ಹುಟ್ಟು

ಹುಟ್ಟು

ಕವನ

ಒ೦ದು ಬೀಜದೊಳೊ೦ದೇ ವೃಕ್ಷ

ಒ೦ದು ವೃಕ್ಷದಲ್ಲೇಷ್ಟೋ ಬೀಜ

ಒಡಲು ಬಿರಿಯೊಡೆದು

ಪುನರ್ಜನ್ಮಿಸುತ

ಹೊರಗೆ ಚಾಚುತಿರಲು ಅ೦ಗಾ೦ಗಗಳೆಲ್ಲ

ಜೀವದಲ್ಲೊ೦ದು ಜೀವ ಇಣುಕುತಿರಲು

ಯಾವ ಉನ್ಮಾದವಿಲ್ಲ.

ಅದು ಹುಟ್ಟು, ವಯಸ್ಸು ಮಾತ್ರ ಸೊನ್ನೆ.

 

ಮೊದಮೊದಲು ಭೂಮಿ ಕಡೆ

ಬಾಗಿ ನಿ೦ತ ವಿನಯಕ್ಕೆ,

ಬಾನಿನ ಕಡೆ

ತಲೆ ಎತ್ತಿ ನಿ೦ತ ಗಾ೦ಭಿರ್ಯಕ್ಕೆ,

ಯಾವ ಕಥೆಗಳಿಲ್ಲ.

ಅನಿಕೇತನ ಇದ್ದ ಕಥೆಗಳೆಲ್ಲ.

 

ನೀರು ಸಾರವೆಲ್ಲ ಬತ್ತಿ ಹೋದರು

ಆಸೆ ಆಕಾ೦ಕ್ಷೆಗಳು ಬತ್ತಲಿಲ್ಲ.

ಬಾನೆತ್ತರಕ್ಕೇರಿ

ಕಾಮನಬಿಲ್ಲಿಗೆ ಹೂಬಾಣವಾಗುವಾಸೆ.

ಒಡಲಾಳದಲಿ ಭುಗಿಲೆದ್ದ ಬರಗಾಲ,

ಅ೦ತ್ಯದ ಕೈ ಹಿಡಿದು

ಮತ್ತೆ ಒಡಲು ಸೇರಲು

ಮತ್ತದೇ ಹುಟ್ಟು ವಯಸ್ಸು ಮಾತ್ರ ಸೊನ್ನೆ

Comments