ವಿಶ್ವದ ಎಂಟನೇ 'ಹಾಟ್ ಸ್ಪಾಟ್'

ವಿಶ್ವದ ಎಂಟನೇ 'ಹಾಟ್ ಸ್ಪಾಟ್'

ಹಿಮಾಲಯ ಪರ್ವತಗಳಿಗಿಂತಲೂ ಹಳೆಯದಾಗಿರುವ, ಪಶ್ಚಿಮ ಘಟ್ಟಗಳ ಪರ್ವತ ಸರಣಿ ಅನನ್ಯ ಪ್ರಾಕೃತಿಕ ಜೀವ ಮತ್ತು ಪರಿಸರ ಪ್ರಕ್ರಿಯೆಗಳನ್ನೂ ಅಪಾರ ಪ್ರಾಮುಖ್ಯತೆಯ ಭೂ ವೈಶಿಷ್ಟ್ಯ ತೆಗಳನ್ನೂ  ಪ್ರತಿನಿಧಿಸುತ್ತದೆ. ಇಲ್ಲಿನ ಬೆಟ್ಟ ಗುಡ್ಡಗಳು ಮತ್ತು  ಅರಣ್ಯ ಪರಿಸರ ಭಾರತೀಯ ಮಾನ್ಸೂನ್ ಹವಾಮಾನ ಮಾದರಿಯ ಮೇಲೆ  ಪ್ರಬಲವಾದ ಪ್ರಭಾವ ಭೀರುತ್ತದೆ. ಅಲ್ಲದೆ ಪಶ್ಚಿಮ ಘಟ್ಟ  ಪರ್ವತ ಸರಣಿ ಮತ್ತು ಕಾಡುಗಳು  ಪ್ರದೇಶದ ಉಷ್ಣವಲಯದ ಹವಾಮಾನವನ್ನು ಮಧ್ಯಮ ಪ್ರಮಾಣದಲ್ಲಿರಿಸಿ,  ಈ ಗ್ರಹದ ಮೇಲೆ ಮಾನ್ಸೂನ್ ವ್ಯವಸ್ಥೆಯ ಅತ್ಯುತ್ತಮ ಉದಾಹರಣೆಯಾಗಿದೆ. ಇದು ಉನ್ನತ ಮಟ್ಟದ ಜೈವಿಕ ವೈವಿಧ್ಯತೆಯನ್ನು ಹೊಂದಿದ್ದು ಸ್ಥಳೀಯ ವಿನಾಶದ ಅಂಚಿನ ಜೀವಿಗಳನ್ನು ಪೊಶಿಸುತ್ತಿದೆ. ಆದ್ದರಿಂದ ಇದನ್ನು ಜೈವಿಕ ವೈವಿಧ್ಯತೆಯ ವಿಶ್ವದ ಎಂಟನೇ 'ಹಾಟ್ ಸ್ಪಾಟ್' ಎಂದು ಗುರುತಿಸಲಾಗಿದೆ. ಇಲ್ಲಿನ ಕಾಡುಗಳ ಪೈಕಿ ಕೆಲವು ವಿಷುವದೀಯ ಉಷ್ಣವಲಯದ ನಿತ್ಯಹರಿದ್ವರ್ಣ ಕಾಡುಗಳ ಉತ್ತಮ ಪ್ರತಿನಿಧಿಯಾಗಿದ್ದು   ಕನಿಷ್ಠ 325 ಜಾಗತಿಕವಾಗಿ ನಶಿಸುತ್ತಿರುವ ಸಸ್ಯ, ಪ್ರಾಣಿ, ಪಕ್ಷಿ, ಉಭಯವಾಸಿಗಳು, ಸರೀಸೃಪಗಳು ಹಾಗೂ ಮೀನುಗಳ ತವರಾಗಿದೆ.

ಯುನೆಸ್ಕೋ ತಾಣದಲ್ಲಿರುವ ಮೂಲ ಬರಹವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

http://whc.unesco.org/en/list/1342

http://whc.unesco.org/en/list/

ಇತರ ಲಿಂಕ್ ಗಳು
http://en.wikipedia.org/wiki/File:Biodiversity_Hotspots.svg

http://sampada.net/ಪರಿಸರ-ಹೋರಾಟಗಾರರಲ್ಲಿ-ಮತ್ತು-ಅರಣ್ಯ-ಇಲಾಖೆಯವರಲ್ಲಿ-ಬಹಳ-ದೊಡ್ಡ-ವಿನಂತಿ

Rating
No votes yet

Comments