ಮಳೆ ನಿಂತರು ಮರದ ಹನಿ ಬಿಡದು - 2

Submitted by malegiri on Tue, 10/16/2007 - 15:43

ಹಾಗೆ ನೊಡಿದರೆ ರಾಮನ ನಿಖರವಾದ ವಯಸ್ಸು ಎಸ್ಟೆಂಬುದು ಇಡಿ ಊರಿಗೆ ಗೊತ್ತಿರದ ವಿಶಯ.ಎಂಬತ್ತು ಧಾಟಿದೆ ಯೆಂದು ಎಲ್ಲರು ಎಧೆ ತಟ್ಟಿ ಹೇಳಿದರು, ಅದರ ಮೇಲಿನ ಅಂಕಿ ಅಂಶಗಳು ಅವರವರ ಅನುಭವಕ್ಕೆ ಬಿಟ್ಟಿದ್ದು.ಯಾರನ್ನಾದರು ಕೆಳಿದರೆ "ನೋಡು ,ನಿಮ್ಮಪ್ಪನಿಗೆ ಈಗ 56,ನಿಮ್ಮ ಅಪ್ಪನಿಗೆ ಆಡಿಸಿ ಇಜು ಕಲಿಸಿದ್ದನೆಂದರೆ ಅವನಿಗೆ ಆಗ 20 ಆದರು ಇರಬೆಕು,ನಿಮ್ಮ ಅಪ್ಪ ಎನು , ನಿಮ್ಮ ದೊಡ್ಡಪ್ಪನಿಗೆ ಆಡಿಸಿದನೆಂದರೆ ,ಆ ೨೦ ಕ್ಕೆ ಇನ್ನು 10ನ್ನು ಸೇರಿಸಿ , ಒಟ್ಟಿನಲ್ಲಿ,85ರತನಕ ಒಯ್ಯುತ್ತಿದ್ದರು "

ನಾ ಇದನ್ನು ಯಾಕೆ ಹೇಳುತ್ತಿದ್ದಿನೆಂದರೆ,ನಮ್ಮ ಊರಿಗೆ ರಾಮ ಭೀಷ್ಮಪಿತಾಮಹನಾಗಿದ್ದ.ಆತನಿಗಿಂತ ಹಿರಿಯರೆಲ್ಲರೂ ಇಹಲೋಕ ಯಾತ್ರೆ ಮಾಡಿದ ಮೇಲೆ, ಈತನೆ ನಮ್ಮ ಊರಿನ ಯೆಜಮಾನ ಮನುಶ್ಯ.ಈ ಯಜಮಾನಿಕೆಯನ್ನು ೧೦-೧೨ ವರ್ಷಗಳ ಕಾಲ ಅವ್ಯಾಹತವಾಗಿ ಆಳುತ್ತ ಬಂದ ರಾಮನ ವಯಸ್ಸು, ಎಲ್ಲರಿಗು ವೊಂದು ಕುತೂಹಲದ ಚರ್ಚೆಯ ವಿಷಯವಾಗಿತ್ತು.ಹೀಗಾಗಿ ಎಲ್ಲರ ಅಂಕಿ ಅಂಶಗಳನ್ನು ಗಣನೆಗೆ ತೆಗೆದುಕೊಂಡ ರಾಮ ,ತನ್ನ ವಯಸ್ಸು 90 ಎಂದು ಹಲವಾರು ದಿನಗಳಿಂದ ನಿರ್ಧರಿಸಿಬಿಟ್ಟಿದ್ದ.

90 ಸಂವತ್ಸರಗಳ ಸಾರ್ಥಕ ಜೀವನವನ್ನು ವೊಂದು ಮುಂಜಾನೆ ಮುಗಿಸಿದ ರಾಮನ ಬಗ್ಗೆ ಅದೆಸ್ಟು ಹೇಳಿದರೂ ಸಾಲದು.ಸುರದ್ರುಪಿಯಾದ,ತುಂಬು ಯೌವ್ವನದ ಮಗನನ್ನು ತನ್ನ ಕಣ್ಣೆದುರೆ ಕಳೆದುಕೊಂಡ. ಬಾಳಿನ ಮುಸ್ಸಂಜೆಯಲ್ಲಿ ಜೊತೆಗೆ ಪಯಣಿಸಬೆಕಾಗಿದ್ದ ತಮ್ಮನನ್ನು ಈ 10 ವರ್ಷಗಳ ಹಿಂದೆ ಕಳೆದುಕೊಂಡು ಸ್ವಲ್ಪ ವಿಚಲಿತನಾದರು ಮತ್ತೆ ಚೆತರಿಸಿಕೊಂಡು ಎಂದಿನಂತೆ ತನ್ನ ಮಂದಹಾಸದೊಂದಿಗೆ ಉತ್ಸಾಹದ ಒರತೆಯಂತಿರುವ ಮನಸ್ಸಿನಿಂದ ಜೀವನ ಸಾಗಿಸಿದ.ಇಡಿ ಊರಿಗೆ ಊರೆ ನದಿ ಬಂದು ಪ್ರವಾಹದಿಂದ ತತ್ತರಿಸಿದರೂ ಧ್ರತಿ ಗೆಡಲಿಲ್ಲ.ತನ್ನ ಜಾನುವಾರುಗಳನ್ನು ಕಳೆದುಕೊಂಡ ದುಖ: ಮರೆತು ನಮ್ಮ ಊರಿಗೆ ಪ್ರವಾಹದ ದೆಸೆಯಿಂದಾದರು ಮುಖ್ಯಮಂತ್ರಿಗಳು ಭೇಟಿ ಕೊಟ್ಟದ್ದನ್ನು ಎಲ್ಲರಿಗೂ ಹೇಳುವ ಮುಗ್ದತೆ ನಮ್ಮ ರಾಮನದು.

