ಆ ದಿನಗಳು...!

ಆ ದಿನಗಳು...!

ಕವನ

ಆಲದ ಮರದ ಕೆಳಗೆ..

ಕುಳಿತ ನನ್ನ ನೆನಪುಗಳಿಗೆ...

ಆಕಾಶದ ನೀಲಿಯಾಕಾರದ ಚಿತ್ರಗಳು....

ನೀ ಕೊರೆದು ಬಿಡಿಸಿದ ರೇಖೆಗಳು...

ಸಂಕೇಶ ಗಿಡದ ಹೂಗಳು..

ಸಾಕ್ಶೀಗಾಗಿ ನಿಲ್ಲುತ್ತವೆ,ಮುಸ್ಸಂಜೆಯಲ್ಲಿ...!


ಆಲದ ಎಲೆಯ ಪೀಪಿಯ ಶಬ್ದ,

ಗುನುಗಿರಲು ನಿನ್ನಲ್ಲಿ...

ಎಲೆಯೊಂದು ಕಚ್ಚಿ ಕಚ್ಚಿ 

ಪೀಪಿಯಾಗಿಸಲು ಸೋತಿದ್ದು....

ಸಾಕ್ಶಿಯಾಗಿ ನಿಲ್ಲುತ್ತವೆ ನಿನ್ನಾ ಬಾಲ್ಯಕ್ಕೆ..!


ನಿನ್ನ ಮುಖದಆ ಗೆರೆಗಳ

ನಾ ಓದಿದ್ದು,ನೆನಪಿನ ನನ್ನಾ ಬಾಲ್ಯಕ್ಕೆ..!


ಆಸೆ ಪಟ್ಟಿದ್ದೆ ಆ ಬೀಜಗಳ

ನನ್ನೆದೆ ಹತ್ತಿರದ ಜಾಗದಲ್ಲಿ ಊರಲು...


ಮೂರು ಎಸೆತದಲ್ಲಿ ಉದುರಿಸಿದ

ಮಾವಿನ ಹಣ್ಣುಗಳ ಗುರಿಯೀಗ

ಗುರಿತಪ್ಪಿ ಬೀಜಗಳನುದುರಿಸಲಿಲ್ಲ...!!

ಅವುದು,ಬಾಲ್ಯವೀಗ ಕಳೆದಹೊತ್ತು..

ಅವುಗಳೀಗ ನಭದ ನತ್ತು...

ಅನ್ಯರ ಹಟದ ಸೊತ್ತು...!?

Comments