ಅಮರ..ಮಧುರ..ಪ್ರೇಮ = ಭಾಗ 11
ಇಬ್ಬರೂ ರೆಡಿಯಾಗಿ ಬಂದು ಬಹದ್ದೂರ್ ತಯಾರು ಮಾಡಿದ್ದ ಹಬೆಯಾಡುತ್ತಿದ್ದ ಬಿಸಿ
ಬಿಸಿ ತಟ್ಟೆ ಇಡ್ಲಿ, ವಡೆ ತಿಂದು ಬೋಟಿಂಗ್ ಗೆಂದು ಬಂದರು. ಆಗಷ್ಟೇ ಮಳೆ ನಿಂತಿದ್ದು
ವಾತಾವರಣ ಆಹ್ಲಾದಕರವಾಗಿತ್ತು. ಅಲ್ಲಿ ಬೋಟ್ ನಡೆಸುವವರು ಅಮರ್ ಗೆ ಪರಿಚಿತದವರೇ
ಆಗಿದ್ದರು. ಇಬ್ಬರೂ ಬೋಟ್ ಹತ್ತಿ ಜಲಾಶಯದೊಳಗೆ ಹೊರಟರು. ಎಲ್ಲೆಲ್ಲೂ ಅಗಾಧ
ಪ್ರಮಾಣದ ನೀರು ಅಲ್ಲಲ್ಲಿ ಪುಟ್ಟ ಪುಟ್ಟ ದ್ವೀಪಗಳು. ಮಧುರ ಬಿಟ್ಟ ಕಣ್ಣು
ಬಿಟ್ಟುಕೊಂಡು ನೋಡುತ್ತಿದ್ದಳು. ಅಮರ್ ಅವಳಿಗೆ ಜಲಾಶಯದ ಆಳ ಅಗಲಗಳನ್ನು ಪರಿಚಯ
ಮಾಡಿಕೊಡುತ್ತಿದ್ದ. ಮಧುರಳಿಗೆ ಅದ್ಯಾವುದೂ ಬೇಕಿರಲಿಲ್ಲ ತನ್ನ ಪಾಡಿಗೆ ತಾನು ಆ
ನಯನಮನೋಹರ ದೃಶ್ಯಗಳನ್ನು ತನ್ನ ನಯನಗಳಲ್ಲಿ ತುಂಬಿಕೊಳ್ಳುತ್ತಿದ್ದಳು.
ಮಧುರಳ ಮೊಬೈಲ್ ರಿಂಗಾಯಿತು ನೋಡಿದರೆ ಪ್ರೇಮ ಕರೆಮಾಡಿದಳು. ಮಧುರಳಿಗೆ ಒಂದು ಕ್ಷಣ
ಏನು ಮಾಡಬೇಕೆಂದು ಗೊತ್ತಾಗಲಿಲ್ಲ. ಅಮರ್ ಪ್ರೇಮ ಫೋನ್ ಮಾಡಿದ್ದಾಳೆ. ಏನೆಂದು ಹೇಳಲಿ.
ಕಾಲೇಜ್ ಗೆ ಹೋಗಿಲ್ಲ ಎಂದರೆ ಯಾಕೆ ಎಂದು ಕೇಳುತ್ತಾಳೆ. ನನಗೆ ಭಯ ಆಗುತ್ತಿದೆ.
