ಅಮರ‌..ಮಧುರ..ಪ್ರೇಮ = ಭಾಗ 16

ಅಮರ‌..ಮಧುರ..ಪ್ರೇಮ = ಭಾಗ 16

ಹೀಗೆ ದಿನಗಳು ಕಳೆಯುತ್ತಿದ್ದವು. ಭಾರತದ ಸಮಯಕ್ಕೂ ಜಪಾನಿನ ಸಮಯಕ್ಕೂ ಮೂರೂವರೆ ಗಂಟೆ ವ್ಯತ್ಯಾಸ ಇದ್ದಿದ್ದರಿಂದ ಅಮರ್ ಮಧುರಗೆ ಕರೆ ಮಾಡಬೇಕಾದರೆ ಮಧುರಳ ಲಂಚ್ ಸಮಯಕ್ಕೆ ಅನುಗುಣವಾಗಿ ಕರೆ ಮಾಡುತ್ತಿದ್ದ.  ಸಂಜೆಯ ಹೊತ್ತು ಪೀಜೀಯಲ್ಲಿ ಪ್ರೇಮ ಕೂಡ ಜೊತೆಯಲ್ಲಿ ಇರುವುದರಿಂದ ದಿನಕ್ಕೆ ಒಮ್ಮೆ ಮಾತ್ರ ಮಾತಾಡಲು ಸಾಧ್ಯವಾಗುತ್ತಿತ್ತು. ಅಪರೂಪಕ್ಕೂಮ್ಮೆ ಫೇಸ್ ಬುಕ್ ನಲ್ಲಿ ಚಾಟ್ ಮಾಡುತ್ತಿದ್ದರು.  ಅಮರನಿಗೆ ಎರಡು ವರ್ಷ ಹೇಗೆ ಕಳೆಯುವುದು ಎಂದು ಒದ್ದಾಡುತ್ತಿದ್ದ. ಅಪರೂಪಕ್ಕೆ ಒಮ್ಮೆ ಪ್ರೇಮಗೆ ಕರೆ ಮಾಡುತ್ತಿದ್ದ.

ಅಮರ್ ಜಪಾನ್ ಗೆ ಹೋದ ಮೇಲೆ ಪ್ರೇಮ ಕೂಡ ಸ್ವಲ್ಪ ಬದಲಾಗಿದ್ದಳು. ಓದಿನ ಕಡೆ ಹೆಚ್ಚು ಗಮನ ಕೊಟ್ಟು ಓದುತ್ತಿದ್ದಳು. ಮುಂಚಿನ ಹಾಗೆ ಆಚೆ ಸುತ್ತುವುದು ಎಲ್ಲ ಕಡಿಮೆ ಮಾಡಿದ್ದಳು. ಹೋದರೂ ಅದೂ ಸಹ ಮಧುರಳ ಜೊತೆಯಲ್ಲಿ ಮಾತ್ರ. ಇದರಿಂದ ಮಧುರಗೂ ಸ್ವಲ್ಪ ಸಮಾಧಾನವಾಗಿತ್ತು.

ಅಮರನಿಗೆ ಕೆಲಸದಲ್ಲಿ ಮುಳುಗಿ, ಮಧುರ ಮತ್ತು ಪ್ರೇಮ ಓದಿನಲ್ಲಿ ಮುಳುಗಿ ಒಂದು ವರ್ಷ ಕಳೆದು ಹೋಯಿತು. ಮತ್ತೊಮ್ಮೆ ಪರೀಕ್ಷೆಯ ಸಮಯ ಶುರುವಾಯಿತು. ಒಮ್ಮೆ ಅಮರ್ ಕರೆ ಮಾಡಿದಾಗ ಮಧುರ ಹೇಳಿದಳು, ಅಮರ್ ನೀನೇನೂ ತಪ್ಪು ತಿಳಿಯದಿದ್ದರೆ ಒಂದು ವಿಷಯ ಹೇಳಬೇಕು. ಪರೀಕ್ಷೆಗಳು ಮುಗಿಯುವವರೆಗೂ ಫೋನ್ ಮಾಡಬೇಡ. ಏಕೆಂದರೆ ನೀನು ಫೋನ್ ಮಾಡುವ ಸಮಯದಲ್ಲಿ ನಾನು ಪೀಜೀಯಲ್ಲೇ ಇರುತ್ತೇನೆ. ಪ್ರೇಮ ಕೂಡ ಜೊತೆಯಲ್ಲಿ ಇರುತ್ತಾಳೆ. ಅವಳೆದುರು ಮಾತಾಡಲು ಸಾಧ್ಯವಿಲ್ಲ. ಪ್ಲೀಸ್ ಅರ್ಥ ಮಾಡಿಕೊ

