ಮೋಡಗಳೇ

ಮೋಡಗಳೇ

ಕೆರೆ ಬಾವಿಗಳು ಬತ್ತಿವೆ ಕನಸುಗಳು ಸತ್ತಿವೆ
ಕುಡಿಯಲೂ ನೀರಿಲ್ಲ , ಇದೆ ಕಣ್ಣ ತುಂಬಾ ನೀರು
ಸಾವು ಬದುಕಿನಾಟದಲಿ  ತತ್ತರಿಸಿಹರು
ಕಾಣದೆ ಮಳೆ ಹೊರಟಿಹರು ಗುಳೆ
ಜೀವಧಾರೆಯನು  ಸುರಿದುಬಿಡಿ
ಕಣ್ಣೀರನು  ಒರೆಸಿಬಿಡಿ
ಮೋಡಗಳೇ ಅತ್ತ ಸಾಗಿರಿ ಬರಗಾಲದೂರಿಗೆ........

ಕಂಗೆಟ್ಟ ಬದುಕಿನಲಿ ಕಪ್ಪೆ,
ಕತ್ತೆಗಳ ಮದುವೆ  ಮೆರವಣಿಗೆಗಳು
ಪೂಜೆ ಪುನಸ್ಕಾರಗಳು
ಓಲೈಸುತಿಹರು   ಒಡನೆಯೇ
ವಸುಂಧರೆಯನು ತೊಯ್ದುಬಿಡಿ
ನಗುವನು ಚೆಲ್ಲಿಬಿಡಿ
ಮೋಡಗಳೇ ಅತ್ತ  ಧಾವಿಸಿರಿ ಸೋದರರೂರಿಗೆ........

Rating
No votes yet

Comments