ಮಧು ಮೊದಲು ಕರೆ ಕಟ್ ಮಾಡು. ಆಮೇಲೆ ರೆಸಾರ್ಟ್ ಗೆ ಹೋದ ಮೇಲೆ ಕ್ಲಾಸಿನಲ್ಲಿದ್ದೆ ಅದಕ್ಕೆ
ಎತ್ತಲಿಲ್ಲ ಎಂದು ಹೇಳು. ಸರಿ ಅಮರ್ ಎಂದು ಕರೆ ಕಟ್ ಮಾಡಿ ಮತ್ತೆ ಜಲಾಶಯದ ನೋಟದ
ಸವಿಯನ್ನು ಅನುಭವಿಸುತ್ತಿದ್ದಳು. ಹೆಚ್ಚೂ ಕಮ್ಮಿ ಮುಕ್ಕಾಲು ಗಂಟೆ ಸುತ್ತಾಡಿ ವಾಪಸ್
ಬರುವಾಗ ಮಳೆ ಶುರುವಾಯಿತು, ಅಲ್ಲಿಯವರೆಗೂ ಬೋಟ್ ನ ಮುಂದೆ ನಿಂತಿದ್ದ ಅವರಿಬ್ಬರೂ ಒಳಗೆ
ಬಂದು ಕುಳಿತರು. ಅಷ್ಟರಲ್ಲಿ ಗಾಳಿ ಜೋರಾಗಿ ಬೀಸಲು ಶುರುವಾಯಿತು. ಅವರು ಕುಳಿತಿದ್ದ ಬೋಟ್
ಅತ್ತಿಂದಿತ್ತ ಇತ್ತಿಂದತ್ತ ವಾಲಲು ಶುರುವಾಯಿತು. ಮಧುರಳಿಗೆ ಗಾಭರಿ ಶುರುವಾಗಿ ಅಮರ್
ಏನೋ ಇದು ಬೋಟ್ ಹೀಗೆಲ್ಲ ಆಗುತ್ತಿದೆ. ಮುಳುಗಿಬಿಟ್ಟರೆ ಏನೋ ನಮ್ಮ ಗತಿ.
ಮಧು ಹೆದರಬೇಡ ಏನೂ ಆಗಲ್ಲ. ಇದೆಲ್ಲ ಸರ್ವೇ ಸಾಮಾನ್ಯ. ಹೆದರುವ ಅಗತ್ಯ ಇ
ಲ್ಲ. ಇನ್ನೇನು ಐದು ನಿಮಿಷದಲ್ಲಿ ದಡ ಸೇರುತ್ತೇವೆ. ನಿನಗಷ್ಟು ಭಯ ಆದರೆ ನನ್ನ
ಕೈ ಹಿಡಿದುಕೊ. ಅದೂ ನಿನಗೇನೂ ಅಭ್ಯಂತರ ಇಲ್ಲದಿದ್ದರೆ.
ಬೇಡ ಬಿಡು ಅಮರ್ ಎನ್ನುತ್ತಿದ್ದಾಗಲೇ ಗಾಳಿ
ಜೋರಾಗಿ ಬೀಸಿ ಬೋಟ್ ಸ್ವಲ್ಪ ಹೆಚ್ಚೇ ವಾಲಿತು. ತಕ್ಷಣ ಮಧುರ ಅಮರನ ಕೈ ಹಿಡಿದುಕೊಂಡಳು.
ಅಮರನ ಮೈಯಲ್ಲಿ ವಿದ್ಯುತ್ ಸಂಚರಿಸಿದಂತಾಯಿತು. ಅಮರ್, ತುಂಬಾ ಭಯ ಆಗ್ತಿದೆ
ಕಣೋ ಬೇಗ ಕರೆದುಕೊಂಡು ಹೋಗು ಎಂದು ಹೇಳೋ ಎಂದು ಅವನ ಭುಜದ ಮೇಲೆ ತಲೆ ಇಟ್ಟು
ಕಣ್ಣು ಮುಚ್ಚಿಕೊಂಡಳು. ಮಧು...ಮಧು...ಬಂದು ಬಿಡ್ತು ನೋಡು ಎಂದು ಅವಳನ್ನು ಎಬ್ಬಿಸಿದ.
ಅವಳು ಮೊದಲು ದೋಣಿಯಿಂದ ಆಚೆ ಬಂದು ಅಮರ್ ಸಾಕಪ್ಪ ಸಾಕು ಬೋಟಿ೦ಗೂ ಸಾಕು
ಈ ಭಯಾನೂ ಸಾಕು. ಅಬ್ಬ ಅಂತೂ ಬದುಕಿ ಬಂದೆವಲ್ಲ. ನಡೀ ಮೊದಲು ಹೋಗಿ ಪ್ರೇಮ ಗೆ ಕರೆ
ಮಾಡಬೇಕು ಇಲ್ಲದಿದ್ದರೆ ಅವಳು ಏನೆಂದು ತಿಳಿಯುತ್ತಾಳೆ.
