ಅಮರ‌..ಮಧುರ..ಪ್ರೇಮ = ಭಾಗ 21

ಅಮರ‌..ಮಧುರ..ಪ್ರೇಮ = ಭಾಗ 21

ಅಮರ್...ಅದೂ...ಅದೂ ಇಷ್ಟು ದಿವಸ ಅಂದರೆ ಎರಡು ವರ್ಷದಿಂದ ನಿನ್ನ ಬಳಿ ಮಧುರ ಎಂದು ಮಾತಾಡುತ್ತಿದ್ದಿದ್ದು ನಾನಲ್ಲ. ಅದು ಪ್ರೇಮ !!

ಅಮರನಿಗೆ ಒಂದು ಕ್ಷಣ ಸುತ್ತುವ ಭೂಮಿ ನಿಂತಂತೆ ಭಾಸವಾಯಿತು. ಆ ಕ್ಷಣಕ್ಕೆ ಅವನಿಗೆ ಏನೂ ಅರ್ಥವಾಗದೆ, ಮಧು ಏನಂದೆ ಇನ್ನೊಮ್ಮೆ ಹೇಳು. ಹೌದು ಅಮರ್ ಇಷ್ಟು ದಿವಸ ನಿನ್ನೊಡನೆ ಮಧುರ ಅಂದರೆ ನನ್ನ ಹೆಸರಿನಲ್ಲಿ ಮಾತಾಡಿದ್ದು ಪ್ರೇಮ.  ಮೊದಲ ಬಾರಿ ಪ್ರೇಮ ನಿನ್ನ ಬಳಿ ಅವಳ ಪ್ರೀತಿಯ ವಿಷಯ ತಿಳಿಸಿದಾಗ ನೀನು ಅದನ್ನು ತಿರಸ್ಕರಿಸಿ ನನ್ನನ್ನು ಇಷ್ಟ ಪಡುತ್ತಿದ್ದೀಯ ಎಂದು ತಿಳಿಸಿದಾಗ ಅವಳು ಬಹಳಷ್ಟು ನೊಂದಿದ್ದಳಂತೆ. ನಂತರ ನಾವಿಬ್ಬರೂ ನೋಡಲು ಒಂದೇ ರೀತಿ ಇರುವುದರಿಂದ ನಿನಗೆ ಅನುಮಾನ ಬರುವುದಿಲ್ಲ ಎಂದು ಆಲೋಚಿಸಿ ಅವಳು ನನ್ನಂತೆ ಮಾತಾಡಲು ಶುರು ಮಾಡಿದಳು.

ನನ್ನ ಹೆಸರಿನಲ್ಲೇ ಒಂದು ಫೇಸ್ ಬುಕ್ ಅಕೌಂಟ್ ಓಪನ್ ಮಾಡಿ ಅದರಿಂದಲೇ ನಿನಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದಾಳೆ. ಅದೇ ನಿನ್ನ ಅವಳ ಸಂಬಂಧಕ್ಕೆ ನಾಂದಿ ಹಾಡಿತು. ಯಾವಾಗ ನೀನು ಮಧುರಳ ಬಗ್ಗೆ ಹೆಚ್ಚು ಹೆಚ್ಚು ಆಸಕ್ತಿ ತೋರಿಸಲು ಶುರು ಮಾಡಿದೆಯೋ ಅವಳು ಅವಳ ಅಸಲಿ ನಡೆ ನುಡಿ ಎಲ್ಲವನ್ನೂ ಬದಲಿಸಿಕೊಂಡಳು. ಸದಾ ಕಾಲ ಹಠದ ಸ್ವಭಾವದವಳಾಗಿದ್ದವಳು ನಿನಗಾಗಿ ಸೌಮ್ಯ ಸ್ವಭಾವವನ್ನು ರೂಢಿಸಿಕೊಂಡಳು. ಅಮರ್, ನಿನಗೊಂದು ವಿಷಯ ಗೊತ್ತ ಹುಟ್ಟುತ್ತಲೇ ಬಂದ ಗುಣವನ್ನು ಅಷ್ಟು ಸುಲಭವಾಗಿ ಯಾರಿಂದಲೂ ಬದಲಿಸಿಕೊಳ್ಳಲಾಗುವುದಿಲ್ಲ. ಅಂಥಹುದರಲ್ಲಿ ಅವಳು ನಿನಗಾಗಿ ತನ್ನ ಗುಣವನ್ನು ಬದಲಿಸಿಕೊಂಡಳು.

ನಂತರ ಹೊಸ ಸಿಮ್ಮೊಂದನ್ನು ತೆಗೆದುಕೊಂಡು ಅದನ್ನು ಮಧುರಳ ನಂಬರ್ ಎಂದು ನಿನಗೆ ಕೊಟ್ಟಳು. ಪ್ರತಿ ಬಾರಿ ನೀನು ಫೋನ್ ಮಾಡಿದಾಗಲೆಲ್ಲ ನನ್ನಂತೆ ಮಾತಾಡುತ್ತಿದ್ದಳು. ನಿನಗೆ ಅನುಮಾನ ಬರದಿರಲೆಂದು ನೀನು ಮಾತಾಡಿದ್ದನ್ನು ಪ್ರೇಮ ಬಳಿ ಹೇಳಬೇಡ ಎಂದು ಹೇಳುತ್ತಿದ್ದಳು. ನಿನ್ನ ಎದುರಿನಲ್ಲಿ ಪ್ರೇಮ ಹಾಗೆ ಮಾತಾಡಿ ಅಲ್ಲಿಂದ ಹೋದ ಮೇಲೆ ಮಧುರ ಹಾಗೆ ಮಾತಾಡುತ್ತಿದ್ದಳು.  ಒಂದು ದಿವಸ ನಾನು ಯಾವುದೋ ಕೆಲಸದ ಮೇಲೆ ಕಾಲೇಜಿಗೆ ಬರದಿದ್ದಾಗ ಅವಳು ನನ್ನೆದುರಿಗೆ ಮಧುರಗೆ ಹುಷಾರಿಲ್ಲ ತಲೆನೋವು ಅದಕ್ಕೆ ಬಂದಿಲ್ಲ ಎಂದು ಸುಳ್ಳು ಹೇಳಿದ್ದಳು. ಅಂದು ನೀನು ಮಧುರಳ ಮೇಲೆ ತೋರಿಸಿದ ಕಾಳಜಿಯಿಂದ ಅವಳು ಇನ್ನಷ್ಟು ತಲೆ ಕೆಡಿಸಿಕೊಂಡಳು. ಅಮರ್, ನಿನಗೆ ಹೇಳಬೇಕೆಂದರೆ ಎರಡು ವರ್ಷದಿಂದ ಅವಳು ಎರಡು ಫೋನ್ ಇಟ್ಟುಕೊಂಡಿದ್ದಾಳೆ ಎಂದೇ ನನಗೆ ಗೊತ್ತಿರಲಿಲ್ಲ.

ಕ್ಲಾಸಿನಲ್ಲಿ ಇರುವಾಗ ಫೋನ್ ಆಫ್ ಮಾಡಿಬಿಡುತ್ತಿದ್ದಳು. ಊರಿಗೆ ಹೋದಾಗ ಫೋನ್ ಆಫ್ ಮಾಡಿಬಿಡುತ್ತಿದ್ದಳು ಯಾರಿಗೂ ಅನುಮಾನ ಬರಬಾರದು ಎಂದು. ನಿನ್ನೆದುರಿಗೆ ಇದ್ದಾಗ ಅನುಮಾನ ಬರದಿರಲೆಂದು ಎರಡು ಮೂರು ಬಾರಿ ಅವಳ ಸ್ನೇಹಿತರ ಕೈಯಲ್ಲಿ ಒಂದು ಮೊಬೈಲ್ ಕೊಟ್ಟು ಅವಳ ನಂಬರ್ ಗೆ ಕರೆ ಮಾಡಿಸುತ್ತಿದ್ದಳು.

