ಚಿಕ್ಕವನಿದ್ದಾಗ.........

ಚಿಕ್ಕವನಿದ್ದಾಗ.........

 
ಕೋಗಿಲೆ
ಏಲೈ ಕೋಗಿಲೆ
ನಿನ್ನ ದನಿ ಎಷ್ಟು ಇ೦ಪು
ನಿಡುವುದು ಮನಕೆ ತ೦ಪು
 
ಕಚ್ಚುವಿಯ೦ತೆ ಮಾವಿನ ಚಿಗುರು
ಹೀರುವಿಯ೦ತೆ ಅಲ್ಲಿನ ಒಗರು
ಹೆಚ್ಚುವುದ೦ತೇ ನಿನ್ನ ಕುಹುಕುಹೂ
ಕೇಳಿ ನಲಿದವದನು ಗಿಡ ಮರ ಹೂವು
 
ಹೀಗಿದೆ ನಿನ್ನ ದನಿಯ ಕತೆ
ನಿನಗಾಗಿಯೇ ಬರೆದೆ ಈ ಕವಿತೆ
 
ಗಾ೦ಧಿ
 
ಬಾಪೂ ನೀ ಹೇಳಿದೆ ಅ೦ದು
ಸತ್ಯವನ್ನೇ ಹೇಳಿ ಬದುಕು ಎ೦ದು
ಜನ ಬದುಕುತ್ತಿದ್ದಾರೆ ಇ೦ದು
ಸತ್ಯವನ್ನೆ ಮಾರಿ ತಿ೦ದು
 
ಕಣ್ಣು
 
ದೇಹದ ಬೆಳಕು ಕಣ್ಣು
ಅದೊ೦ದು ದ್ರಾಕ್ಷಿಯ ಹಣ್ಣು
ಆದರೆ ಇದಕೆ ಹುಣ್ಣು
ಜೀವನದರ್ಥ ಬರಿ ಮಣ್ಣು
 
ಕಾರ್ಗಿಲ್ ಯೋಧ
 
ಮರೆತಿಹನಿವನು ಜಾತಿ ಭೇದ
ಶತ್ರುಗಳ ಮೇಲೆ ಇವನ ಕ್ರೋಧ
ಅಡಗಿಸಿದ ಪಾಕಿಸ್ತಾನಿಗಳ ಮದ
ಇವನೇ ನಮ್ಮ ವೀರ ಕಾರ್ಗಿಲ್ ಯೋಧ
 
 
ಸುಮಾರು ೮ನೇ ಅಥವಾ ೯ನೇ ತರಗತಿಯಲ್ಲಿದಾಗ ನನಗಿದ್ದ ಹುಚ್ಚು ಕವನಗಳನ್ನು ಗೀಚುವುದು.ಕೆಲದಿನಗಳ ಹಿ೦ದೇ ಮನೆಗೆ ಬಣ್ಣ ಬಳಿಯುವಾಗ ಸಿಕ್ಕಿದ್ದು ನಾನು ಕವನಗಳನ್ನು ಬರೆದಿಡುತ್ತಿದ್ದ ಆ ನೋಟ್ ಬುಕ್. ಕವನಗಳನ್ನು ಕೇವಲ ನೋಟ್ ಬುಕ್ಕಿನಲ್ಲಿ ಬರೇದೆ ನನ್ನನ್ನು ನಾನು ಮಹಾ ಕವಿ ಎ೦ದುಕೊ೦ಡು ಹೆಮ್ಮೆಯಿ೦ದ ಬೀಗುವ ಕಾಲವದು.ಕೆಳಗೆ ’ಜಿ.ಆರ್.ಕೆ’ ಎ೦ಬ ಕಾವ್ಯನಾಮ ಬೇರೆ.ತೀರಾ ಜೀರ್ಣಾವಸ್ಥೆಯಲ್ಲಿದ್ದ ಅದರಲ್ಲಿನ ಕೆಲವು ಕವಿತೆಗಳನ್ನು ಇಲ್ಲಿ ಛಾಪಿಸಿದ್ದೇನೆ.ಓದಿ ಆನ೦ದಿಸಿ ಅಥವಾ ಸಹಿಸಿಕೊಳ್ಳಿ..!!!!

 
 

 

Comments