ವಾಪಸ್ ರೆಸಾರ್ಟ್ ಗೆ ಬಂದು ಒಂದು ಹತ್ತು ನಿಮಿಷ ಫೋನ್ ನಲ್ಲಿ ಮಾತಾಡಿ ನಂತರ
ಊಟ ಮಾಡಿ ಒಂದು ಸುತ್ತು ರೆಸಾರ್ಟ್
ಸುತ್ತು ಹೊಡೆಯಬೇಕಾದರೆ ಅಲ್ಲಿದ್ದ ದೊಡ್ಡ ಫೋಟೋ ನೋಡಿ ಅಮರ್
ಆ ಫೋಟೋದಲ್ಲಿರುವ ವ್ಯಕ್ತಿ ಯಾರು ಎಂದು ಕೇಳಿದಳು. ಅದಾ ಅದು ನಮ್ಮಪ್ಪನ ಫೋಟೋ.
ಹೌದು ಅಮರ್ ಒಂದು ದಿವಸಾನು ನೀನು
ನಿನ್ನ ಅಪ್ಪ ಅಮ್ಮನ ಬಗ್ಗೆ ಹೇಳೇ ಇಲ್ಲ. ನಿಮ್ಮಪ್ಪ ಅಮ್ಮ ಎಲ್ಲಿದ್ದಾರೆ ಏನು ಮ
ಾಡುತ್ತಿದ್ದಾರೆ. ಮಧು ಈಗ ಅದೆಲ್ಲ ಬೇಕಾ ನಾವಿಬ್ಬರೂ ಇಲ್ಲಿ ಬಂದಿರುವುದು ಆರಾಮಾಗಿ
ಸಮಯ ಕಳೆಯಲು ಈಗ್ಯಾಕೆ ಅದೆಲ್ಲ. ಅಮರ್ ಇನ್ನೂ ಈಗ ಒಂದೂವರೆ ಗಂಟೆ ನಮಗಿನ್ನೂ ಬಹಳ
ಸಮಯ ಇದೆ. ಅಲ್ಲದೆ ಈಗ ತಾನೇ ಊಟ ಆಗಿದೆ ಆಮೇಲೆ ಸಫಾರಿ ಹೋಗಿ ಬಂದು
ಇಲ್ಲಿಂದ ಹೊರಟರೆ ಆಯಿತು. ಈಗ ನಿಮ್ಮಪ್ಪ ಅಮ್ಮನ ಬಗ್ಗೆ ಹೇಳು.
ಮಧು ಅವರು ನನ್ನ ತಂದೆ ಮೋಹನ್ ಚಂದ್ರಕಾಂತ್
ಎಂದು. MC ಗ್ರೂಪ್ ಆಫ್ ಕಂಪನೀಸ್ ನ ಚೇರ್ಮನ್. ಚಿಕ್ಕಂದಿನಿಂದ ಅಪ್ಪನಿಗೆ ನನಗಿಂತ ದುಡ್ಡಿನ
ಮೇಲೆ ವ್ಯಾಮೋಹ ಜಾಸ್ತಿ. ಸದಾಕಾಲ ವಿದೇಶಗಳಲ್ಲೇ ಸುತ್ತುತ್ತಾ ಇರುತ್ತಾರೆ. ಯಾವಾಗ
ಲೋ ಎರಡು ತಿಂಗಳಿಗೋ, ಮೂರು ತಿಂಗಳಿಗೋ ಒಮ್ಮೆ ಬಂದು ಮಾತಾಡಿಸಿ ಹೋಗುತ್ತಾರೆ.