ಮಧು ನನಗೇಕೋ ನೀನು ನನ್ನನ್ನು ದೂರ ಮಾಡುತ್ತಿದ್ದೀಯ ಅನಿಸುತ್ತಿದೆ. ಒಂದು ವರ್ಷದಲ್ಲಿ ನಿನ್ನಲ್ಲಿ ಬಹಳಷ್ಟು ಬದಲಾವಣೆ ಬಂದಿದೆ. ಇತ್ತೀಚಿಗೆ ನಾನು ಫೋನ್ ಮಾಡಿದರೆ ನೀನು ಫೋನ್ ರಿಸೀವ್ ಮಾಡುತ್ತಿಲ್ಲ. ಯಾವಾಗಲಾದರೂ ಒಮ್ಮೆ ಪ್ರೇಮ ಜೊತೆಯಲ್ಲಿ ಇರುತ್ತಾಳೆ ಎಂದರೆ ನಂಬಬಹುದು. ಆದರೆ ನಾನು ಕರೆ ಮಾಡಿದಾಗಲೆಲ್ಲ ಪ್ರೇಮ ನಿನ್ನ ಜೊತೆಯಲ್ಲೇ ಇರುತ್ತಾಳ? ಯಾಕೆ ಮಧು ಹೀಗೆ ಮಾಡ್ತಾ ಇದ್ದೀಯ? ನನ್ನ ಜೊತೆ ಮಾತಾಡುವುದು ಇಷ್ಟವಿಲ್ಲವ?

ಅಮರ್ ಯಾಕೆ ಏನೇನೋ ಮಾತಾಡ್ತಾ ಇದ್ದೀಯ? ಹಾಗೆಲ್ಲ ಏನೂ ಇಲ್ಲ ಅಮರ್. ನನಗೂ ನಿನ್ನೊಡನೆ ಮಾತಾಡಬೇಕೆಂದು ಆಸೆ. ಆದರೆ ಏನು ಮಾಡುವುದು ಪ್ರೇಮ ಜೊತೆಯಲ್ಲಿ ಇದ್ದಾಗಲೇ ನೀನು ಕರೆ ಮಾಡ್ತೀಯ. ಹೋಗಲಿ ಕಟ್ ಮಾಡಿ ಮತ್ತೆ ಮಾಡೋಣ ಎಂದರೆ ನೀನೇನು ಇಲ್ಲೇ ಪಕ್ಕದಲ್ಲಿ ಇದ್ದೀಯ? ಒಂದು ಸಲ ISD ಮಾಡಬೇಕೆಂದರೆ ನೂರು ಇನ್ನೂರು ಬೇಕು. ಹಾಗಾಗಿ ಅದು ಕೂಡ ಸಾಧ್ಯವಿಲ್ಲ. ಇನ್ನು ಫೇಸ್ ಬುಕ್ ನಲ್ಲಂತೂ ಫ್ರೀ ಇದ್ದಾಗ ಚಾಟ್ ಮಾಡೇ ಮಾಡ್ತೀನಿ ತಾನೇ. ಅಮರ್ ಸುಮ್ಮನೆ ಏನೇನೋ ತಲೆ ಕೆಡಿಸಿಕೊಳ್ಳಬೇಡ. ನೋಡು ನೀನು ಹೋಗಿ ಆಗಲೇ ಒಂದು ವರ್ಷ ಕಳೆದೆ ಹೋಯಿತು. ಇನ್ನೇನು ಒಂದು ವರ್ಷ ಅಷ್ಟೇ. ಆಮೇಲೆ ಹೇಗಿದ್ರೂ ವಾಪಸ್ ಬಂದೆ ಬರ್ತೀಯಲ್ಲ. ಅಮರ್ ಅರ್ಥ ಮಾಡ್ಕೋ. ಸುಮ್ಮನೆ ಅಪಾರ್ಥ ಮಾಡಿಕೊಳ್ಳಬೇಡ. ಇಲ್ಲಿ ಪರಿಸ್ಥಿತಿಗಳು ಹಾಗಿದೆ.

