ಸಾಧನೆ - ಗುರು (ಶ್ರೀ ನರಸಿಂಹ 43))

ಸಾಧನೆ - ಗುರು (ಶ್ರೀ ನರಸಿಂಹ 43))

ಮಾರ್ಗದರ್ಶನ ಬೇಕೆನುತ ಗುರುವನರಸಿ ಹೋಗದಿರು

ಕಪಟಿಯಾಗಿರಬಹುದು ಗುರುವು ಎಚ್ಚರಿಕೆಯಲಿ ಇರು

ಗುರುವು ಸಿಗಲಿಲ್ಲವೆನುತ ನೀ ಮನಸಿನಲಿ ಕೊರಗದಿರು

ಗುರು ಇಲ್ಲದಿರೆ ಸಾಧನೆಯ ಮಾಡಲಾಗದು ಎನ್ನದಿರು

 

ಒಳ್ಳೆಯ ಗುರುವು ಇರಬೇಕು ಸಾಧನೆಯ ಹಾದಿಯಲಿ

ಸರಿ ಗುರುವಿಲ್ಲದಿರೆ ಗುರಿ ಸೇರಲಾಗದು ಸಾಧನೆಯಲಿ

ಸಾಧನೆಯ ಪಥದಲಿ ಇರು,ಗುರುವೆ ನಿನ್ನರಸಿ ಬರುವ

ಸರಿ ಕಾಲ ಬರಲಾಗ ತೋರಿಪನು ನರಹರಿಯೆ ಗುರುವ

 

ಗುರುವು ಸಿಗಲಿ,ಸಿಗದಿರಲಿ ಎಲ್ಲ ಅವನಿಚ್ಛೆ ಎಂದರಿತರೆ ನೀನು

ಗುರುವಾಗಿ ಶ್ರೀ ನರಸಿಂಹನೆ ಗುರಿಯೆಡೆಗೆ ನಮ್ಮ ನಡೆಸುವನು
Rating
No votes yet

Comments