ನನಗೆ ಮೊದಲಿನಿಂದ ಅಪ್ಪ ಅಮ್ಮ
ಎಲ್ಲ ಅಮ್ಮನೇ ಆಗಿ ಬೆಳೆಸಿದಳು. ಅಪ್ಪನ ಪ್ರೀತಿಯ ಕೊರತೆ ಬಾರದಂತೆ ನನ್ನನ್ನು ಬೆಳಿಸಿದಳು
. ಆದರೆ ನಾನು ಕಾಲೇಜಿಗೆ ಸೇರಿದ ಮೇಲೆ
ಅಪ್ಪನಿಗೆ ಒಬ್ಬರೇ ಇರಲು ಆಗುತ್ತಿಲ್ಲ ಎಂದು ಅಮ್ಮನನ್ನೂ ಅಲ್ಲಿಗೆ ಕರೆಸಿಕೊಂಡು ಬಿಟ್ಟರು
. ಅವರಿಗೂ ವಯಸ್ಸಾಯ್ತು.
ಅವರ ಸೇವೆ ಮಾಡಲು ಬೇಕಲ್ಲ ಅದಕ್ಕೆ ಅಮ್ಮನನ್ನು ಕರೆಸಿಕೊಂಡಿದ್ದಾರೆ. ಮಧು
ನನಗೆ ಜೀವನದಲ್ಲಿ ಯಾವುದಕ್ಕೂ ಕಮ್ಮಿ ಮಾಡಿಲ್ಲ ನಮ್ಮಪ್ಪ. ಆದರೆ
ನನಗೆ ಜಡವಸ್ತುಗಳಿಗಿಂತ ಪ್ರೀತಿ ನೀಡುವ ಜೀವಂತ ವಸ್ತುಗಳು ಬೇಕೆಂಬುದು ನಮ್ಮಪ್ಪನಿಗೆ
ಅರಿವಾಗಲಿಲ್ಲ. ನಿನಗೆ ಗೊತ್ತ ಬೆಂಗಳೂರಿನಲ್ಲಿ ಬಂಗಲೆಯಂಥ ಮನೆ, ಮನೆ ತುಂಬಾ ಆಳು ಕಾಳು
ಎಲ್ಲರೂ ಇದ್ದಾರೆ. ಅದರೂ ನಾನು ಆ ಮನೆಯಲ್ಲಿ ಒಂಟಿಯೇ. ಕಾಲೇಜ್ ಮುಗಿದ ಮೇಲೆ ಇಲ್ಲಿನ
ಕಂಪೆನಿಗಳನ್ನು ನಾನೇ ನೋಡಿಕೊಳ್ಳಬೇಕು ಎಂದಿದ್ದರು. ಆದರೆ ನನಗೆ ಅದರಲ್ಲಿ ಆಸಕ್ತಿ ಇಲ್ಲ
ಎಂದ ಮೇಲೆ ಈ ರೆಸಾರ್ಟ್ ಅನ್ನು ನೋಡಿಕೊಳ್ಳುವ ಜವಾಬ್ದಾರಿ ನನಗೆ ವಹಿಸಿಕೊಟ್ಟರು.
ನನಗೂ ಇಲ್ಲಿನ ಜಾಗ ಬಹಳ ಪ್ರಿಯವಾದ್ದರಿಂದ ಒಪ್ಪಿಕೊಂಡೆ. ಅಮ್ಮನಿಗೂ ನನ್ನ
ಬಿಟ್ಟಿರಲು ಮನಸಿಲ್ಲ ಆದರೆ ಏನು ಮಾಡುವುದು ಹೆಣ್ಣು ಮಕ್ಕಳಿಗೆ ಯಾವತ್ತೂ ಗಂಡನ ಮಾತೇ
ವೇದವಾಕ್ಯ ಅಲ್ಲವೇ. ಇವಿಷ್ಟು ಮಧು ನನ್ನ ಕಥೆ...ಈಗ ನಡೀ ಸಫಾರಿಗೆ ಹೋಗಿ ಬರೋಣ ಬಂದು
ಇನ್ನೊಮ್ಮೆ ಬೋಟಿಂಗ್ ಹೋಗಿ ಬರೋಣ...
