ನನ್ನ ಕಥೆಯ ರಾಜ‌

ನನ್ನ ಕಥೆಯ ರಾಜ‌

ಕವನ

 


ನನ್ನ ಕಥೆಯ ರಾಜ


ದಟ್ಟವಾದ ಕಾಡಿಗೆ


ಹೋದಾಗ ಬೇಟೆಗೆ


ಜಿಂಕೆಗಳ ಹಿಂದೆ ಬಿದ್ದ ಆಸೆ ಅಪ್ಪಿ.


ಸೈನಿಕರು ಹೋದರು ದಾರಿ ತಪ್ಪಿ.


 


ತೆಲೆಯೆತ್ತಿದ.


ಎಷ್ಟೊಂದು ಹಕ್ಕಿಗಳು..!


ಇದ್ದ ಒಂದೇ  ಬಾಣ ನಷ್ಟವಾಗಲಿಲ್ಲ.


ಬಿದ್ದ ಹಕ್ಕಿಗೆ


ತಗುಲಿತು ತನ್ನ ಪಾದ.


ಅದಕೆ ಕಟ್ಟಿತ್ತು


ದೂರದ ಪ್ರೇಯಸಿಗೆ


ತಾನೇ ಬರೆದ ಕಾಗದ.


 


ಮಸುಕು ಮಸುಕು ರಾತ್ರಿ.


ಆ ಕಡೆ ಹುಲಿ, ಈ ಕಡೆ ದರಿ.


ನಡುವೆ ರಥ.


ಇನ್ನೇನು ಹುಲಿ ಹಾರಬೇಕು.


ನೆನಪಾಯ್ತು ಅರಮನೆಯಲೇ


ಬಿಟ್ಟು ಬಂದಿದ್ದ ಕತ್ತಿ ಗುರಾಣಿ.


ಕೈಗೆ ಸಿಕ್ಕಿದ್ದು ಕತ್ತಿಯೆಂದು ಬೀಸಿದ


ಅದು ಚಕ್ರದ ಕಡಾಣಿ..!


 


ಕಾವ್ಯ ಪ್ರೇಮಿ ರಾಜ.


ಮಂತ್ರಿ ಮಂಡಲದ ತುಂಬ


ಕವಿ ಬಳಗ.


ರಣರಂಗದಲ್ಲಿ ಒಬ್ಬನೇ


ಮಾಡಬೇಕಾಯ್ತು  ಕಾಳಗ.


 


ಈಗ ರಾಜನ ಬಳಿ


ಶಕ್ತಿಯುತ ದಂಡು.


ಸಾಕಷ್ಟು ಮದ್ದು ಗುಂಡು.


ಗೆಲ್ಲಲು ಹೋಗಿ ಪರರಾಜ್ಯ


ಕಳೆದುಕೊಂಡ ತನ್ನ ರಾಜ್ಯ.


-------------------------


c v sheshadri holavanahalli.


( " ರೆಕ್ಕೆ ಗೂಡು ಆಕಾಶ "ಸಂಕಲನದಿಂದ )


 

Comments