ಸಂಡೇ ಸಮಸ್ಯೆ: ಜಮಾನಾದ ಜೋಕುಗಳು - ೮

ಸಂಡೇ ಸಮಸ್ಯೆ: ಜಮಾನಾದ ಜೋಕುಗಳು - ೮

    ತುಂಬು ಗರ್ಭಿಣಿಯಾದ ಗುಂಡನ ಹೆಂಡತಿಗೆ ಭಾನುವಾರದ ದಿವಸ ಬೆಳ್ಳಂಬೆಳಿಗ್ಗೆ ಹೆರಿಗೆ ನೋವು ಕಾಣಿಸಿಕೊಂಡಿತು. ಸರಿಯೆಂದುಕೊಂಡು ಹತ್ತಿರದಲ್ಲೇ ಇದ್ದ ಆಸ್ಪತ್ರೆಗೆ ಹೆಂಡತಿಯನ್ನು ಸ್ಕೂಟರಿನ ಮೇಲೆ ಕೂರಿಸಿಕೊಂಡು ಹೊರಟ. ಹಿಂದಿನ ರಾತ್ರಿ ಬಿದ್ದ ಭಾರಿ ಮಳೆ-ಗಾಳಿಗೆ Dry-Cleaning ಅಂಗಡಿಯ ಬೋರ್ಡೋಂದು  ಆ  ಹೆರಿಗೆಯ ಆಸ್ಪತ್ರೆಯ ಮುಂದೆ ಬಂದು ಬಿದ್ದಿತ್ತು. ಅದನ್ನು ನೋಡಿದವನೇ ಗುಂಡ ಏನು ಮಾಡಬೇಕೆಂದು ತೋಚದೆ ತಲೆಯ ಮೇಲೆ ಕೈಹೊತ್ತು ಕುಳಿತುಕೊಂಡ. ಏಕೆಂದರೆ ಆ ಬೋರ್ಡಿನಲ್ಲಿ ಹೀಗೆಂದು ಬರೆಯಲಾಗಿತ್ತು:   


                                     "Urgent Delivery 8 hours,
                                      Ordinary Delivery 24 hours,
                                      Sunday No Delivery"

 

Rating
No votes yet

Comments