ಏನು!! ಮತ್ತೊಮ್ಮೆ ಬೋಟಿ೦ಗಾ?? ನಿನಗೊಂದು ದೊಡ್ಡ ನಮಸ್ಕಾರ..ಹ್ಹ ಹ್ಹ ಹ್ಹ
ಸುಮ್ಮನೆ ಹೇಳಿದೆ ಮಧು. ಸಫಾರಿಗೆ ಹೋಗಿ ಬಂದ ಮೇಲೆ ನಿನಗೊಂದು ಸರ್ಪ್ರೈಸ್ ಇದೆ. ಅದು
ಮುಗಿದ ಮೇಲೆ ವಾಪಸ್ ಬೆಂಗಳೂರು ಓಕೆನ. ಏನಪ್ಪಾ ಸರ್ಪ್ರೈಸ್??. ಹಲೋ ಸರ್ಪ್ರೈಸ್ ಎಂದ
ಮೇಲೆ ಸರ್ಪ್ರೈಸ್ ಈಗಲೇ ಹೇಳಕಾಗತ್ತ? ನಡೀ ಮೊದಲು ಬೋಟಿಂಗ್ ಅಲ್ಲಲ್ಲ ಸಫಾರಿಗೆ
ಹೋಗೋಣ.
ಕಾಡಿನಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚು ಸುತ್ತಾಡಿದರೂ ಒಂದೇ ಒಂದು ಕಾಡು ನಾಯಿ ಸಹ
ಕಣ್ಣಿಗೆ ಬೀಳಲಿಲ್ಲ. ಏನೋ ಅಮರ್ ಒಂದೇ ಒಂದು ಪ್ರಾಣಿ ಸಹ ಕಾಣಲಿಲ್ಲವಲ್ಲೋ?. ಹ್ಮ್
ಹೌದು ಮಧು ಒಮ್ಮೊಮ್ಮೆ ಹಾಗೇನೆ. ನಾನು ಕಳೆದ ಬಾರಿ ಸ್ನೇಹಿತರ ಜೊತೆ ಬಂದಿದ್ದಾಗ ಕೇವಲ
೨೦ ಮೀಟರ್ ಅಂತರದಲ್ಲಿ ಹುಲಿಯನ್ನು ನೋಡಿದ್ದೆ. ಅದಕ್ಕೂ ಅದೃಷ್ಟ ಇರಬೇಕು. ಅಷ್ಟು
ಸುಲಭವಾಗಿ ಪ್ರಾಣಿಗಳು ಕಾಣುವುದಿಲ್ಲ.
ಮತ್ತೊಂದು ಸ್ವಲ್ಪ ಹೊತ್ತು ಸುತ್ತಾಡಿ ವಾಪಸ್ ರೆಸಾರ್ಟ್ ಗೆ ಬಂದಾಗ ನಾಲ್ಕು
ಗಂಟೆ ಆಗಿತ್ತು. ಅಮರ್ ಹೊರಡೋಣ? ಈಗ ಹೊರಟರೆ ನಾವು ಸೇರುವ ಹೊತ್ತಿಗೆ ೯ ಗಂಟೆ
ಆಗತ್ತೆ. ಓಕೆ ಮಧು ನೀನು ಫ್ರೆಶ್ ಅಪ್ ಆಗಿ ಬಾ ನಾನು ರೆಡಿಯಾಗಿ ಬರುತ್ತೇನೆ.
ಮಧು ಒಳಗೆ ಹೋಗಿ ಫ್ರೆಶ್ ಆಗಿ ಬರುವಷ್ಟರಲ್ಲಿ ಅಮರ್ ಅಲ್ಲಿನ ಚಿತ್ರಣವನ್ನೇ
ಬದಲಾಯಿಸಿಬಿಟ್ಟಿದ್ದ. ಎಲ್ಲೆಲ್ಲೂ ಬಲೂನ್ ಗಳು, ಮಧ್ಯದಲ್ಲಿ ಟೇಬಲ್ ಮೇಲೆ ಚಾಕಲೇಟ್
ಕೇಕ್ ಇಟ್ಟು ಪಕ್ಕದಲ್ಲಿ ನಿಂತು ಬನ್ನಿ ಯುವರಾಣಿಯವರೇ ಎಂದು ಸೇವಕನ ಹಾಗೆ ಬಗ್ಗಿ ನಿಂತ.