ಮಧು, ನನಗೆ ನಿನ್ನ ಮಾತಿನ ಮೇಲೆ ನಂಬಿಕೆ ಇದೆ. ಆದರೆ ಏನು ಮಾಡ್ತೀಯ ಒಮ್ಮೊಮ್ಮೆ ಬಹಳ ಬೇಸರ ಆಗುತ್ತದೆ. ನೀನು ನಂಬಿದರೆ ನಂಬು ಬಿಟ್ಟರೆ ಬಿಡು. ಈ ಒಂದು ವರ್ಷದಲ್ಲಿ ನಾನು ಮನೆಗೆ ಫೋನ್ ಮಾಡಿರುವುದು ಬೆರಳೆಣಿಕೆಯಷ್ಟು ಮಾತ್ರ. ಆದರೆ ನಿನಗೆ ಪ್ರತಿ ದಿನ ಕರೆ ಮಾಡಿದ್ದೇನೆ. ಅಷ್ಟು ಹಚ್ಚಿಕೊಂಡು ಬಿಟ್ಟಿದ್ದೇನೆ ಮಧು ನಿನ್ನನ್ನು. ಹ್ಮ್ಮ್...ಇನ್ನೊಂದು ವರ್ಷ ಯಾವಾಗ ಕಳೆದು ಹೋಗುತ್ತದೆ ಎಂದು ಕಾಯುತ್ತಿದ್ದೇನೆ ಮಧು.

ಆದಷ್ಟು ಬೇಗ ಭಾರತಕ್ಕೆ ಬಂದು ನಿನ್ನನ್ನು ನೋಡಬೇಕು ಎಂದು ಅನಿಸುತ್ತಿದೆ ಮಧು. ಆದರೆ ಏನು ಮಾಡುವುದು ನಾನಿಲ್ಲಿ ಎರಡು ವರ್ಷ ಪೂರ್ತಿ ಮಾಡಲೇ ಬೇಕು. ನಾನು ಯಾಕಾದರೂ ಇಲ್ಲಿಗೆ ಬರಲು ಒಪ್ಪಿಕೊಂಡೆ ಎಂದು ಈಗ ಹಲಬುತ್ತಿದ್ದೇನೆ. ಆದರೆ ಈಗ ಕೊರಗಿ ಪ್ರಯೋಜನ ಏನು?

 

ಅಮರ್, ನಿನಗೆ ಇಷ್ಟೆಲ್ಲಾ ಆಸ್ತಿ  ಐಶ್ವರ್ಯ, ನಿಮ್ಮದೇ ಕಂಪನಿಗಳು ಎಲ್ಲ ಇದ್ದರೂ ನೀನೇಕೆ ಬೇರೆ ಕಡೆ ಕೆಲಸ ಮಾಡಬೇಕು ಎಂದು ಒದ್ದಾಡುತ್ತಿದ್ದೀಯ ಎಂದು ನನಗೆ ಅರ್ಥ ಆಗುತ್ತಿಲ್ಲ. ನಿನ್ನ ಮೊಮ್ಮಕ್ಕಳು ಕೂತು ತಿಂದರೂ ಕರಗದಷ್ಟು ಆಸ್ತಿ ಮಾಡಿಟ್ಟಿದ್ದಾರೆ ನಿಮ್ಮಪ್ಪ. ನೀನು ಮನಸು ಮಾಡಿದರೆ ನೀನೆ ಒಂದು ಕಂಪನಿ ಮಾಲೀಕನಾಗಬಹುದು ನಿನ್ನ ಕೆಳಗೆ ಸಾವಿರಾರು ಜನರನ್ನು ನೇಮಿಸಿಕೊಳ್ಳಬಹುದು. ಆದರೂ ಯಾಕೆ ನೀನು ಹೀಗೆ?

