"ಜಿಂದಗಿ ಕೈಸಿ ಹೈ ಪಹೇಲಿ ಹಾಯೆ..."
ಈ ಹಾಡು ರಾಜೇಶ್ ಖನ್ನಾರ ಮಾಸ್ಟರ್ ಪೀಸ್ ಚಿತ್ರಗಳಲ್ಲಿ ಮೊದಲನೆಯ ಸಾಲಿನಲ್ಲಿ ನಿಲ್ಲುವಂತಹದ್ದು ಎನ್ನಬಹುದಾದ "ಆನಂದ್(1971)" ಚಿತ್ರದ್ದು. ಈ ಚಿತ್ರ ನನ್ನ "ಆಲ್ ಟೈಮ್ ಫೇವರಿಟ್" ಕೂಡ ಹೌದು. ಹಾಗೆಯೇ, ಮನ್ನಾ ಡೇ ಹಾಡಿರುವ ಈ ಹಾಡು ಕೂಡ. ಈ ಚಿತ್ರ ಅಂದಿನ ಕಾಲದಲ್ಲಿ ಮಾಮಾಲಾಗಿ ಕಾಣಬಹುದಾಗಿದ್ದ ಸೇಡು, ಹಗೆತನ, ರೊಮ್ಯಾಂಟಿಕ್ ಮುಂತಾದ ಧಾಟಿಯ ಚಿತ್ರಗಳನ್ನು ಮೀರಿದ ಚಿತ್ರವಾಗಿತ್ತು. ಒಂದು ರೀತಿಯ "ಆಫ್ ಬೀಟ್" ಎಂದು ಕರೆಯಬಹುದಾದ ಚಿತ್ರ ಕೂಡ ಹೌದು. ಇದರಲ್ಲಿ ಯಾವ ವಿಲನ್ನೂ ಇಲ್ಲ, ಡಿಶುಂ ಡಿಶುಂ ಕೂಡ ಇಲ್ಲ. ಇದೆಲ್ಲದಕ್ಕಿಂತ ಹೊರತಾಗಿ ಹೃಶಿಕೇಶ್ ಮುಖರ್ಜಿ ತನ್ನ ಜೀವನಾನುಭವವನ್ನ ರಾಜೇಶ್ ಖನ್ನಾ ಮೂಲಕ ಕಾಣಲು ಯತ್ನಿಸಿದರನೋ ಅನ್ನಿಸುವಶ್ಚು ಗಾಢ ಭಾವನೆಗಳುಳ್ಳ ಚಿತ್ರ. ಇಡೀ ಜೀವನದ ಫಿಲಾಸಫಿಯನ್ನ ಎಶ್ಟು ಮಧುರವಾಗಿ, ಅರ್ಥಪೂರ್ಣವಾಗಿ, ಪರಿಣಾಮಕಾರಿಯಾಗಿ ಚಿತ್ರಿಸಲಾಗಿದೆಯಂದರೆ, ಅದನ್ನು ಚಿತ್ರ ನೋಡಿಯೇ ತಿಳಿಯಬೇಕು. ಇನ್ನು ಹಾಡುಗಳ ಬಗ್ಗೆಯಂತೂ ಹೇಳುವ ಹಾಗೇ ಇಲ್ಲ. ಒಂದೊಂದೂ ಮಧುರ, ಅತಿ ಮಧುರ. ಕಹೀ ದೂರ್ ಜಬ್ ದಿನ್ ಢಲ್ ಜಾಯೇ, ಮೈ ತೇರೆ ಲಿಯೇ ಹೀ ಸಾತ್ ರಂಗ್ ಕೆ ಸಪನೆ ಚುನೇ, ಜಿಂದಗಿ ಕೈಸಿ ಹೈ ಪಹೇಲಿ ಹಾಯೆ ಇತ್ಯಾದಿ.
