ನೆಗಡಿಯ ಮಹಿಮೆ

ನೆಗಡಿಯ ಮಹಿಮೆ

ಕವನ

ಚಿಕ್ಕಂದಿನಿಂದಲೂ ನನಗು ಅದಕ್ಕೂಬಿಡಲಾರದ ನಂಟು

ಹದಿನೈದು ದಿನಕೊಮ್ಮೆ ಭೇಟಿ ಕೊಡುವ ಬಂಧು

ಎಂಥ ಪರಿಸ್ಥಿತಿಯಲ್ಲೂ ಮರ್ಯಾದೆ ತೆಗೆಯುವ ಏಕೈಕ ಸಾಧನ

ಎಲ್ಲರ ಕಾಡುವ ವೈರಿ ಅದೇ ನೆಗಡಿ


ಮಳೆ ನೀರು ಗೋಣಿ ಚೀಲವನ್ನು ತೇವ ಮಾಡುವಂತೆ

ಇದು ನನ್ನ ಕರವಸ್ತ್ರವನ್ನೆಲ್ಲಾ ಒದ್ದೆ ಮಾಡಿಬಿಡುತ್ತದೆ

ಕಣ್ಣನ್ನು ಕೆಂಪಗೆ ಮಾಡುವುದಲ್ಲದೇ

ಒಮ್ಮೊಮ್ಮೆ ಅದರಿಂದಲೂ ನೀರ ಹರಿಸುತ್ತದೆ


ಕಬ್ಬಿಣವನ್ನು ತಗ್ಗಿಸಲು ಕೆಂಡ ಬಳಸುವಂತೆ

ನನ್ನ ತಗ್ಗಿಸಲು ಇದು ಮೂಗನ್ನೆ ಕೆಂಡ ಮಾಡಿಕೊಳ್ಳುತ್ತದೆ

ಸುಡುವ ಕೆಂಡವ ತುಳಿಯಬಹುದು

ಆದರೆ ಉರಿವ ಮೂಗಿನ ಸ್ಥಿತಿ ಹೇಳತೀರದು

ನೆಗಡಿಯ ಮಹಿಮೆಯನು ಮರೆಯಾಲಾಗದು.|






 

Comments