ಭಜೆ ಭಜೆ...ಗೋಳಿಬಜೆ

ಭಜೆ ಭಜೆ...ಗೋಳಿಬಜೆ


ತಡೀರಿ..ತಡೀರಿ...ಸ್ವಲ್ಪ ತಡೀರಿ..


ತಟ್ಟೆಗೆ ಕೈ ಹಾಕಬೇಡಿ.. ಇದು ಮೊನ್ನೆ ಮಾಡಿದ್ದು. ಈವಾಗ ತಿನ್ನಲು ಚೆನ್ನಾಗಿರೊಲ್ಲ. ಫ್ರೆಶ್ ಆಗಿ ಮಾಡಿ, ಬಿಸಿಬಿಸಿ ಇರುವಾಗಲೇ, ಕಾಯಿ ಚಟ್ನಿಯೊಂದಿಗೆ ತಿಂದರೇ.............ನೀವೂ ನನ್ನ ಹಾಗೇ ಗೋಳೀಬಜೆಯ ಭಜನೆ ಮಾಡುವಿರಿ!


ಮಂಗಳೂರಿಗರು ಹೋಟಲಲ್ಲಿ ಕುಳಿತು ಬಿಸಿಬಿಸಿ ಚರ್ಚೆ ಮಾಡುತ್ತಿದ್ದಾರೆ ಅಂದರೆ :


-ಹೊರಗೆ ಜಡಿ ಮಳೆ ಸುರಿಯುತ್ತಿದೆ- ಪ್ಲೇಟಲ್ಲಿ ಗೋಳಿಬಜೆ ಖಾಲಿಯಾಗುತ್ತಿದೆ ಅಂತಲೇ ಲೆಕ್ಕ-ನಮ್ಮ ಕಾಲದಲ್ಲಿ. ಈಗ...............


ಆ ವಿಷಯ ಬಿಡಿ. ಗೋಳಿಬಜೆ ಮಾಡುವುದು ಹೇಗೆಂದು ಹೇಳುವೆ. ಜಾಸ್ತಿ ಸಮಯ ಬೇಡ. ಇತ್ಲಾಗೆ ಟೀ ಕುದಿಯುವಾಗ ಅತ್ಲಾಗೆ ಗೋಳಿಬಜೆ ರೆಡಿ ಮಾಡಬಹುದು.


ಮೈದಾ ಹಿಟ್ಟು, ಸ್ವಲ್ಪ ಮೊಸರು, ಚಿಟಿಕೆ ಸೋಡಾ, ಚೂರು ಹಸಿಮೆಣಸು (ಸಣ್ಣಗೆ ಕತ್ತರಿಸಿ), ರುಚಿಗೆ ತಕ್ಕ ಉಪ್ಪು ಬೆರೆಸಿ, ಕಲಸಿ ಇಟ್ಟುಕೊಳ್ಳಿ. ಸಣ್ಣಸಣ್ಣ ಉಂಡೆ ಮಾಡಿ ಎಣ್ಣೆಯಲ್ಲಿ ಹಾಕಿ ಕಾಯಿಸಿ. ಇಷ್ಟೇ.. (ಕೆಲವರು ಶುಂಠಿ, ಕೊತ್ತಂಬರಿ ಸೊಪ್ಪು, ಕಡ್ಲೆಹಿಟ್ಟು ಇತ್ಯಾದಿ ಸೇರಿಸುವರು)


ಗೋಳಿಬಜೆ ತಿನ್ನುವಾಗ ಏನು ಬಿಸಿಬಿಸಿ ಚರ್ಚೆ ಮಾಡಿದಿರಿ ಎಂದು ನನಗೂ ತಿಳಿಸಿ..:)


-ಗಣೇಶ.

Rating
No votes yet

Comments