ನಿನ್ನ ಮೊಗವು ತೋಟವು !

ನಿನ್ನ ಮೊಗವು ತೋಟವು !

ಕವನ

ನಿನ್ನ ಮೊಗವೊಂದು ಹೂವು-ಹಣ್ಣು  ತೋಟವು


ಅರಳಿ ನಿಂತಿದೆ  ಕೆಂಗುಲಾಬಿ


ಕೆಂದಾವರೆಯ ಜೇನಲಿ ದುಂಬಿ ಜ್ಹೇಂಕರಿಸಿದೆ


ಕೆಂಡ ಸಂಪಿಗೆಯು ಸುವಾಸನೆ ಬೀರಿದೆ


ಮಲ್ಲೆ-ಜಾಜಿ ಕಣ್ತಣಿಸುತ್ತಿವೆ .


ಸೇವಂತಿಗೆ ತೂಗಿ ನಲಿದಿದೆ


ತೊಂಡೆ ರಸ-ತುಂಬಿ ಕೆಂಪಾಗಿದೆ


          ಖರೀದಿಗಲ್ಲ ಎನ್ನುತ್ತಿವೆ 


ಆದರೂ ಮಾಗಿ ಹಣ್ಣಾಗಿದೆ ಎಂದು


      ಸಾರಿ, ಸಾರಿ  ಹೇಳುತ್ತಿವೆ.


ಶ್ರೀನಾಗರಾಜ್.


 

Comments