ಗೀತೆಯ ಬಗ್ಗೆ ಕೆಲವು ಚಿಂತನೆಗಳು

ಗೀತೆಯ ಬಗ್ಗೆ ಕೆಲವು ಚಿಂತನೆಗಳು

 ನಾನು  ಸಂಪದದ ಹೊಸ ಸದಸ್ಯ. 

ನಾನು ಇತ್ತೀಚೆಗೆ ರಂಗನಾಥ ದಿವಾಕರ ಅವರು ಬರೆದ ಗೀತೆಯ ಗುಟ್ಟನ್ನು ಓದುತ್ತಿದ್ದೇನೆ.

ಶ್ರೀ ದಿವಾಕರರು ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ ಪತ್ರಿಕೆಯ ಸಂಪಾದಕರಾಗಿದ್ದರು ಮತ್ತು ಲೋಕ ಶಿಕ್ಷಣ ಟ್ರಸ್ಟಿನ ಸ್ಥಾಪಕರಲ್ಲಿ ಒಬ್ಬರಾಗಿದ್ದರು.

ಸ್ವತಃ ವಾಗ್ಮಿ-ಸಂಶೋಧಕ-ವಿಮರ್ಶಕರಾದ ದಿವಾಕರ ಅವರು ಅನೇಕ ಮೌಲ್ಯವಂತ ಸಾಹಿತ್ಯವನ್ನು, ಚಿಂತನೆಗಳನ್ನು ಸಮಾಜಕ್ಕೆ  ನೀಡಿದ್ದಾರೆ. ಅವರು ಅಧ್ಯಾತ್ಮ ಕಾರ್ಯಾಲಯದಿಂದ ಚಿಂತಿಸಿದ ಹಿಂದು ಧರ್ಮದ ವಿವೇಚನೆಗಳೂ ಈಗಲೂ ನಮಗೆಲ್ಲ ಆದರ್ಶಪ್ರಾಯವಾಗಿವೆ.

ಈ ಪುಸ್ತಕ -ಚಿಂತನೆ - 1849ರಲ್ಲಿ ಪ್ರಥಮವಾಗಿ ಬರೆಯಲ್ಪಟ್ಟಿತ್ತು. ನನ್ನ ತಂದೆ  ಕಲ್ಯಾಣರಾಯರ ಸಂಗ್ರಹದಲ್ಲಿ  ಸಿಕ್ಕಿದ ಈ ಪುಸ್ತಕವನ್ನು ಓದುವುದೇ ಒಂದು ಸಂಪತ್ತು.

ಓದುತ್ತಿದ್ದಂತೆ ತಲೆಗೆ ಬಮ್ತು ನಾನು ಇದನ್ನು ಇತರರೊಡನೆ ಹಂಚಿಕೊಳ್ಳಬಹುದೇ?

ಬಹುಷಃ ಈ ಪುಸ್ತಕದ ಪ್ರತಿಗಳೂ ಈಗ ಲಭ್ಯವಾಗಿರಲಿಕ್ಕಿಲ್ಲ.

ಮಹನೀಯರ ತಿಳುವಳಿಕೆ, ಅಂತಸತ್ವ ಅಭಿರುಚಿ ನಿಮಗೂ ದೊರಯಲಿ ಎಂದು ನನ್ನ ಆಶಯ.

ದಿನಾಲು ಸ್ವಲ್ಪ ಸ್ವಲ್ಪ ಇದನ್ನು ಮರು ಪ್ರಕಟಿಸುವ ಆಶೆಇದೆ. ಮತ್ತು ಪ್ರಯತ್ನಿಸುತ್ತೇನೆ.

 

ಧನ್ಯವಾದಗಳು

ಕೃಷ್ಣ ಕುಲಕರ್ಣಿ (ಬಿಜ್ಜರಗಿ)

 

Rating
No votes yet

Comments