ಕಾಡದಿರಿ ಕನಸುಗಳೇ.

ಕಾಡದಿರಿ ಕನಸುಗಳೇ.

ಕವನ

ಕಾಡದಿರಿ ಕನಸುಗಳೇ ನನ್ನ

     ಸಾಲವನು ಕೊಟ್ಟವನು ಕಾಡುವ ರೀತಿ,

ಹಿಂಬಾಲಿಸದಿರಿ ಕನಸುಗಳೇ ನನ್ನ

     ನೆರಳು ಅಂಟಿದ ರೀತಿ,

ಕೆಣಕದಿರಿ ನನ್ನ ನೀವು

      ಶತ್ರು ಅಣಕಿಸುವ ಹಾಗೆ,

ಬೆಂದೊಡಲಿಗೆ ತಂಪೆರೆಯ ಬನ್ನಿ

      ತಂಗಾಳಿಯ ಹಾಗೆ,

ಬದುಕಲು ಬಿಡಿ ನನ್ನ

       ನಾ ಬಯಸಿದ ಹಾಗೆ.

Comments