" ಸಂಪದ '' ನಿನಗೆ ಹುಟ್ಟು ಹಬ್ಬದ ಶುಭಾಶಯಗಳು!

" ಸಂಪದ '' ನಿನಗೆ ಹುಟ್ಟು ಹಬ್ಬದ ಶುಭಾಶಯಗಳು!

 


 



"ಸಂಪದ" ನಿನಗಿಂದು ಹುಟ್ಟು ಹಬ್ಬದ ಸಂಬ್ರಮ


ಹಳೆ ಬೇರು ಹೊಸ ಚಿಗುರಿನಲಿ
ಮೊಳೆಯಿತು ಗುಲಾಬಿ ಮೊಗ್ಗೊಂದು
ಮೊಗ್ಗರಳಿ ನಳನಳಿಸಿತು
ಸುಂದರ ಹೂವೊಂದು

 

 ಸಂಪದವೆ ಅರ್ಪಿಸುವೆ 
ಈ ಗುಲಾಬಿಯ ನಿನಗಿಂದು
ನಿನ್ನ ಹುಟ್ಟು ಹಬ್ಬದ ಸಿಹಿ ಸಂಬ್ರಮದ
ನೆನಪಿನ ಕಾಣಿಕೆ ಎಂದು

 

ತುಂಬಿತು ನಿನಗಿಂದು ಏಳರ ಪ್ರಾಯ
ಇಟ್ಟಿರುವೆ ಅಡಿ ನೀ ಎಂಟರ ಹರೆಯಕ್ಕೆ
ಹಾರೈಸುವೆವು ನಾವೆಲ್ಲಾ ಸಂಪದಿಗರೊಡಗೂಡಿ
ಬಾಳು ನೀ ನೂರ್ಕಾಲ ವಟ ವೃಕ್ಷದಂತೆ

 

   ಪ್ರಿಯರೆ,


 ಸಂಪದ ಆರ್ಕೈವ್ ಮೂಲಕ ನನಗೆ ತಿಳಿದ ವಿಶಯ ವೇನಂದರೆ,


" ಸಂಪದ " ನಿರ್ವಾಹಕ ತಂಡದ ಮುಖ್ಯಸ್ತರಾದ ಶ್ರೀಯುತ ಹರಿ ಪ್ರಸಾದ್ ನಾಡಿಗರು ನಮ್ಮನ್ನೆಲ್ಲಾ 'ಸಂಪದ'ಕ್ಕೆ ಸ್ವಾಗತಿಸಿ ಇಂದಿಗೆ ಏಳು ವರುಷ ಗಳಾದವು.


ಆದ್ದರಿಂದ ನಾವೆಲ್ಲಾ ಈ ಸಂತೋಷ ವನ್ನು ಹಂಚಿಕೊಂಡು ಶ್ರೀಯುತ ಹರಿ ಪ್ರಸಾದ್ ನಾಡಿಗರಿಗೆ ಹಾಗೂ


ಇತರ ನಿರ್ವಹಣಾ ತಂಡದವರಿಗೆ ನಮ್ಮ ಶುಭಾಶಯ ಗಳನ್ನು ಬಯಸೋಣ.


ವಂದನೆಗಳು


ರಮೇಶ್ ಕಾಮತ್

Rating
No votes yet

Comments