ಸ್ವವಿಮರ್ಶೆ......ಒಂದಷ್ಟು ಚಿಂತನೆ
ನಾವೆಂದುಕೊಂಡಿರುವ ಚುರುಕುತನ ಮತ್ತೊಬ್ಬರಲ್ಲಿ ಕಂಡರೆ ಅದು ಅವಸರದ ಬುದ್ಧಿಯಾಗುತದೆ. ನಮಗೆ ಮಿತವ್ಯಯ ಎನಿಸಿದ್ದು ಮತ್ತೊಬ್ಬರಲ್ಲಿ ಕಂಡರೆ ಜಿಪುಣತನ ಎನಿಸುತ್ತದೆ. ನಮ್ಮ ಮಕ್ಕಳು ಹೆಚ್ಚು ಮಾತನಾಡದೆ ಇದ್ದರೆ ಶಾಂತಸ್ವರೂಪಿಗಳು ಅದೇ ಬೇರೆಯವರ ಮಕ್ಕಳಾದರೆ ಅಳುಮುಂಜಿಗಳು. ತಮ್ಮ ಹೆಣ್ಣು ಮಕ್ಕಳು ನಾಲ್ಕು ಮಂದಿಯೊಂದಿಗೆ ನಗುನಗುತ್ತಾ ಮಾತನಾಡಿದರೆ ಸೋಶಿಯಲ್ಲೂ, ಅದೇ ಪಕ್ಕದ ಮನೆಯವರ ಮಗಳು ಹಾಗಿದ್ದರೆ ಚಲ್ಲು ಚಲ್ಲು. ನಮ್ಮ ಅಳತೆಗೋಲೇ ಬೇರೆ, ಬೇರೆಯವರನ್ನು ಅಳೆಯುವ ಅಳತೆಗೋಲೇ ಬೇರೆ. ಈ ರೀತಿಯ ಅಳತೆಗೋಲುಗಳು ಒಬ್ಬೊಬ್ಬರಿಗೆ ಒಂದೊಂದುರೀತಿ.
ತನ್ನ ಹೆಂಡತಿಯ ಬಂಗಾರದ ಬಳೆಗಳನ್ನು ಕದ್ದಿರಬಹುದೆಂಬ ಅನುಮಾನದಿಂದ ಮನೆ ಕೆಲಸದವನಿಗೆ ಪೋಲಿಸರಿಂದ ಕೊಡಿಸಿದ ಏಟುಗಳು, ಬಳೆಗಳು ಹಾಸಿಗೆ ದಿಂಬಿನ ಕೆಳಗೆ ಸಿಕ್ಕಾಗ ಆತನಿಗಾದ ಶಿಕ್ಷೆ ವಾಪಸ್ಸು ಪಡೆಯುವುದು ಹೇಗೆ? ಪರೀಕ್ಷಾ ಕೊಟಡಿಯಲ್ಲಿ ನಕಲು ಮಾಡುತ್ತಿದ್ದ ವಿಧ್ಯಾರ್ಥಿಗೆ ಪರೀಕ್ಷೆಯಿಂದ ಡಿಬಾರ್, ಅದೇ ಅಧ್ಯಾಪಕ ಹಲವು ಪುಸ್ತಕಗಳಿಂದ ಕಾಪಿ ಹೊಡೆದು ಬರೆದ ಥೀಸೀಸಿಗೆ ಡಾಕ್ಟರೆಟ್ ಪ್ರಶಸ್ತಿ. ತಮಗಾದರೆ ಒಂದು ರೀತಿಯ ತೀರ್ಪು, ಮತ್ತೊಬ್ಬರಿಗಾದರೆ ಇನ್ನೊಂದು ರೀತಿಯ ತೀರ್ಪು.
ಈ ರೀತಿಯ ಹಲವಾರು ದ್ವಂದ್ವಗಳನ್ನು ದಿನನಿತ್ಯದಲ್ಲಿ ಕಾಣುತ್ತೇವೆ. ಯಾಕೆ ಹೀಗೆ? ಎಂದು ಹಲವಾರು ಸಾರಿ ಅಂದುಕೊಂಡರೂ ನಮ್ಮ ಅರಿವಿಗೆ ಬಾರದಂತೆ ಕೆಲವೊಮ್ಮೆ ನಮ್ಮಿಂದಲೂ ಈ ರೀತಿಯ ತಪ್ಪುಗಳು ಆಗಿಬಿಡುತ್ತವೆ. ತಪ್ಪುಗಳು ನಮಗೆ ಗೊತ್ತಾದಾಗ ನಮಗೆ ಬಹಳ ಹಿಂಸೆ ಅನಿಸುತ್ತದೆ. ಇಂತಹ ಸಮಯದಲ್ಲಿ ನಮ್ಮನ್ನು ನಾವು ತಿದ್ದಿಕೊಳ್ಳುವ ಕೆಲಸ ಮಾಡಿದರೆ ತಪ್ಪುಗಳ ಜೊತೆಗೆ ದ್ವಂದ್ವವೂ ಕಡಿಮೆಯಾಗಬಹುದು. ಇದು ಅವಶ್ಯವಾಗಿ ಆಗಲೇಬೇಕಾದ ಕಾರ್ಯ.
