ಕಾಣದ ಪುಳಕಗಳಿಗೆ ಹುಡುಕುವ ಮನ .....
ಹುಡುಕುತಿಹೆ ಎಲ್ಲೆಲ್ಲು
ಹಂಬಲಿಸಿ ನಿತ್ಯವೂ
ಬಾಲ್ಯದಲಿ ಮನಗೆದ್ದ
ಚಹರೆಗಳ, ಸವಿದ
ಪುಳಕಗಳ ....
ತಿಂಗಳ ಬೆಳಕಿನಲಿ
ಅರಳಿದ ಬಾಲ್ಯದ
ಮುಗ್ದತೆಯ
ಅಜ್ಜಿಯ ಏಳು ಮಲ್ಲಿಗೆ
ತೂಕದ ರಾಜಕುಮಾರಿಯ,
ಅಂಗಳದ ಅರಳಿಯ
ನೆರಳಲಿ ಅರಳಿದ
ಶ್ರಮದ ಫಲದ ಸಿಹಿಯ,
ಹರೆಯದ ಹೆಣ್ಣಿನ ಕಣ್ಣಿನಲಿ
ಇಣುಕುತಿಹ ಸಣ್ಣನೆಯ
ನಾಚಿಕೆಯಾ.......
ಅರಸಲೆಲ್ಲಿ ಕಂಡರಿಯದ
ಚಹರೆಗಳ ನಡುವೆ ...
ನಾ ಕಂಡ ಮುಖಗಳ.
ಬರಿ ಗೋಡೆಗಳ
ನಡುವೆ ಬದುಕ ನೂಕುತ್ತ
ನಗೆಯ ಮುಖವಾಡ
ಧರಿಸಿ ಮೆರೆಯುತ್ತಾ
ನಿಜ ಚಹರೆಯ
ಮರೆತವರ ನಡುವೆ ...
ಸುಖದ ಕನಸ ಬೆಂಬೆತ್ತಿ
ಸುಖ ನಿದ್ದೆಗೆ ಸಂಚಕಾರ
ತಂದುಕೊಂಡವರ ನಡುವೆ........
ಕಾಣದ ಪುಳಕಗಳಿಗೆ
ಹುಡುಕುವ ಮನ
ಕಾಣಬಲ್ಲದೆ ಒಂದು ದಿನಾ...
ಕಮಲ ಬೆಲಗೂರ್
Rating
Comments
ಉ: ಕಾಣದ ಪುಳಕಗಳಿಗೆ ಹುಡುಕುವ ಮನ .....:ಕಮಲ ಅವ್ರೆ
In reply to ಉ: ಕಾಣದ ಪುಳಕಗಳಿಗೆ ಹುಡುಕುವ ಮನ .....:ಕಮಲ ಅವ್ರೆ by venkatb83
ಉ: ಕಾಣದ ಪುಳಕಗಳಿಗೆ ಹುಡುಕುವ ಮನ .....:ಕಮಲ ಅವ್ರೆ
ಉ: ಕಾಣದ ಪುಳಕಗಳಿಗೆ ಹುಡುಕುವ ಮನ .....
In reply to ಉ: ಕಾಣದ ಪುಳಕಗಳಿಗೆ ಹುಡುಕುವ ಮನ ..... by Soumya Bhat
ಉ: ಕಾಣದ ಪುಳಕಗಳಿಗೆ ಹುಡುಕುವ ಮನ .....
ಉ: ಕಾಣದ ಪುಳಕಗಳಿಗೆ ಹುಡುಕುವ ಮನ .....
In reply to ಉ: ಕಾಣದ ಪುಳಕಗಳಿಗೆ ಹುಡುಕುವ ಮನ ..... by Chikku123
ಉ: ಕಾಣದ ಪುಳಕಗಳಿಗೆ ಹುಡುಕುವ ಮನ .....
In reply to ಉ: ಕಾಣದ ಪುಳಕಗಳಿಗೆ ಹುಡುಕುವ ಮನ ..... by kamala belagur
ಉ: ಕಾಣದ ಪುಳಕಗಳಿಗೆ ಹುಡುಕುವ ಮನ .....
In reply to ಉ: ಕಾಣದ ಪುಳಕಗಳಿಗೆ ಹುಡುಕುವ ಮನ ..... by Premashri
ಉ: ಕಾಣದ ಪುಳಕಗಳಿಗೆ ಹುಡುಕುವ ಮನ .....