ಮಧುರಗೆ ಬಾಯಿಂದ ಮಾತೇ ಹೊರಡಲಿಲ್ಲ. ಸುಮ್ಮನೆ ಅಮರನ ಹತ್ತಿರ ಬಂದು ಅಮರ್ ಏನೋ
ಇದೆಲ್ಲ? ಮಧು ಅಚ್ಚ ಕನ್ನಡದಲ್ಲಿ ಸ್ವಚ್ಛ ಕನ್ನಡದಲ್ಲಿ ಹೇಳಬೇಕೆಂದರೆ ಹುಟ್ಟು ಹಬ್ಬದ
ಶುಭಾಶಯಗಳು ಪ್ಲೀಸ್ ಕೇಕ್ ಕಟ್ ಮಾಡು. ಮಧುರಳ ಕಣ್ಣಲ್ಲಿ ಹನಿ ಮೂಡಿತ್ತು. ಅಮರ್ ಹೇಗೋ
ಇದೆಲ್ಲ? ನಿನಗೆ ಯಾರೋ ಹೇಳಿದ್ದು ನನ್ನ ಹುಟ್ಟಿದ ಹಬ್ಬ ಇವತ್ತು ಎಂದು?
ಮಧು ಅದೆಲ್ಲ ಯಾಕೆ ಇವತ್ತು ನಿನ್ನ ಹುಟ್ಟಿದ ಹಬ್ಬ ತಾನೇ, ಬಾ ಕೇಕ್ ಕಟ್ ಮಾಡು ಎಂದು ಅವಳ
ಕೈ ಹಿಡಿದು ಕೇಕ್ ಬಳಿ ಕರೆದೊಯ್ದ. ಮಧುರ ಕೇಕ್ ಕಟ್ ಮಾಡಿ ಒಂದು ತುಂಡನ್ನು ಅಮರನ ಬಾಯಿಗೆ
ಇಟ್ಟಳು. ಅಮರನೂ ಒಂದು ತುಂಡನ್ನು ತೆಗೆದು ಅವಳ ಬಾಯಿಗೆ ಇಟ್ಟನು. ಮಧು ಒಂದು ನಿಮಿಷ
ಕಣ್ಣು ಮುಚ್ಚು? ಯಾಕೋ? ನೀನು ಮುಚ್ಚು ಎಂದು ಹೇಳಿ ಅವಳ ಕಣ್ಣು ಮುಚ್ಚಿಸಿ ಈಗ ಕಣ್ಣು
ತೆಗಿ ಎಂದು ತನ್ನ ಕೈಯಲ್ಲಿದ್ದ ಉಡುಗೊರೆಯ ಡಬ್ಬಿಯನ್ನು ಅವಳ ಮುಂದೆ ಹಿಡಿದನು. ಅಮರ್
ಏನಿದು? ಮಧು ಸಣ್ಣದೊಂದು ಉಡುಗೊರೆ ನನ್ನ ಮೆಚ್ಚಿನ ಗೆಳತಿಗೆ ಪ್ಲೀಸ್ ತೆಗೆದುಕೋ?
ಅವಳು ಡಬ್ಬಿ ತೆಗೆದು ನೋಡಿದರೆ ಒಳಗೊಂದು ಮುತ್ತಿನ ಹಾರ ಇತ್ತು.
ಅಮರ್ ಏನೋ ಇದೆಲ್ಲ? ದಯವಿಟ್ಟು ನನಗೆ ಇದು
ಬೇಡ ಇಷ್ಟೆಲ್ಲಾ ದುಬಾರಿ ಉಡುಗೊರೆಯನ್ನು ತೆಗೆದುಕೊಳ್ಳುವ ಯೋಗ್ಯತೆ ನನಗಿಲ್ಲ.
ದಯವಿಟ್ಟು ಇದು ನಂಗೆ ಬೇಡ. ಪ್ರೀತಿಯಿಂದ ನೀನು
ಕೇಕ್ ತಿನಿಸಿದೆಯಲ್ಲ ಅದು ಕೊಡುವ ಖುಷಿ ಮುಂದೆ ಇದು ಏನೂ ಅಲ್ಲ ಅನಿಸುತ್ತಿದೆ.
