ನೆಹರೂ ಅವಾಕ್ಕಾದದ್ದು! : ಜಮಾನಾದ ಜೋಕುಗಳು -೬

ನೆಹರೂ ಅವಾಕ್ಕಾದದ್ದು! : ಜಮಾನಾದ ಜೋಕುಗಳು -೬


    ಒಮ್ಮೆ ನೆಹ್ರೂ ಅವರು ಭಾರತ ಮತ್ತು ಸೋವಿಯಟ್ ಒಕ್ಕೂಟಗಳ ಪರಸ್ಪರ ಸಂಭಂದ ವೃದ್ಧಿಗಾಗಿ ಆಗಿನ ಸೋವಿಯತ್ ರಷ್ಯಾಕ್ಕೆ ಭೇಟಿ ಕೊಟ್ಟಿದ್ದರು. ಆಗ ಆಧ್ಯಕ್ಷರಾಗಿದ್ದ ಬ್ರೆಝ್ನಿವ್, ನೆಹರೂ ಅವರನ್ನು ಹೆಲಿಕಾಪ್ಟರ‍್ನಲ್ಲಿ ಕೂಡಿಸಿಕೊಂಡು ಮಾಸ್ಕೊ ಪಟ್ಟಣವನ್ನು ತೋರಿಸುತ್ತಿದ್ದರು. ಏನೋ ಮಾತು ಕತೆಯಾಡುತ್ತಾ, ಬ್ರೆಝ್ನಿವ್‍ರವರು ನೆಹ್ರೂರೊಡನೆ ಸಾಂದರ್ಭಿಕವಾಗಿ ಒಂದು ಪ್ರಶ್ನೆಯನ್ನು ಎತ್ತಿದರು. ನಿಮ್ಮ ದೇಶದಲ್ಲಿ ದೊಡ್ಡ-ದೊಡ್ಡ ಊರುಗಳಲ್ಲಿ ಕೂಡ ಜನ ರಸ್ತೆ ಬದಿಯಲ್ಲಿ ನಿಂತು ಮೂತ್ರ ವಿಸರ್ಜನೆ ಮಾಡುವದು ಕಂಡು ಬರುತ್ತದೆ, ಆದರೆ ನಮ್ಮ ದೇಶದಲ್ಲಿ ಹಾಗೆಲ್ಲಾ ಎಲ್ಲೂ ಕಂಡು ಬರುವುದಿಲ್ಲ ಎಂದರು. ಆಗ ನೆಹರೂರವರಿಗೆ ಏನು ಹೇಳಬೇಕೆಂದು ತೋಚದೆ ಕೆಳಗೆ ನೋಡುತ್ತಿದ್ದರಂತೆ. ಅಗ ಅವರಿಗೆ ಹೆಲಿಕಾಪ್ಟರ್‍ನಿಂದ ಮಾಸ್ಕೊ ಪಟ್ಟಣದಲ್ಲಿ ಒಬ್ಬ ವ್ಯಕ್ತಿ ರಸ್ತೆಯ ಬಳಿ ನಿಂತು ಮೂತ್ರ ವಿಸರ್ಜನೆ ಮಾಡುವದು ಕಂಡು ಬಂತು. ಆ ದೃಶ್ಯವನ್ನು ಕಂಡು ನೆಹರೂರವರ ಮುಖ ಊರಗಲವಾಯಿತು, ಅವರು ಬಹಳ ಖುಷಿಯಿಂದ ಅದನ್ನು ರಷ್ಯಾದ ಅಧ್ಯಕ್ಷರಿಗೆ ತೋರಿಸಿ, ನಿಮ್ಮ ದೇಶದಲ್ಲಿ ಕೂಡ ಅಂಥವರು ಇರುವುದಾಗಿ ಹೇಳಿದರು. ರಷ್ಯಾದ ಅಧ್ಯಕ್ಷರಿಗೆ ತಮ್ಮ ಕಣ್ಣುಗಳನ್ನು ತಾವೇ ನಂಬಲಾಗಲಿಲ್ಲ. ಕೂಡಲೇ  ತಮ್ಮ ಕೆಳಗಿನವರಿಗೆ, ವೈರ್-ಲೆಸ್ ಮೂಲಕ ಮಾತನಾಡಿ ಅವನ್ಯಾರೆಂದು ಪತ್ತೆ ಮಾಡಲು ತಿಳಿಸಿದರು. ಆಗ ತಿಳಿದು ಬಂದ ವಿಷಯವೆಂದರೆ ಆ ವ್ಯಕ್ತಿ ಬೇರೆ ಯಾರೂ ಆಗಿರದೆ, ಭಾರತದಿಂದ ರಷ್ಯಾಕ್ಕೆ ನಿಯಮಿತನಾಗಿದ್ದ ರಾಯಭಾರಿಯಾಗಿದ್ದನಂತೆ!

(ಈಗಲೂ ನಮ್ಮ ದೇಶದಲ್ಲಿ ಇದೇ ಪರಿಸ್ಥಿತಿ ಇದೆ, ಅದು ಬೇರೆ ವಿಷಯ.)

 

Rating
No votes yet

Comments