ಮೂಢ ಉವಾಚ - 154

ಮೂಢ ಉವಾಚ - 154

ಚಿತ್ತವದು ದೂರವಿರೆ ರೂಪ ರಸ ಗಂಧದಿಂ

ಮೇಣ್ ಕೇಳದಿರೆ ಶಬ್ದ ತಿಳಿಯದಿರೆ ಸ್ಪರ್ಶ |

ನಿಂತೀತು ಮನವು ದೇವಸಾಮೀಪ್ಯದಲಿ

ಭಕ್ತಿಯೇ ಸಾಧನವು ಇದಕೆ ಮೂಢ || ..307


ದೇವನನು ಬಯಸುವ ಉತ್ಕಟತೆ ಭಕ್ತಿ

ಪ್ರೀತಿಯಾಮೃತದ ರಸಧಾರೆ ಭಕ್ತಿ |

ಭಕ್ತಿಯದು ಸಾಧಿಸಲು ಬೇರೇನು ಬೇಕಿಲ್ಲ

ಒಳಗೊಳಗೆ ಆನಂದ ಚಂದ ಮೂಢ || ..308

*************
-ಕ.ವೆಂ.ನಾಗರಾಜ್.
Rating
No votes yet

Comments