ಅಂದಿನ ದಿನದ ನಮ್ಮ ನಡವಳಿಕೆ, ಮಾತು, ಭಾವನೆ, ಇವುಗಳ ಸ್ವವಿಮರ್ಶೆಗಾಗಿ ಮಲಗುವಮುಂಚಿನ ಹತ್ತು ನಿಮಿಷ ಸಾಕು. ಚಲನಚಿತ್ರದಂತೆ ನಮ್ಮ ಕಣ್ಣಮುಂದೆ ಇವುಗಳು ಪ್ರದರ್ಶನವಾದಾಗ ನಮ್ಮ ತಪ್ಪು ನಮಗೆ ಅರಿವಾಗುತ್ತದೆ. ಸರಿ ದಾರಿಗಳು ನಮಗೆ ಗೋಚರಿಸುತ್ತದೆ. ಇನ್ನೊಬ್ಬರನ್ನು ಟೀಕಿಸುವ ಮೊದಲು ನಾವು ಹೇಗೆ ಇರಬೇಕು ಎಂಬುದು ಗೊತ್ತಾಗುತ್ತದೆ. ದಿನನಿತ್ಯದ ಆ ಹತ್ತು ನಿಮಿಷ ನಮ್ಮನ್ನು ಬೇರೆ ಲೋಕಕ್ಕೆ ಕರೆದೊಯ್ಯುತ್ತದೆ. ಇದಕ್ಕಾಗಿ ನಾವು ಬಿಡದ ಪ್ರಯತ್ನ ಮಾಡಬೇಕಾಗುತ್ತದೆ. ಈ ಅಭ್ಯಾಸ ಜೀವನವನ್ನು ಸಕಾರಾತ್ಮಕವಾಗಿ ನೋಡುವ ಶಕ್ತಿ ನೀಡುತ್ತದೆ.
ನೀವೇನು ಹೇಳುತ್ತೀರಿ ?
Comments
ಉ: ಸ್ವವಿಮರ್ಶೆ.......................ಒಂದಷ್ಟು ಚಿಂತನೆ
In reply to ಉ: ಸ್ವವಿಮರ್ಶೆ.......................ಒಂದಷ್ಟು ಚಿಂತನೆ by makara
ಉ: ಸ್ವವಿಮರ್ಶೆ.......................ಒಂದಷ್ಟು ಚಿಂತನೆ
ಉ: ಸ್ವವಿಮರ್ಶೆ.......................ಒಂದಷ್ಟು ಚಿಂತನೆ
In reply to ಉ: ಸ್ವವಿಮರ್ಶೆ.......................ಒಂದಷ್ಟು ಚಿಂತನೆ by sathishnasa
ಉ: ಸ್ವವಿಮರ್ಶೆ.......................ಒಂದಷ್ಟು ಚಿಂತನೆ
ಉ: ಸ್ವವಿಮರ್ಶೆ.......................ಒಂದಷ್ಟು ಚಿಂತನೆ
In reply to ಉ: ಸ್ವವಿಮರ್ಶೆ.......................ಒಂದಷ್ಟು ಚಿಂತನೆ by kamala belagur

In reply to ಉ: ಸ್ವವಿಮರ್ಶೆ.......................ಒಂದಷ್ಟು ಚಿಂತನೆ by kavinagaraj
ಉ: ಸ್ವವಿಮರ್ಶೆ.......................ಒಂದಷ್ಟು ಚಿಂತನೆ
ಉ: ಸ್ವವಿಮರ್ಶೆ.......................ಒಂದಷ್ಟು ಚಿಂತನೆ
In reply to ಉ: ಸ್ವವಿಮರ್ಶೆ.......................ಒಂದಷ್ಟು ಚಿಂತನೆ by bhalle
ಉ: ಸ್ವವಿಮರ್ಶೆ.......................ಒಂದಷ್ಟು ಚಿಂತನೆ
In reply to ಉ: ಸ್ವವಿಮರ್ಶೆ.......................ಒಂದಷ್ಟು ಚಿಂತನೆ by bhalle
ಉ: ಸ್ವವಿಮರ್ಶೆ.......................ಒಂದಷ್ಟು ಚಿಂತನೆ