ವರವ ಕೊಡು ತಾಯೆ ವರಮಹಾಲಕ್ಷ್ಮಿ
ಕವನ
ವರವ ಕೊಡು ತಾಯೆ ವರವ ಕೊಡು ತಾಯೆ
ನಿನ್ನ ನಂಬಿಹ ಜನರ ನೀ ಕಾಯೆ ತಾಯೆ
ವರವ ಕೊಡು ಅಮ್ಮ ವರವ ಕೊಡು ನಮ್ಮಮ್ಮ
ನಿನ್ನ ಭಜಿಸುತ ಕುಂತಿಹೆವು ನಾವಮ್ಮ
ವರವ ಕೊಡು ತಾಯೆ ವರವ ಕೊಡು...
ನಿನ್ನ ಪೂಜೆಗೆಂದೇ ಈ ದಿನವ ಮುಡಿಪಿಟ್ಟು
ಲಕ್ಷ್ಮಿ ಲಕ್ಷ್ಮಿ ಎಂದು ಜಪಿಸುತ್ತಿರುವೆವು ಒಗೊಟ್ಟು
ವರಮಹಾಲಕ್ಷ್ಮಿಯೇ ಒಲಿದು ಬಾ ನಮ್ಮಮ್ಮ
ಕಷ್ಟ ಕಾರ್ಪಣ್ಯಗಳ ಸರಿಸಲು ನೀ ಬಾರಮ್ಮ
ವರವ ಕೊಡು ತಾಯೆ ವರವ ಕೊಡು.....
ಸಿಹಿಯನ್ನು ಮುಂದಿಟ್ಟು ಹಣೆಯಲ್ಲಿ ಬೊಟ್ಟಿಟ್ಟು
ನಿನ್ನ ನಾಮದಿ ನಾವು ಮುಳುಗಿರಲು ಇಂದು
ಬಾರಮ್ಮ ನಮ್ಮಮ್ಮ ನಮ್ಮನೆಯ ಸೇರು
ನಿನಗಾಗಿ ಸಿದ್ದವಿದೆ ನಮ್ಮ ಭಕುತಿಯ ತೇರು
ಬಾರಮ್ಮ ನಮ್ಮಮ್ಮ ಒಲಿದು ನೀ ಬಾರಮ್ಮ
ನಮ್ಮ ಕರೆಯ ನೀ ಸ್ವೀಕರಿಸಮ್ಮ
ವರವ ಕೊಡು ತಾಯೆ ವರವ ಕೊಡು ತಾಯೆ
ನಿನ್ನ ನಂಬಿಹ ಜನರ ನೀ ಕಾಯೆ ತಾಯೆ....
ಸೋಮೇಶ್ ಗೌಡ
Comments
ಉ: ವರವ ಕೊಡು ತಾಯೆ ವರಮಹಾಲಕ್ಷ್ಮಿ
In reply to ಉ: ವರವ ಕೊಡು ತಾಯೆ ವರಮಹಾಲಕ್ಷ್ಮಿ by someshn
ಉ: ವರವ ಕೊಡು ತಾಯೆ ವರಮಹಾಲಕ್ಷ್ಮಿ