ಒಮ್ಮೆ ಅಮ್ಮನಿಗೆ ಹುಷಾರಿಲ್ಲ ಎಂದು ನಾನು ಒಂದು ವಾರ ಊರಿಗೆ ಹೋಗಿದ್ದೆ ಆಗಲೇ ನೀವಿಬ್ಬರೂ ಭದ್ರಗೆ ಹೋಗಿ ಅವಳ ಜನ್ಮದಿನವನ್ನು ನನ್ನ ಜನ್ಮದಿನವೆಂದು ಹೇಳಿಕೊಂಡು ಆಚರಿಸಿಕೊಂಡು ಬ೦ದಿದ್ದಿರಿ. ಆಗ ನೀನು ಅವಳಿಗೊಂದು ಮುತ್ತಿನ ಹಾರ ಕೊಟ್ಟಿದ್ದೆ ನೆನಪಿದೆಯ. ಒಮ್ಮೆ ನಾನು ಯಾರು ಕೊಟ್ಟಿದ್ದು ಎಂದು ಕೇಳಿದ್ದಕ್ಕೆ ಯಾರೋ ಸ್ನೇಹಿತರು ಕೊಟ್ಟಿದ್ದು ಎಂದು ಸುಳ್ಳು ಹೇಳಿದ್ದಳು. ಅಮರ್ ನಿನಗೆ ನೆನಪಿದೆಯ ನೀವು ಭದ್ರ ಗೆ ಹೋಗಿ ಬಂದ ನಂತರ ಒಮ್ಮೆ ನಾವಿಬ್ಬರೂ ಕಾಲೇಜಿನಲ್ಲಿ ಬರುತ್ತಿರುವಾಗ ನೀನು ಬಂದು ನನಗೆ ಮತ್ತು ಅವಳಿಗೆ ಹಾಯ್ ಎಂದೆ. ಆಗ ನಾನು ಏನೂ ಪ್ರತಿಕ್ರಿಯಿಸಲಿಲ್ಲ. ಅಂದು ನಾನು ಪ್ರೇಮಗೆ ಬೈದಿದ್ದೆ. ಅಮರ್ ಯಾಕೆ ಕಾಲೇಜಿನಲ್ಲಿ ಎಲ್ಲರ ಮುಂದೆ ಮಾತಾಡಿಸುತ್ತಾನೆ ಅವನಿಗೆ ಇನ್ನು ಮುಂದೆ ಮಾತಾಡಿಸಬೇಡ ಎಂದು ಹೇಳು ಎಂದು ಹೇಳಿದ್ದೆ.

ಅಮರ್, ನಾನು ಅವಳು ಜೊತೆಯಲ್ಲಿದ್ದಾಗ ಎಷ್ಟೋ ಬಾರಿ ನಿನ್ನ ಫೋನ್ ಬರುತ್ತಿದ್ದವು. ಆಗೆಲ್ಲ ನಾನು ಬೈದು ಕಟ್ ಮಾಡಿಸುತ್ತಿದ್ದೆ. ನಿಜ ಹೇಳಬೇಕೆಂದರೆ ನನಗೆ ಅದೆಲ್ಲ ಇಷ್ಟ ಆಗುತ್ತಿರಲಿಲ್ಲ. ಹಾಗಾಗಿ ಪ್ರತಿ ಬಾರಿ ನೀನು ಫೋನ್ ಮಾಡಿದಾಗ ಕಾಲ್ ಕಟ್ ಮಾಡಿಸುತ್ತಿದ್ದೆ.  ನಂತರದಲ್ಲಿ ಅವಳು ಸನ್ನಿವೇಶಕ್ಕೆ ತಕ್ಕಂತೆ ಪ್ರೇಮ ಹಾಗೆ ಇಲ್ಲದಿದ್ದರೆ ಮಧುರ ಹಾಗೆ ಮಾತಾಡುತ್ತಿದ್ದಳು.