ಜೀವನದಲ್ಲಿ ನಡೆಯುವ ಯಾವುದೊ ವೊಂದು ಅಪ್ರಿಯ ಘಟನೆಯಿಂದ ಜಿಗುಪ್ಸೆ ಹೊಂದಿ ತಮ್ಮ ಬಾಳನ್ನೆ ನರಕಮಾಡಿಕೊಳ್ಳುವ ಯುವಕರ ಮುಂದೆ ರಾಮನ ಜೀವನ ಒಂದು ಆದರ್ಷವೆ ಸರಿ.ಆತನನ್ನು ನಾನೆನು ಮಹಾ ಮುತ್ಸದ್ದಿಯೆಂದೊ ಅಥವಾ ಬುದ್ಧಿಜೀವಿಯೆಂದೊ ಚಿತ್ರಿಸಹೊರಟಿಲ್ಲ.ನಮ್ಮ ಭಾರತ ಕಂಡ ಇಂತಹಾ ಅಸಂಖ್ಯಾತ ರಾಮರಲ್ಲಿ ಇತನು ವೊಬ್ಬ.

ರಾಮ ಒಬ್ಬ ಮಾತಿನ ಮಲ್ಲ , ವ್ಯವಹಾರ ಚುತುರ.ಯಾರಿಗು ಬೇಸರವಾಗದಂತೆ ಮತನಡಿಸುವುದು ನಮ್ಮ ರಾಮನಿಂದ ಕಲಿಯಬೆಕು.ಊರಿನಲ್ಲಿ ಆತ ಒಬ್ಬ ಅಜಾತ ಶತ್ರು.ನಮ್ಮ ಮನೆಗೆ ಬರುವ ಪ್ರತಿಯೊಬ್ಬರು ರಾಮನನ್ನು ಮಾತನಾಡಿಸದೆ ಹೋಗುತ್ತಿರಲಿಲ್ಲ.ಎಲ್ಲರ ಜೊತೆ ಪರಸ್ಪರ ಕಸ್ಟ ಸುಖಗಳನ್ನು ಹಂಚಿಕೊಂಡು ಕೊನಗೊಂದು ನಗು ಚೆಲ್ಲಿ,ಸಮಾಧಾನದ ನಿಟ್ಟುಸಿರು ಬಿಟ್ಟು,ಅವರು ಚೆನ್ನಾಗಿರಲಿ ಎಂದು ಹರಸಿ,ಅವರಾಗಿಯೆ ಕೊಟ್ಟ ೨ ಅಥವಾ ೫ ರುಪಾಯಿಯಿಂದ ಛಾ ಗುಟಕರಿಸಿಯೊ ಅಥವಾ ಬೀಡಿ ಸೇದಿಯೊ ಮನೆ ಸೇರುತ್ತಿದ್ದ.

ಬೆರೆಯವರಿಂದ ಒಂದು ಬಿಡಿಗಾಸನ್ನು ಬಯಸದ ರಾಮನ ಈ ಅಭಿಮಾನ ನಮ್ಮ ಮನೆಯವರಿದ್ದಾಗ ಸ್ವಲ್ಪ ಸಡಿಲವಾಗುತ್ತಿತ್ತು.ಎಕೆಂದರ ನಮ್ಮ ಹಾಗು ರಾಮನ ನಡುವೆ ಇದ್ದ ಸತಿ.ನಾವು ಊರಿನಿಂದ ಹೊರಡುವಾಗ ರಾಮನಿಗೆ ಎನಾದರು ಕೊಡುವುದು ನಮ್ಮಿಬ್ಬರ ನಡುವಿನ ಅಲಿಖಿತ ಒಡಂಬಡಿಕೆ.ಅಪ್ಪ,ಅಣ್ಣ,ಚಿಕ್ಕಪ್ಪ ಆತ ಕೇಳುವುದಕ್ಕಿಂತ ಮುಂಜೆಯೆ ೧೦-೨೦ ಕೈಗಿಟ್ಟು ಛಾ ಕುಡಿ ಎಂದು ಕೊಟ್ಟುಬಿಡುತ್ತಿದ್ದರು.ನಾವು ನೌಕರಿಗೆ ಸೇರುವವರಿಗೂ ಆತ ನಮ್ಮಿಂದೆನು ಬಯಸಲಿಲ್ಲ.ನಿಮ್ಮಪ್ಪನಿಗಿಂತ ಧೊಡ್ಡ ನೌಕರಿ ನಿನಗಾಗಲಿ ಎಂದು ಹರಸುತ್ತಿದ್ದ.ನಮ್ಮಣ್ಣನಿಗೆ ನೌಕರಿ ದೊರೆತು ಆತ ವಿದೇಶಕ್ಕೆ ಹೋದನೆಂಬ ವಿಶಯ ತಿಳಿದ ರಾಮನ ಖುಶಿ ಮುಗಿಲು ಮುಟ್ಟಿತ್ತು.ಇಡಿ ಊರಿನ ಜನಕ್ಕೆ ಈ ಸುದ್ದಿ ಮುಟ್ಟಿಸಿ ಸಂತೋಶ ಪಟ್ಟಿದ್ದ.ಅದೆಸ್ಟು ದಿನಗಳಾದರು ಈ ಸಂಭ್ರಮವನ್ನು ನೆನೆಸಿಕೊಳ್ಳುತ್ತಿದ್ದ.

