ಅಮ್ಮ.......

ಅಮ್ಮ.......

ಕವನ

 ಮತ್ತೊಮ್ಮೆ ನಿನ್ನ ಮಡಿಲಲ್ಲಿ

ಮಗುವಾಗಬೇಕು.....

ಇನ್ನೊಮ್ಮೆ ನಿನ್ನ ಪ್ರೀತಿಯಲ್ಲಿ

ಮುಳುಗೇಳ ಬೇಕು......

 

ಮತ್ತೆ ಹಿ೦ತಿರುಗಬೇಕು 

ನನ್ನ ಬಾಲ್ಯಕ್ಕೆ......!!!

ನಿನ್ನ  ಪ್ರೀತಿಯ ಮನಸಾರೆ ಸವಿಯ ಬೇಕು.....

ನನ್ನೆಲ್ಲ ನೋವ ಕನಸ೦ತೆ ಮರೆಯಬೇಕು.....

 

ನನ್ನವರಾಗದವರಲ್ಲಿ ನಿನ್ನ

ಪ್ರೀತಿಯ ಹುಡುಕಿದೆ

ನಿಜದ ಅರಿವಾಗಿ ಮನಸ್ಸು

ನಗುವುದೇ ಮರೆತಿದೆ.....

 

ನನ್ನೆಲ್ಲ ನೋವು ನನ್ನೊಳಗೇ

ಉಳಿದು ಹೋಗಲಿ

ನಿನ್ನೊರೆಗೆ ತಲುಪಿ ನಿನ್ನ

ನಗು ಮರೆಯಾಗದಿರಲಿ....

 

ನಿನ್ನೊ೦ದು ನಗುವಿಗಾಗಿ ನನ್ನೆಲ್ಲ

ನೋವ ಮೆಟ್ಟಿ ನಿಲ್ಲುವೆ.....

ಅದ್ರುಶ್ಟವಿದ್ದರೆ ಮು೦ದಿನ ಜನ್ಮದಲ್ಲೂ

ನಿನ್ನ ಮಡಿಲಲ್ಲೇ ಹುಟ್ಟಿ ಬರುವೆ........!!

Comments