ಅಕ್ಕ ಕಂಡ ಕನಸು....!!

ಅಕ್ಕ ಕಂಡ ಕನಸು....!!

ಕವನ

                

 

                      ತೆರದ ಕಣ್ಣಲ್ಲಿ ಕಂಡ ಕನಸು
ಚಂದ್ರನದ್ದೋ .,ಸೂ ರ್ಯನದ್ದೋ ...??!
ನನಗೆ ಸೂರ್ಯನನ್ನು ಹಿಡಿವ ಆಸೆ...
ಹಿಡಿಯುವದಷ್ಟೇ ಅಲ್ಲ.. ಮುಡಿವ ಆಸೆ ಕೂಡ ...!!!
ಅತಿಯಾಗಿ ಬಯಕೆಗಳು ಹುಟ್ಟುತ್ತವೆ..
ಅವಕ್ಕೆ ಮಳೆಯೇನೂ ಬೇಡ ...!
ಕೆಲವೊಂದು ಸಲ ನಾಯಿಕೊಡೆಗಳಂತೆ
ಮುಟ್ಟುವಲೆಲ್ಲಾ ಎದ್ದುಬಿಡುತ್ತವೆ ...
ನನ್ನಲ್ಲೇ ಹುಟ್ಟಿ,ನನ್ನಲ್ಲೇ ಬೆಳೆದು..
ಬಯಸುವುದು ನಿನ್ನನೆಂದರೆ ..ವಿಚಿತ್ರ !!
ಸಿಟ್ಟು ಬಂದು ಸೂರ್ಯನೆಡೆ ವಾಲುತ್ತೇನೆ..
ಕೈ -ಬಾಯಿ ಸುಟ್ಟುಕೊಂಡು..
ಅರೆಕ್ಷಣ ಸುಮ್ಮನಾಗುತ್ತೇನೆ...!!
ಹೀಗೂ ಇದ್ದಾವೆ ಮೊಗ್ಗುಗಳು ,ಹೂಗಳು..
ಅವು ಹಿಚಾಗುತ್ತವೆ,ಕಾಯಾಗುತ್ತವೆ ..ಕೊನೆಗೂ ,
ಹಣ್ನಾಗುತ್ತವೆ ...ಇದು ಸತ್ಯ ....ಇದರ
ಅರಿವು ಉಂಟಾಗಲು ಕೆಲವೊಮ್ಮೆ ಬುದ್ಧನನ್ನು  ಅರಸುತ್ತ ..
ಅರ್ಧರಾತ್ರಿಗೆದ್ದು ಹೊರಟುಬಿಡುತ್ತೇನೆ...!!
ಕೊನೆಗೂ ದಕ್ಕಿದ್ದು ;ಬಯಸಿದ್ದಾವುದೂ ಅಲ್ಲ..
ಮರ ಹಾಗೂ ಮರದ ನೆರಳು...!
ಹೆಚ್ಚೆಂದರೆ ಮರದಿಂದ ಇಳಿಬಿದ್ದ ಬಿಳಲು....!!!
           
 
 
 
                        


 

Comments