ಆನಂದ್ ಚಿತ್ರದ ವಿಶೇಶಗಳು ಅನೇಕ. ಅಂದಿನ ಕಾಲದ ಸೂಪರ್ ಸ್ಟಾರ್ ರಾಜೇಶ್ ಖನ್ನಾ, ಆನಂತರ ಹಿಂದಿ ಚಿತ್ರರಂಗವನ್ನು ಆಳಿದ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಒಟ್ಟಾಗಿ "ಜಿಗ್ರಿ ದೋಸ್ತ್" ಗಳಾಗಿ ನಟಿಸಿದ್ದು. ರಾಜೇಶ್ ಖನ್ನಾ "ಬಾಬು ಮೊಶಾಯ್" ಎಂದು ಪ್ರೀತಿಯಿಂದ ಕರೆಯುತ್ತಿದ್ದದ್ದು ಆ ಚಿತ್ರ ನೋಡಿದ ಎಲ್ಲರಲ್ಲೂ ಈಗಲೂ ಗುಯ್ ಗುಡುತಿರುತ್ತದೆ. ತೀರಾ ಇತ್ತೀಚಿನ ಹ್ಯಾವೆಲ್ ಫ್ಯಾನ್ ಜಾಹೀರಾತಿನಲ್ಲೂ ಇದನ್ನ ಬಳಸಿಕೊಳ್ಳಲಾಗಿದೆ. ಈ ಜಾಹೀರಾತಿನಲ್ಲಿ ಖನ್ನಾ "ಬಾಬ್ ಮೊಶಾಯ್, ಮೇರಾ ಫ್ಯಾನ್ ಮುಜ್ಸೆ ಕೋಯಿ ನಹಿ ಚೀನ್ ಸಕ್ತಾ" ಎಂದು ತನ್ನ ಫೇಮಸ್ ಸ್ಠೈಲಾದ ಕತ್ತನ್ನ ಅಲುಗಾಡಿಸಿಕೊಂಡು ಹೇಳುವುದು ಈಗಲೂ ಕಣ್ಣ ಮುಂದೆ ಬರುತ್ತದೆ. ಆ ಕಾಲಕ್ಕೆ ಎಲ್ಲರಿಗೂ ಫೇವರಿಟ್ ಆಗಿದ್ದ, ಸುಂದರನಾಗಿದ್ದ ರಾಜೇಶ್ ಖನ್ನಾ ಈ ಜಾಹೀರಾತಿನ ವೇಳೆಗೆ ತನ್ನ ಕೆಟ್ಟ ಜೀವನ ಶೈಲಿ, ಹೆಂಡತಿ ಮಕ್ಕಳಿಂದ ದೂರವಾಗಿ ಒಬ್ಬಂಟಿಯಾಗಿ ಕಾಯಿಲೆಯಿಂದ ನರಳುತ್ತ ಕೃಶವಾಗಿದ್ದ. ಹಿಂದಿ ಚಿತ್ರರಂಗದ ಮೊದಲ ಸೂಪರ್ ಸ್ಟಾರ್ ಎಂದೇ ಎಂದೂ ಕರೆಸಿಕೊಳ್ಳುವ ಖನ್ನಾ ಕೊನೆಯ ದಿನಗಳನ್ನ ಹೀಗೆ ಕಳೆದಿದ್ದು ಮಾತ್ರ ವಿಪರ್ಯಾಸ. ಇದನ್ನೇ ಏನೋ ಆತ ಮುನ್ನೋಡಿ "ಜಿಂದಗಿ ಕೈಸಿ ಹೈ ಪಹೇಲಿ ಹಾಯೆ..." ಎಂದು ಆನಂದ್ ನಲ್ಲಿ ಹಾಡಿದ್ದನೇನೋ ಅನ್ನಿಸುತ್ತೆ. ಆನಂದ್ ಚಿತ್ರಕ್ಕಾಗಿ ರಾಜೇಶ್ ಖನ್ನಾಗೆ ಫಿಲ್ಮ್ ಫೇರ್ ಬೆಸ್ಟ್ ಆಕ್ಟರ್ ಪ್ರಶಸ್ತಿ ಸಿಕ್ಕರೆ, ಅಮಿತಾಭ್ ಗೆ ಬೆಸ್ಚ್ ಸಪೋರ್ಟಿಂಗ್ ಆಕ್ಟರ್ ಪ್ರಶಸ್ತಿ ಸಿಕ್ಕಿತ್ತು. ಆನಂತರ ಇದೇ ಜೋಡಿ ನಮಕ್ ಹರಾಮ್ ನಲ್ಲೂ ನಟಿಸಿತ್ತು. ಆ ಚಿತ್ರದ "ದಿಯೇ ಜಲ್ ತೆ ಹೈ ಫೂಲ್ ಖಿಲ್ ತೆ ಹೈ, ಬಡಿ ಮುಶುಕಿಲ್ ಸೆ ಮಗರ್ ದುನಿಯ ಮೇ ದೋಸ್ತ್ ಮಿಲ್ತೆ ಹೈ" ಸ್ನೇಹದ ಮಹತ್ವವನ್ನು ಎತ್ತಿ ಹಿಡಿಯುವ ಮಧುರ ಗೀತೆ.
Comments
ಉ: "ಜಿಂದಗಿ ಕೈಸಿ ಹೈ ಪಹೇಲಿ ಆಯಿ..."
ಉ: "ಜಿಂದಗಿ ಕೈಸಿ ಹೈ ಪಹೇಲಿ ಆಯಿ..."
In reply to ಉ: "ಜಿಂದಗಿ ಕೈಸಿ ಹೈ ಪಹೇಲಿ ಆಯಿ..." by makara
ಉ: "ಜಿಂದಗಿ ಕೈಸಿ ಹೈ ಪಹೇಲಿ ಆಯಿ..."
In reply to ಉ: "ಜಿಂದಗಿ ಕೈಸಿ ಹೈ ಪಹೇಲಿ ಆಯಿ..." by venkatb83
ಉ: "ಜಿಂದಗಿ ಕೈಸಿ ಹೈ ಪಹೇಲಿ ಆಯಿ..."
In reply to ಉ: "ಜಿಂದಗಿ ಕೈಸಿ ಹೈ ಪಹೇಲಿ ಆಯಿ..." by makara
ಉ: "ಜಿಂದಗಿ ಕೈಸಿ ಹೈ ಪಹೇಲಿ ಆಯಿ..."
ಉ: "ಜಿಂದಗಿ ಕೈಸಿ ಹೈ ಪಹೇಲಿ ಆಯಿ..."
In reply to ಉ: "ಜಿಂದಗಿ ಕೈಸಿ ಹೈ ಪಹೇಲಿ ಆಯಿ..." by ಗಣೇಶ
ಉ: "ಜಿಂದಗಿ ಕೈಸಿ ಹೈ ಪಹೇಲಿ ಆಯಿ..."
ಉ: "ಜಿಂದಗಿ ಕೈಸಿ ಹೈ ಪಹೇಲಿ ಆಯಿ..."
In reply to ಉ: "ಜಿಂದಗಿ ಕೈಸಿ ಹೈ ಪಹೇಲಿ ಆಯಿ..." by lpitnal@gmail.com
ಉ: "ಜಿಂದಗಿ ಕೈಸಿ ಹೈ ಪಹೇಲಿ ಆಯಿ..."
ಉ: "ಜಿಂದಗಿ ಕೈಸಿ ಹೈ ಪಹೇಲಿ ಹಾಯೆ..."
In reply to ಉ: "ಜಿಂದಗಿ ಕೈಸಿ ಹೈ ಪಹೇಲಿ ಹಾಯೆ..." by H A Patil
ಉ: "ಜಿಂದಗಿ ಕೈಸಿ ಹೈ ಪಹೇಲಿ ಹಾಯೆ..."