ಶೊನ್ಯಸಿಂಹಾಸನ

ಶೊನ್ಯಸಿಂಹಾಸನ

ಕವನ

ಉತ್ತಿ ಓಕ್ಕಲಿಗನಾದೆ


ಕೆತ್ತಿದರೆ ಬಡಗಿಯಾದೆ


ನೇಯ್ದರೆ ನೇಕಾರನಾದೆ


ಉಪ್ಪಿನ ಮಾಳಿಯಲಿದ್ದು ಉಪ್ಪಾರನಾದೆ


ಬಳೆಯ ತೊಡಿಸಿದರಾಯ್ತು ಬಳೆಗಾರನಾದೆ


ಕೋಟೆ ಕೊತ್ತಲ ಕಟ್ಟಿ ಭೊವಿಗನಾದೆ


ನೀಡಿ ಜಂಗಮನಾದೆ


ಕಂಬಳಿಯ ನೇಯ್ದು ಕುರುಬನಾದೆ


ಮಡಕೆಯ ಮಾಡಿ ಕುಂಬಾರನಾದೆ


ಕಬ್ಬಿಣವ ತಟ್ಟಿ ಕಮ್ಮಾರನಾದೆ


ನೀರಿಗಿಳಿದರೆ ಬೆಸ್ತನಾದೆ


ಗೋವುಗಳ ಸಾಕಿ ಯಾದವನಾದೆ


ಮಂತ್ರಗಳ ಪಟಿಸಿ ಬ್ರಾಮ್ಮ ಹಣನಾದೆ


ಕಲ್ಮಶವ ತೊಳೆದು ಜಲಗಾರನಾದೆ


ಲೊಹಕ್ಕೆ ಅಂದವನಿಕ್ಕಿ ಆಚಾರಿಯಾದೆ


ದವಸ ಧಾನ್ಯಗಳ ಮಾರಿ ವೈಶ್ಯನಾದೆ


.....................  ವ್ರುತ್ತಿಗಂಟಿಟ್ತು ಜಾತಿ


 ಅವ್ರಿಗಿವರ ಇವ್ರಿಗವರ  ಅಗತ್ಯವಿದ್ದದ್ದು ದಿಟ


ಅದೇ ವ್ರುತ್ತಿಗಳೀಗ, ಟಾಟಾ ಬಿರ್ಲಾರ ಕೈಗೆ ಬಂದು


ಹುಟ್ಟುತ್ತಲೇ  ಬರುವ  ಬರಿಯ ಜಾತಿಯ ಸೊಂಕುಗಳಸ್ಟೇ


ಎಲ್ಲದೊ ಎಲ್ಲರಿಗೊ ಸಮಾನಾವಾಗಿ ದೊರಕುವವರೆಗೆ


ನಾನು ನಾವುಗಳಲ್ಲಿ ಕರಗುವವರೆಗೆ


ಬಸವ ಸಮಾಧಿಯಾಗಿದ್ದಾನೆಂಬುದು ಹಸಿ ಹಸಿ ಸುಳ್ಲು


ಕಾರ್ಲ್ ಮಾರ್ಕ್ಸನ ಸಮಾಜವಾದದ ಸೋಲು, ಎನ್ನುವ ಸೊಲ್ಲು ಬರಿ ಗುಲ್ಲು


ಕಟ್ಟಕಡೆಯ ಜನರಧಿಕಾರವೇ ತಾನೆ, ಅಲ್ಲಮನ ಶೊನ್ಯಸಿಂಹಾಸನ

Comments