ನಿನ್ನ ಪರೀಕ್ಷೆಗಳು ಮುಗಿದು ನೀನು ಜಪಾನ್ ಗೆ ಹೋದಾಗಲಂತೂ ಅವಳ ಪರಿಸ್ಥಿತಿ ಹೇಳೋದಿಕ್ಕೆ ಆಗಲ್ಲ. ಅಷ್ಟು ವಿಚಿತ್ರವಾಗಿ ತಯಾರಾಗಿದ್ದಳು. ಸಮಯಕ್ಕೆ ಸರಿಯಾಗಿ ಊಟ ಮಾಡುತ್ತಿರಲಿಲ್ಲ. ಓದಿನ ಕಡೆ ಗಮನ ಕೊಡುತ್ತಿರಲಿಲ್ಲ, ಸದಾ ಕಾಲ ನಿನ್ನದೇ ಧ್ಯಾನದಲ್ಲಿ ಮುಳುಗಿರುತ್ತಿದ್ದಳು. ನೀನು ಫೋನ್ ಮಾಡುವಾಗ ನಾನು ಜೊತೆಯಲ್ಲಿ ಇರುತ್ತಿದ್ದೆ, ಆಗ ಫೋನ್ ಎತ್ತಲು ಆಗದೆ ಇನ್ನಷ್ಟು ಒದ್ದಾಡುತ್ತಿದ್ದಳು. ಮತ್ತೆ ನಿನ್ನ ಕರೆಗಾಗಿ ಕಾದು ಕೂಡುತ್ತಿದ್ದಳು. ಒಮ್ಮೆ ಇದ್ದ ಹಾಗೆ ಇನ್ನೊಮ್ಮೆ ಇರುತ್ತಿರಲಿಲ್ಲ. ಮೂರನೇ ವರ್ಷದ ಪರೀಕ್ಷೆ ಮುಗಿಸಿ ನಾವು ಊರಿಗೆ ಹೋದಾಗಲಂತೂ ಅವಳ ಪರಿಸ್ಥಿತಿ ಇನ್ನೂ ಅಧ್ವಾನವಾಗಿತ್ತು. ಫೋನ್ ಗಳು ಆಫ್ ಮಾಡಿಟ್ಟುಕೊಂಡು ಅವಳು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಒಳಗೊಳಗೇ ಕೊರಗಿ ಹುಚ್ಚಿಯಂತೆ ಆಗಿದ್ದಳು.

ಅಮರ್, ಪ್ರೇಮ ಮೂರನೇ ವರ್ಷದ ಪರೀಕ್ಷೆಯಲ್ಲಿ ಚೆನ್ನಾಗಿ ಚೇತರಿಸಿಕೊಂಡು ಮತ್ತೆ ಓದಿನಲ್ಲಿ ಆಸಕ್ತಿ ಕಳೆದುಕೊಂಡಿದ್ದಾಗ ನಾನು ನಿನಗೆ ಬೈದಿದ್ದಕ್ಕೆ ಅವಳು ಅಮರನದೇನು ತಪ್ಪಿಲ್ಲ ಎಂದು ನನ್ನ ಮೇಲೆ ರೇಗಿದ್ದಳು. ಅಂದು ನಾನೆಷ್ಟು ನೊಂದು ಕೊಂಡಿದ್ದೆ ಗೊತ್ತ. ನಿನ್ನ ಸಲುವಾಗಿ ನನ್ನ ಮೇಲೆ ರೇಗಿದಳಲ್ಲ ಎಂದು ಮನಸೇ ಸರಿ ಇರಲಿಲ್ಲ.

