ಹಿಟ್ಸ್ …..!!!!

ಹಿಟ್ಸ್ …..!!!!

ಕವನ

ಹಿಟ್ಸ್ …..!!!!


ಒಳಗೇನಿರುತ್ತದೆ ಎಂದು ಯಾರಿಗೆ ಗೊತ್ತು
ಸುಮ್ಮನೆ ಏನೋ ಗೀಚಿ
ಅದಕೆ ಕವಿತೆ ಎಂದರಾಯಿತು


ಅವನಿಗೆ ನೂರು, ಇವಳಿಗೆ ಎಪ್ಪತ್ತು
ಅವಳಿಗೆ ಎಂಬ್ಬತ್ತು, ಇವನಿಗೆ ನೂರ ಮೂವತ್ತು
ಛೆ, ನನ್ನ ಕವನ ಯಾರೂ ಯಾಕೆ ಓದುತ್ತಿಲ್ಲ
ಎನ್ನುವ ಕೊರಗಿದೆಯ ಗೆಳೆಯ?!
ಕೊರಗಿದೆಯ ಗೆಳತಿ?!


ಕ್ಲಿಕ್ ಮಾಡದೆ ಒಳಗಿರುವುದನ್ನು ಓದುವ
ದಿವ್ಯ ದೃಷ್ಟಿ ಓದುಗನಿಗೆ ಎಲ್ಲಿದೆ ಹೇಳು


ಸುಮ್ಮನೆ ಏನೋ ಒಂದು ಬರೆದು
ಕವಿತೆ ಎಂದು ತಿಳಿದು
ಅದಕೆ ಒಂದು "ಆಕರ್ಷಕ ಶೀರ್ಷಿಕೆ"
ಕೊಡಲು ಬಂದರಾಯಿತು ನಿನಗೆ
ಸಿಕ್ಕು ಬಿಡುತ್ತವೆ ನೋಡು
ನಿನ್ನ “ಕವಿತೆ”ಗೆ ಇಲ್ಲಿ ಸಾವಿರಾರು ಹಿಟ್ಸ್ …..!!!!


ರಾಜೇಂದ್ರಕುಮಾರ್ ರಾಯಕೋಡಿ - Copyright©

Comments