ದಯವಿಟ್ಟು ಇದು ವಾಪಸ್ ತೆಗೆದುಕೋ. ಮಧು...ನನ್ನ ಬಳಿ ಹಣ ಜಾಸ್ತಿ ಇದೆ ಎಂದು
ನಿನಗೆ ಈ ಉಡುಗೊರೆ ಕೊಡುತ್ತಿದ್ದೇನೆ ಎಂದು ಎಣಿಸಬೇಡ. ಯಾಕೋ ಇದು ನಿನಗೆ
ಬಹಳ ಒಪ್ಪುತ್ತದೆ ಎಂದು ತಂದಿದ್ದೇನೆ ಹೊರಟು ಬೇರ್ಯಾವುದೇ ಉದ್ದೇಶ ಇಲ್ಲ.
ನನಗೆ ಗೊತ್ತು ಮಧು ನಿನಗೆ ಇದೆಲ್ಲ ಇಷ್ಟ ಆಗುವುದಿಲ್ಲ ಎಂದು ಆದರೆ ಪ್ಲೀಸ್ ಈ
ಒಂದು ಸಾರಿ ತೆಗೆದುಕೋ ಪ್ಲೀಸ್ ಇಲ್ಲ ಎನ್ನಬೇಡ ಮಧು...ಇದನ್ನು ಹುಡುಕಲು ಒಂದು ದಿನ
ಪೂರ್ತಿ ಹುಡುಕಾಡಿದ್ದೇನೆ. ಪ್ಲೀಸ್...
ಸರಿ ಅಮರ್...ನಿನ್ನ ಮನಸಿಗೆ ನೋವುಂಟು ಮಾಡಬಾರದು ಎಂದು ತೆಗೆದುಕೊಳ್ಳುತ್ತೇನೆ.
ಸರಿ ನಡಿ ಇನ್ನು ಹೊರಡೋಣ. ತಡವಾದರೆ ತೊಂದರೆ ತಪ್ಪಿದ್ದಲ್ಲ.
ತುಂಬಾ ಥ್ಯಾಂಕ್ಸ್ ಮಧು ಎರಡೇ ನಿಮಿಷ ಹೊರಡೋಣ ಒಳಗೆ ಹೋಗಿ
ಬಹದ್ದೂರ್ ಕೈಗೆ ಸಾವಿರದ ಎರಡು ನೋಟು ತುರುಕಿ ಮಜಾ ಮಾಡು ಎಂದು ಆಚೆ ಬಂದು ಕಾರು
ಹತ್ತಿ ಬೆಂಗಳೂರಿನ ಕಡೆ ಆ ದಿನದ ಸವಿ ನೆನಪುಗಳನ್ನು ಮನ ತುಂಬಿಕೊಂಡು ಬರುವಾಗ
ಎಷ್ಟು ಉಲ್ಲಾಸದಿಂದ ಬಂದಿದ್ದರೋ ಹೋಗುವಾಗ ಅದರ ಇಮ್ಮಡಿಯಷ್ಟು ಉಲ್ಲಾಸದಿಂದ ಹೊ
ರಟಿದ್ದರು.
Comments
ಉ: ಅಮರ..ಮಧುರ..ಪ್ರೇಮ = ಭಾಗ 11
In reply to ಉ: ಅಮರ..ಮಧುರ..ಪ್ರೇಮ = ಭಾಗ 11 by makara
ಉ: ಅಮರ..ಮಧುರ..ಪ್ರೇಮ = ಭಾಗ 11
In reply to ಉ: ಅಮರ..ಮಧುರ..ಪ್ರೇಮ = ಭಾಗ 11 by partha1059
ಉ: ಅಮರ..ಮಧುರ..ಪ್ರೇಮ = ಭಾಗ 11
In reply to ಉ: ಅಮರ..ಮಧುರ..ಪ್ರೇಮ = ಭಾಗ 11 by makara
ಉ: ಅಮರ..ಮಧುರ..ಪ್ರೇಮ = ಭಾಗ 11
ಉ: ಅಮರ..ಮಧುರ..ಪ್ರೇಮ = ಭಾಗ 11
ಉ: ಅಮರ..ಮಧುರ..ಪ್ರೇಮ = ಭಾಗ 11