ಜನ
ಕವನ
ಕವಿತೆಗಳನ್ನು
ಮೆಚ್ಚಿದ ಜನ
ಸಾಲುಗಳ ನಡುವಿನ ವಿಷಾದವನ್ನು ಓದಲಿಲ್ಲ!
ಕನಸುಗಳನ್ನು
ಮೆಚ್ಚಿದ ಜನ
ಅವು ಮುರಿದು ಬಿದ್ದುದನ್ನು ನೋಡಲಿಲ್ಲ!
ಮುಗುಳ್ನಗುವನ್ನು
ಮೆಚ್ಚಿದ ಜನ
ನೋವಿನ ಮುಳ್ಳುಗಳನ್ನು ನೋಡಲಿಲ್ಲ!
ಜೀವನ್ಮುಖತೆಯನ್ನು
ಮೆಚ್ಚಿದ ಜನ
ಹಿಂಬಾಲಿಸುತಿಹ ಸಾವಿನ ನೆರಳನ್ನು ನೋಡಲಿಲ್ಲ!
-----------------ಕು.ಸ.ಮಧುಸೂದನ್.----------
Comments
ಉ: ಜನ
ಉ: ಜನ
In reply to ಉ: ಜನ by mmshaik
ಉ: ಜನ
ಉ: ಜನ
ಉ: ಜನ