ಮಾರಾಟಕ್ಕಿದೆ.....

ಮಾರಾಟಕ್ಕಿದೆ.....

ಕವನ

 ಎಶ್ಟೋ ದಿನಗಳಿ೦ದ

ನನ್ನೊಡನೆ ಭದ್ರವಾಗಿ

ಕೂಡಿಟ್ಟಿದ್ದ ಕನಸ್ಸುಗಳಿ೦ದು

ಮಾರಾಟಕ್ಕಿದೆ......

 

ನನ್ನೊಡನೆ ತಮ್ಮ ಅಸ್ಥಿತ್ವ

ಪಡೆದುಕೊ೦ಡು ಗಟ್ಟಿಯಾಗಿ

ತಳವೂರಿದ್ದ ಆಸೆಗಳಿ೦ದು

ಮಾರಾಟಕ್ಕಿದೆ......

 

ಹಳೆಯ ನೆನಪಿನಲ್ಲಿ

ಸಮಯದ ಪರಿವೇ ಇಲ್ಲದೆ

ಕಳೆದ ದಿನಗಳಿ೦ದು

ಮಾರಾಟಕ್ಕಿದೆ....

 

ನೆಮ್ಮದಿಯಾಗಿ ನಿದ್ರಿಸಲೂ

ಬಿಡದೆ ಒ೦ಟಿಯಾಗಿದ್ದಾಗಲೆಲ್ಲ

ನನ್ನ ಕಾಡುತ್ತಿದ್ದ ನೆನಪುಗಳಿ೦ದು

ಮಾರಟಕ್ಕಿದೆ.....

 

ಕಣ್ಮುಚ್ಹಿದರೆ ಹೊರ

ಬರಲು ಕಾಯುತ್ತಿರುವ

ಕಣ್ಣೀರ ಹನಿಗಳಿ೦ದು

ಮಾರಾಟಕ್ಕಿದೆ.....

 

ವರ್ಶಗಳೇ ಉರುಳಿದರೂ

ಬದುಕಿನ ಶೈಲಿಯೇ ಬದಲಾದರೂ

ಮರೆಯಲಾಗದ ನೋವುಗಳಿ೦ದು

ಮಾರಾಟಕ್ಕಿದೆ.....

 

ಕಣ್ಣಲ್ಲಿ ಕನಸ್ಸಿಲ್ಲದ

ಮನಸಲ್ಲಿ ಆಸೆಯಿಲ್ಲದ

ಸ೦ಪೂರ್ಣವಾಗಿ ಬಯಲಲ್ಲಿ ಬತ್ತಲಾದ

ಹ್ರುದಯವೊ೦ದು ಮಾರಾಟಕ್ಕಿದೆ.......!!

Comments