ಹಸಿರು ಸುಂದರಿ
ಕವನ
ಬೀಜವಾಗಿ ನೆಲದಲ್ಲಿ ಬಿದ್ದೆ
ಮೊಳಕೆಯೊಡೆದು ಮೇಲಕ್ಕೆದ್ದೆ
ಗಿಡವಾಗಿ ಅಂಬೆಗಾಲನ್ನು ಇಟ್ಟೆ
ಹೂ ಬಿಡುವ ಕಾಲದಲ್ಲಿ ಸಾಲಾಗಿ ಬಂದವು ಚಿಟ್ಟೆ
ನೀ ಬೆಳೆಯುವ ವೈಖರಿ ಕಂಡು ಹೆಮ್ಮೆ ಪಟ್ಟವು ವನದ ಹಸಿರು ಸಿರಿಗಳು
ನಿನಗೂ ಅನಿಸುತ್ತಿತ್ತು ಒಳಗೊಳಗೆ ನಾನೆಷ್ಟು ಚೆಂದವೆಂದು
ಹೂ , ಹಣ್ಣು , ದಣಿದು ಬಂದವರಿಗೆ ನೆರಳನ್ನು ಕೊಟ್ಟೆ
ಇರುವವರೆಗೂ ಬೇರೆಯವರಿಗೆ ಆಸರೆಯಾಗಿರಬೇಕು ಎಂಬ ನೀತಿಯನ್ನು ತಿಳಿಸಿಕೊಟ್ಟೆ
ಆದರೆ,ದುಷ್ಟ ಮಾನವ ತನ್ನ ಸ್ವಾರ್ಥಕ್ಕಾಗಿ ನಿನ್ನನ್ನೇ ಬಲಿಕೊಟ್ಟ .
Comments
ಉ: ಹಸಿರು ಸುಂದರಿ