 

ಮಧು ಒಂದು ವಿಷಯ ಹೇಳುತ್ತೇನೆ. ನೀನೆ ಹೇಳಿದ ಹಾಗೆ ಅದೆಲ್ಲ ನಮ್ಮಪ್ಪ ಮಾಡಿದ ಆಸ್ತಿ. ಅದನ್ನು ಅನುಭವಿಸುವ ಇರಾದೆ ನನಗಿಲ್ಲ. ನನಗೆ ನನ್ನ ಸ್ವಂತ ಕಾಲ ಮೇಲೆ ನಿಂತು ದುಡಿಯಬೇಕು ಎನ್ನುವುದೇ ಆಸೆ. ಅದನ್ನು ನನ್ನ ಕಂಪನಿಯಲ್ಲೇ ಮಾಡಬಹುದು ಆದರೆ ಅಲ್ಲಿ ಕೆಲಸ ಮಾಡುವವರು ನನ್ನನ್ನು ಸಹೋದ್ಯೋಗಿಯ ಹಾಗೆ ನೋಡದೆ ಬೇರೆಯೇ ರೀತಿ ನೋಡುತ್ತಾರೆ. ನನಗೆ ಅದೆಲ್ಲ ಇಷ್ಟವಿಲ್ಲ. ಇನ್ನು ನನ್ನ ಕಂಪನಿಯಲ್ಲೇ ಉತ್ತಮ ಹುದ್ದೆಯಲ್ಲಿ ಕೂಡಬಹುದು ಆದರೆ ಅದಕ್ಕೆ ಬೇಕಾದ ಅನುಭವ ಮತ್ತು ಸಾಮರ್ಥ್ಯ ಎರಡೂ ನನ್ನಲ್ಲಿಲ್ಲ. ಅದಕ್ಕೆ ನನಗೆ ಆ ಸಾಮರ್ಥ್ಯ ಬರುವವರೆಗೂ ಬೇರೆ ಕಂಪನಿಯಲ್ಲಿ ದುಡಿದು ಒಂದು ಸಲ ನನ್ನ ಮೇಲೆ ನನಗೆ ನಂಬಿಕೆ ಬಂದರೆ ಆಗ ಮುಂದಿನದನ್ನು ಯೋಚನೆ ಮಾಡುತ್ತೇನೆ.

 

ಮಧು ನಿನ್ನ ನಿರ್ಧಾರ ಕೇಳಿ ಬಹಳ ಸಂತೋಷ ಆಯ್ತು ಕಣೋ. ಎಲ್ಲರೂ ನಿನ್ನಂತೆ ಸ್ವಾಭಿಮಾನಿಗಳು ಆದರೆ ಎಷ್ಟು ಚೆನ್ನಾಗಿರುತ್ತದೆ. ಅಪ್ಪನ ಆಸ್ತಿಯ ಮೇಲೆ ಅವಲಂಬಿತನಾಗದೆ ನಿನ್ನ ಸ್ವಂತ ಕಾಲ ಮೇಲೆ ನೀನು ನಿಲ್ಲಬೇಕು ಎಂದೆಯಲ್ಲ ನಿನಗೆ ನನ್ನ ಕಡೆಯಿಂದ ಆಲ್ ದಿ ಬೆಸ್ಟ್.  ನಿನ್ನ ಎಲ್ಲ ಕೆಲಸಗಳಲ್ಲೂ ನಿನಗೆ ಒಳ್ಳೆಯದಾಗುತ್ತದೆ ಕಣೋ. ಓಕೆ ಅಮರ್ ತುಂಬಾ ಹೊತ್ತಾಗಿದೆ ಇನ್ನು ಪರೀಕ್ಷೆಗಳು ಮುಗಿದ ನಂತರ ನಿನ್ನ ಜೊತೆ ಮಾತಾಡುತ್ತೀನಿ. ಟೆಕ್ ಕೇರ್ ಬೈ.

 

ಬೈ ಮಧು. ನಿನ್ನ ಪರೀಕ್ಷೆಗೆ ಆಲ್ ದಿ ಬೆಸ್ಟ್. ಚೆನ್ನಾಗಿ ಮಾಡು. ಇನ್ನೇನು ನಿನಗೂ ಒಂದೇ ವರ್ಷ ಕಾಲೇಜ್ ಜೀವನ. ನಿನ್ನ ಪರೀಕ್ಷೆ ಮುಗಿಯುವ ವೇಳೆಗೆ ನಾನೂ ಬಂದು ಬಿಡುತ್ತೇನೆ. ಓಕೆ ಮಧು ಬೈ

 

Rating
No votes yet

Comments