ಪೀಜೀ ಬಳಿ ಬಂದು ನಿನಗೆ ಕರೆ ಮಾಡುತ್ತೇನೆ ಬಾ ಓಕೆನ...
ಆಯ್ತು ಸರ್ ನೀವು ನಂಬಿಕೆ ಇಲ್ಲ ಅಂತ ದೊಡ್ಡ ಮಾತೆಲ್ಲ ಆಡಬೇಡಿ. ಬರುತ್ತೀನಿ ಓಕೆನ ಸರಿ ಬೈ. ಬೇಗ ಮಲಗಿದರೆ ಬೇಗ ಏಳಬಹುದು. ನೀನು ಬೇಗ ಮಲಗು ಓಕೆನ. ಬೈ
ಥ್ಯಾಂಕ್ಸ್ ಮಧುರ ಬೈ.
ಅಮರ್ ಗೆ ನಿದ್ದೆಯೇ ಹತ್ತಲಿಲ್ಲ. ಮರುದಿನ ಬೆಳಿಗ್ಗೆ ಬೇಗನೆ ಏಳಬೇಕು ಎಂದು ಮೂರು ಬಾರಿ ಅಲಾರಂ ಹೊಡೆಯುತ್ತದೆಯ ಇಲ್ಲವೋ ಎಂದು ಪರೀಕ್ಷಿಸಿ ಬೆಳಿಗ್ಗೆ ಮೂರು ಗಂಟೆಗೆ ಅಲಾರಂ ಸಮಯ ನಿಗದಿ ಪಡಿಸಿದ. ಎರಡು ಬಾರಿ ಕಾರ್ ಶೆಡ್ ಗೆ ಹೋಗಿ ಕಾರ್ ಸರಿ ಇದೆಯಾ ಎಂದು ಪರೀಕ್ಷಿಸಿದ. ಅವಳ ಹುಟ್ಟು ಹಬ್ಬಕ್ಕೆ ಏನೇನು ಖರೀದಿ ಮಾಡಿದ್ದನೋ ಅದನ್ನೆಲ್ಲ ಕಾರಿನ ಡಿಕ್ಕಿಯಲ್ಲಿ ಸೇರಿಸಿದ. ಹೊಸದಾಗಿ ಖರೀದಿಸಿದ ಪ್ಯಾಂಟು ಶರ್ಟು ಎಲ್ಲವನ್ನೂ ಸಿದ್ಧಪಡಿಸಿಕೊಂಡ.
ಅವಳ ಜೊತೆ ಹೇಗೆ ವರ್ತಿಸಬೇಕು, ಏನೇನು ಮಾತಾಡಬೇಕು ಬರೀ ಇದೆ ಯೋಚನೆಯಲ್ಲಿ ಮುಳುಗಿದ್ದ
Comments
ಉ: ಅಮರ..ಮಧುರ..ಪ್ರೇಮ = ಭಾಗ 9
In reply to ಉ: ಅಮರ..ಮಧುರ..ಪ್ರೇಮ = ಭಾಗ 9 by vinuhegde
ಉ: ಅಮರ..ಮಧುರ..ಪ್ರೇಮ = ಭಾಗ 9
ಉ: ಅಮರ..ಮಧುರ..ಪ್ರೇಮ = ಭಾಗ 9
In reply to ಉ: ಅಮರ..ಮಧುರ..ಪ್ರೇಮ = ಭಾಗ 9 by Chitradurga Chetan
ಉ: ಅಮರ..ಮಧುರ..ಪ್ರೇಮ = ಭಾಗ 9