ನಂತರ ನೀನು ಅವಳನ್ನು ಪ್ರೀತಿಸುತ್ತಿರುವುದಾಗಿ ತಿಳಿಸಿದಾಗ ಅವಳಿಗೆ ಸಂತೋಷದ ಬದಲಿಗೆ ಗೊಂದಲ ಉಂಟಾಗಿತ್ತು. ಏಕೆಂದರೆ ನೀನು ಪ್ರೀತಿಸುತ್ತಿರುವುದು ಮಧುರಳನ್ನು. ಆಗಲ್ಲದಿದ್ದರೂ ಮುಂದೆಯಾದರೂ ನಿನಗೆ ಸತ್ಯ ಸಂಗತಿ ತಿಳಿಯುತ್ತದೆ ಎಂದು ಚಿಂತಿಸಿ ಅವಳೇ ನಿನಗೆ ಪ್ರೇಮಳನ್ನು ಮದುವೆ ಆಗು ಎಂದು ಸಲಹೆ ಕೊಟ್ಟಳು. ಆದರೆ ಅದಕ್ಕೆ ನಿನ್ನ ಉತ್ತರ ಕೇಳಿ ಅವಳು ಮನಸು ಮತ್ತಷ್ಟು ಗೊಂದಲದ ಗೂಡಾಯ್ತು. ಅಂದಿನಿಂದ ನೀನು ಪ್ರತಿ ಬಾರಿ ಫೋನ್ ಮಾಡಿದಾಗಲೂ ಪ್ರೇಮಳ ಮೇಲೆ ನಿನಗೆ ಅನುಕಂಪ ಮೂಡುವ ಹಾಗೆ ಮಾತಾಡುತ್ತಿದ್ದಳು. ಅವಳು ಎಷ್ಟೇ ಮಾಡಿದರೂ ನಿನ್ನ ಮನಸು ಬದಲಾಗುವುದಿಲ್ಲ ಎಂದು ತಿಳಿದು ಸಾಧ್ಯವಾದಷ್ಟು ದಿವಸ ಇದನ್ನು ಮುಂದೆ ಹಾಕಬೇಕೆಂದು ಕಾಲೇಜಿನ ನಂತರ ಕೆಲಸಕ್ಕೆ ಸೇರಬೇಕು, ಸೆಟಲ್ ಆಗಬೇಕು ಆಮೇಲೆ ಮದುವೆ ಎಂದೆಲ್ಲ ನಿನ್ನ ಬಳಿ ಹೇಳಿದಳು.

ಅಲ್ಲಿಯವರೆಗೂ ಎಲ್ಲವನ್ನೂ ಸಮಾಧಾನದಿಂದ ಕೇಳಿದ ಅಮರ್ ಗೆ ಶಾಕ್ ನಿಂದ ಮಾತೇ ಹೊರಡಲಿಲ್ಲ.  ಸಾವರಿಸಿಕೊಂಡು ಮಧುರ ಏನು ಮಾತಾಡುತ್ತಿದ್ದೀಯ ನೀನು. ಇಷ್ಟು ಹೊತ್ತು ನೀನು ಹೇಳಿದ್ದೆಲ್ಲ ನಿಜವ? ಪ್ರೇಮ ನನ್ನ ಬಳಿ ಯಾಕೆ ಹೀಗೆ

ನಾಟಕ ಆಡಿದಳು. ಯಾಕೆ ನನ್ನ ಪ್ರೀತಿಯ ಜೊತೆ ಆಟ ಆಡಿದಳು. ಅದು ಸರಿ ನಿನಗೆ ಇದೆಲ್ಲ ಗೊತ್ತಿದ್ದರೂ ಯಾಕೆ ನನ್ನ ಬಳಿ ಒಂದು ಮಾತೂ ಹೇಳಲಿಲ್ಲ.

 

