ದೇವರಲ್ಲಿ ಬೇಡಿಕೆ (ಶ್ರೀ ನರಸಿಂಹ 41)

ದೇವರಲ್ಲಿ ಬೇಡಿಕೆ (ಶ್ರೀ ನರಸಿಂಹ 41)

ಬೇಡಿಕೊಳ್ಳಲೇನಿಹುದು ಮನವೆ ನೀನು ದೇವನಲ್ಲಿ
ನೀಡಿಹ ಎಲ್ಲರಿಗೆ ಎಲ್ಲವ ಅವನು ಜಗದ ಸೃಷ್ಠಿಯಲ್ಲಿ
ಪರರಿಗವನು ಇತ್ತಿಹುದನು ಬಯಸಿ ನೀ ಕೊರಗದಿರು
ಇತ್ತಿಹನು ನಿನಗೆ ಬೇಕಿಹುದ,ಹೆಚ್ಚಾಗಿ ಬಯಸಿದಿರು
 
ಬೇಡದಿರು ನೀ ದೇವನಲಿ ಭೋಗ,ಭಾಗ್ಯಗಳ ವರವ
ಕೋರದಂತಿರು ನೀ ದೇವನಲಿ ಸಿರಿತನದ ಜೀವನವ
ಬೇಡು ಪರರಿಗೆ ತ್ರಾಸವನು ನೀಡದಂತಿರಬೇಕೆಂದು
ಬೇಡು ನೀ ಇರುವನಕ ದೇಹದಾರೋಗ್ಯ ನೀಡೆಂದು
 
ಬೋಗ,ಭಾಗ್ಯಗಳು,ಸಿರಿತನವು ಬರುವವೆಮಗೆ ದೈವೇಚ್ಚೆಯಂತೆ
ನಂಬು ಜಗದ ರಕ್ಷಕ ಶ್ರೀ ನರಸಿಂಹನನು ಮನವೆ ನಿನಗೆ ನಿಶ್ಚಿಂತೆ
 

 

Rating
No votes yet

Comments