ಹಳೆ ಹುಡ್ಗಿರ ನೆನಪು...

ಹಳೆ ಹುಡ್ಗಿರ ನೆನಪು...

ಕವನ

ಕವಿತೇನೋ..ಕವಿತಾನೋ.
ಯಾರೂ ಬರುತ್ತಿಲ್ಲ. ಎಲ್ಲರೂ
ಎಲ್ಲಿ ಸತ್ತು ಹೋದ್ರೋ..

ಕಲ್ಪನಾ ಇನ್ನೂ ಕೈಕೊಟ್ಟಿಲ್ಲ. ಈಕೆ
ಸದಾ ನನ್ನಲ್ಲಿಯೇ ಇರುತ್ತಾಳೆ.
ಯಾಕೆ..? ಈ ಸತ್ಯ ಇನ್ನೂ
ತಿಳಿದಿಲ್ಲ. ಮೋಸ್ಟ್ಲಿ ಹೃದಯ
ದೊಡ್ಡದು ಅಂತ ಉಳಿದಳೋ
ಏನೋ..

ಹಾ!!!  ದೊಡ್ಡ ಹೃದಯ
ಅವಳದಲ್ಲ. ನನ್ನದು. ಈಗಾಗಲೇ
ಹಲವು ಹುಡುಗಿಯರು ಇಲ್ಲಿ ರಾಂಪ್
ವಾಕ್ ಮಾಡಿದ್ದಾರೆ. ಅದಕ್ಕೇನೆ
ಅದು ಯೋಗರಾಜ್ ಭಟ್ಟರ ಟಾರ್
ಕಿತ್ತೋದ ರೋಡ್ ಆಗಿದೆ..

ಆದ್ರೂ ಏನೋ ಖುಷಿ. ಟಾರ್ ಕಿತ್ತೊದ್
 ರೋಡ್ ಒಂದು ರೀತಿ ಹಳ್ಳಿಯ ಕಾಲು
ದಾರಿಯಾಗಿದೆ. ಯಾರ್ ಬೇಕಾದ್ರು
ಬರಬಹುದು..ಕಾಯ್ತಾ ಇರುತ್ತೇನೆ...
ಜೆಸ್ಟ್ ವೆಲ್ ಕಮ್...

-ರೇವನ್

 

 

Comments