ಅಮರ್, ನಿಜಕ್ಕೂ ಇದ್ಯಾವುದರ ಅರಿವು ನನಗಿರಲಿಲ್ಲ. ಇಂದು ಬೆಳಿಗ್ಗೆ ಅವಳು ನಿನ್ನ ಬಳಿ ಮಾತಾಡುತ್ತಿರುವಾಗ ನನಗೆ ಅನುಮಾನ ಬಂದು ಕೇಳಿದ್ದಕ್ಕೆ ಆಗ ಇದೆಲ್ಲ ವಿಷಯ ಹೇಳಿದಳು. ನನಗೂ ಆಗ ಅದನ್ನೆಲ್ಲ ಕೇಳಿ ಬಹಳ ಕೋಪ ಬಂದು ಯಾಕೆ ಹೀಗೆ ಮಾಡಿದೆ ಎಂದು ಕೇಳಿದ್ದಕ್ಕೆ ನಿನ್ನ ಮೇಲಿನ ಪ್ರೀತಿಯಿಂದ, ನಿನ್ನನ್ನು ಕಳೆದುಕೊಳ್ಳಲು ಇಷ್ಟವಿಲ್ಲದೆ ಹೀಗೆ ಮಾಡಿದೆ ಎಂದು ಹೇಳಿದಳು.  ಅದಕ್ಕೆ ನಿನಗೆ ವಿಷಯ ತಿಳಿಸೋಣ ಎಂದು ನಾನೇ ಇಲ್ಲಿಗೆ ಬಂದೆ.

 

ಮಧು, ನನಗೆ ಏನು ಹೇಳಬೇಕೋ ಗೊತ್ತಾಗುತ್ತಿಲ್ಲ. ಎಲ್ಲ ಗೊಂದಲಮಯವಾಗಿದೆ. ಪ್ರೇಮ ನನಗೆ ಈ ರೀತಿ ಮೋಸ ಮಾಡುತ್ತಾಳೆ ಎಂದು ಎಣಿಸಿರಲಿಲ್ಲ. ಅವಳು ನನ್ನ ಪ್ರೀತಿಯನ್ನು ತಮಾಷೆಯ ವಸ್ತು ಎಂದು ತಿಳಿದಿದ್ದಾಳೆ. ಅವಳನ್ನು ನಾನು ಕ್ಷಮಿಸುವುದಿಲ್ಲ ಮಧು. ಇಷ್ಟು ದಿವಸ ನನ್ನ ಮನಸಿನಲ್ಲಿ ಅವಳಿಗೊಂದು ಒಳ್ಳೆ ಸ್ನೇಹಿತೆಯ ಸ್ಥಾನ ಕೊಟ್ಟಿದ್ದೆ. ಆದರೆ ಆ ಪವಿತ್ರ ಸ್ಥಾನ ಉಳಿಸಿಕೊಳ್ಳುವ ಅರ್ಹತೆ ಅವಳಿಗಿಲ್ಲ. ಮಧು, ಅವಳಿಗೆ ಹೇಳಿಬಿಡು ಇನ್ನು ನನ್ನ ಜೀವನದಲ್ಲಿ ಅವಳ ಮುಖ ನೋಡಲು ನಾನು ಇಷ್ಟ ಪಡುವುದಿಲ್ಲ ಹಾಗೂ ಅವಳ ಜೊತೆ ಮಾತು ಕೂಡ ಆಡಲು ನನಗೆ ಮನಸಿಲ್ಲ ಎಂದು ಹೇಳಿಬಿಡು. ಎಂದು ಹೇಳಿ ಹೊರಡಲು ಅನುವಾದ.

 

ಮಧುರ ಅಮರ್ ಅಮರ್ ಎಂದು ಕೂಗುತ್ತಿದ್ದರೂ ತನ್ನ ಕಿವಿಗೆ ಬೀಳಲೇ ಇಲ್ಲವೇನೋ ಎಂದು ಹೋಗುತ್ತಿದ್ದ. ಅಮರನ ಮನಸಿನಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿತ್ತು. ಮಧುರ ಹೇಳಿದ ಮಾತುಗಳು ಅವನ ಕಿವಿಯಲಿ ಢಮರುಗದಂತೆ ಢಮ ಢಮಗುಟ್ಟುತ್ತಿತ್ತು.  ಅವನು ಇಡುತ್ತಿದ್ದ ಒಂದೊಂದು ಹೆಜ್ಜೆಯೂ ಬಹಳ ಭಾರ ಎನಿ

ಸುತ್ತಿತ್ತು. ಮಧುರಳ ಕೂಗು ಅವನ ಕಿ

ವಿಯನ್ನು ತಲುಪಲೇ ಇಲ್ಲ.

 

Rating
No votes yet

Comments