ಅಣ್ಣ ಅಮೇರಿಕೆಯಿಂದ ವಾಪಸಾದಾಗ ಆತನಿಂದ ಬಾಜಪ್ತ ನೂರಕ್ಕಿಂತ ಹೆಚ್ಚಿನ ಹಣದ ಡಿಮ್ಯಾಂಡನ್ನು ರಾಮ ಮುಂದೆ ಇಟ್ಟ.ಬೇರೆ ದೇಶಗಳಲ್ಲಿ ಡಾಲರ್‌ಗಟ್ಟಲೆ ಸಿಗಿತ್ತದೆ,ಒಂದು ಡಾಲರ್‌ಗೆ ಸುಮಾರು ನಲವತ್ತು ರುಪಾಯಿ ಎಂದು ಯಾರ ಬಾಯಿಯಿಂದಲೊ ಕೇಳಿಟ್ಟುಕೊಂಡಿದ್ದ ರಾಮನ ಈ ವ್ರತ್ತಾಂತವನ್ನರಿತ ಅಣ್ಣ ರಾಮನಿಗೆ ನೂರು ರುಪಾಯಿಕೊಡದೆ ಬೇರೆ ವಿಧಿ ಇರಲಿಲ್ಲ. ಅಣ್ಣ ಆ ನೂರರ ಜೊತೆಗೆ ಇನ್ನು ಕೆಲ ನೂರುಗಳನ್ನು ಸೇರಿಸಿ ರಾಮನಿಗೆ , ಮನೆಯವರೆಲ್ಲರು ಹೊಸ ಅಂಗಿ ತೊಗೊರಿ ಏಂದು ಹಣ ಕೊಟ್ಟಾಗ ರಾಮನಿಗಾದ ಖುಶಿ ಅಸ್ಟಿಸ್ಟಲ್ಲ ಅದರಿಂದ ನಮ್ಮಣ್ಣನಿಗು ಅಸ್ಟೆ ಖುಶಿ ಆಯಿತು ಎಂದು ಪ್ರತ್ಯೆಕವಾಗಿ ಹೇಳಬೆಕಾಗಿಲ್ಲ.

ಬಾಲ್ಯದಿಂದ ನಮ್ಮೆಲ್ಲರನ್ನು ಎತ್ತಿ ಆಡಿಸಿ,ಹೆಗಲ ಮೇಲೆ ಹೊತ್ತು,ಊರು ತಿರುಗಿಸಿ,ಈಜು ಕಲಿಸಿ,ಊರಿಗೆ ಬಂದ ನಾಟಕ,ಬಯಲಾಟಗಳನ್ನು ಬೆಳ್ಳಂಬೆಳ್ಳಗಿನವರೆಗೂ ತೋರಿಸಿ,ತಮ್ಮ ಮನೆಯ ರೊಟ್ಟಿ ಹಾಗು ಖಾರದ ಪಲ್ಯೆಯ ರುಚಿಯನ್ನು ತೋರಿಸಿ,ಹೀಗೆ ಹಳ್ಳಿ ಜೀವನದ ಪ್ರತಿಯೊಂದು ಆಯಾಮದ ಪರಿಚಯ ಮಾಡಿಸಿದ ರಾಮನಿಗೆ ನಾವು ಐದೊ,ಹತ್ತೊ ರುಪಾಯಿಕೊಟ್ಟಿದ್ಡೆನೆನಲು ನಾನೆಸ್ಟರವನು.ಯಾವತ್ತು ಸಂಬಂಧಗಳನ್ನು ವ್ಯವಹಾರದ ದ್ರಸ್ಟಿಯಿಂದ ನೋಡದ ನಮ್ಮಿಬ್ಬರ ನಡುವಿನ ಬೆಸುಗೆಯನ್ನು ಶಬ್ದಗಳಿಂದ ಹಿಡಿಯುವುದು ಆಗುವುದಿಲ್ಲ.

ಮುಂದುವರೆಯುವುದು....

Rating
No votes yet

Comments