ಏನಾಗಿದೆ ರಸ್ತೆಯಲ್ಲಿ ಹೆಂಗಸರಿಗೆಲ್ಲ ?

ಏನಾಗಿದೆ ರಸ್ತೆಯಲ್ಲಿ ಹೆಂಗಸರಿಗೆಲ್ಲ ?

 

ಸಂಜೆಯಿಂದ ರಸ್ತೆಯಲ್ಲಿ ಎಲ್ಲರ ಮನೆಯಲ್ಲಿ

ಹೆಂಗಸರಲ್ಲಿ ಎಂತದೊ ಆತಂಕ
ಮನೆಯ ಒಳಗಿನಿಂದ ಗೇಟಿಗೆ 
ಗೇಟಿನಿಂದ ಮನೆಯ ಒಳಕ್ಕೆ ಓಡಾಟ.
 
ಎಲ್ಲರ ಮುಖದಲ್ಲಿ ಎಂತದೊ ದುಗುಡ ಭಾವ
ಛೇ! ಇದೇನಾಯ್ತು ಎಂಬ ಸಂಕಟ ಭಾವ 
ಮುಖದಲ್ಲಿ ತುಂಬಿದ ಅಸಹನೆಯ ಭಾವ
ಮಾತನಾಡಿದರೆ ಸಾಕು ಪರಚುವ ಸಿಡುಕು ಭಾವ
 
ಎಲ್ಲ ಕೇಳಿದ ಗೆಳೆಯನೆಂದ  ಪಾಪ ಏನಾಯ್ತು ಇವರಿಗೆಲ್ಲ 
ಯಾವ ಭೂತ ಹೊಕ್ಕಿತು ಪೂರ್ತಿ ರಸ್ತೆಯನ್ನೆಲ್ಲ
ಮತ್ತೇನಿಲ್ಲ
ಗೆಳೆಯ ಅಂತಹ ಅತಂಕವೇನಿಲ್ಲ ನಿನಗೆ ತಿಳುದುದೆ ಎಲ್ಲ
 
ಸಂಜೆಯಿಂದ ರಸ್ತೆಯಲ್ಲಿ ಎಲ್ಲಿಯು ಕರೆಂಟ್ ಇಲ್ಲ
ಯಾರು ಯಾವ ಸೀರಿಯಲ್ಲು ನೋಡುವ ಹಾಗಿಲ್ಲ.
ಹಾಗಾಗಿ ನಡೆದಿದೆ ಈ ಗಡಿಬಿಡಿ ಎಲ್ಲ
 
 
Rating
No votes yet

Comments